ತನ್ನ ಕೌಶಲದ ಬಗ್ಗೆ ಪ್ರಶ್ನೆಯನ್ನೆತ್ತಿದ್ದ ಮಾಧ್ಯಮಗಳ ವಿರುದ್ಧ ಟೀಕಾಪ್ರಹಾರ ನಡೆಸಿರುವ ಭಾರತ ತಂಡದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್, ಒಬ್ಬ ಮೂರ್ಖ ಅಥವಾ ಪೆದ್ದನಿಗೆ 13 ವರ್ಷಗಳ ವೃತ್ತಿ ಜೀವನದಲ್ಲಿ 350 ವಿಕೆಟುಗಳನ್ನು ಪಡೆಯಲು ಸಾಧ್ಯವೇ ಎಂದು ತಿರುಗೇಟು ನೀಡಿದ್ದಾರೆ.
ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಹರಭಜನ್ ಸಿಂಗ್ ಕೊನೆಯ ಇನ್ನಿಂಗ್ಸ್‌ನಲ್ಲಿ ಐದು ವಿಕೆಟುಗಳನ್ನು ಕಿತ್ತಿದ್ದರು.
ಮಾಧ್ಯಮಗಳ ವಿಮರ್ಶೆಯನ್ನು ನಾನು ಗೌರವಿಸುತ್ತೇನೆ. ಆದರೆ ಅದರಲ್ಲಿ ಸತ್ವ ಇರಬೇಕು. ಕಳೆದ ಎರಡು ವರ್ಷಗಳಿಂದ ಐಸಿಸಿ ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ ಅಗ್ರ ಹತ್ತರಲ್ಲಿರುವ ನನ್ನನ್ನು ಮೂರ್ಖ ಎನ್ನುವುದು ಎಷ್ಟರ ಮಟ್ಟಿಗೆ ಸರಿ?. ಹಾಗಾದರೆ ಒಬ್ಬ ಮೂರ್ಖನಿಂದ ಇಷ್ಟೆಲ್ಲಾ ಸಾಧನೆ ಮಾಡುವುದು ಸಾಧ್ಯವೇ ಎಂದು ಮರು ಪ್ರಶ್ನೆ ಹಾಕಿದ್ದಾರೆ.
13 ವರ್ಷ ದೇಶವನ್ನು ಪ್ರತಿನಿಧಿಸುವ ಮೂಲಕ 350 ವಿಕೆಟ್ ಪಡೆಯುವುದು ಸುಲಭದ ಮಾತಲ್ಲ. ಇದು ಒಬ್ಬ ಮೂರ್ಖನಿಂದ ಸಾಧ್ಯವೇ ಇಲ್ಲ ಎಂದು ಭಜ್ಜಿ ಖಾರವಾಗಿ ನುಡಿದರು.
ಈ ಮೊದಲು ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿನ ಬೌಲರುಗಳ ನೀರಸ ಪ್ರದರ್ಶನದ ಬಗ್ಗೆ ಮಾಧ್ಯಮಗಳು ಟೀಕಾಪ್ರಹಾರ ಮಾಡಿದ್ದವು. ಕೆಲವು ಮಾಧ್ಯಮಗಳು ಹರಭಜನ್ ಸಿಂಗ್, ಅಮಿತ್ ಮಿಶ್ರಾ ಮತ್ತು ಇಶಾಂತ್ ಶರ್ಮಾರನ್ನು ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಅಭಿನಯದ 'ತ್ರಿ ಈಡಿಯೆಟ್ಸ್' ಚಿತ್ರಕ್ಕೆ ಹೋಲಿಸಿದ್ದರು.
ಕ್ರಪೆ - ವೆಬ್ ದುನಿಯಾ
Subscribe to:
Post Comments (Atom)
No comments:
Post a Comment