ವಿಶ್ವದಾಖಲೆಯ ದ್ವಿಶತಕ ಬಾರಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ರನ್ನು ಕೊಂಡಾಡಿರುವ ನಾಯಕ ಮಹೇಂದ್ರ ಸಿಂಗ್ ಧೋನಿ, ಇದು ಅವರ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಪ್ರಮುಖವಾದುದು ಎಂದು ಹೇಳಿದರು.
ಸಚಿನ್ ದಾಖಲಿಸಿದ ಅಮೋಘ ದ್ವಿಶತಕದ ನೆರವಿನಿಂದ ಬುಧವಾರ ಗ್ವಾಲಿಯರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಎರಡನೇ ಪಂದ್ಯವನ್ನು 153 ರನ್ನುಗಳಿಂದ ವಶಪಡಿಸಿಕೊಂಡಿದ್ದ ಟೀಮ್ ಇಂಡಿಯಾ ಸರಣಿಯನ್ನು ಇನ್ನೂ ಒಂದು ಪಂದ್ಯ ಉಳಿದಿರುವಂತೆಯೇ 2-0ರ ಅಂತರದಲ್ಲಿ ವಶಪಡಿಸಿಕೊಂಡಿತ್ತು.
ಈ ಮೂಲಕ ಭಾರತ ಐಸಿಸಿ ರ‌್ಯಾಂಕಿಂಗ್ ಪಟ್ಟಿಯಲ್ಲಿ ತನ್ನ ನಂ.2 ಸ್ಥಾನ ಉಳಿಸಿಕೊಂಡಿತ್ತು.
ಸಚಿನ್-ದಿನೇಶ್ ಕಾರ್ತಿಕ್ ಆರಂಭದಲ್ಲೇ ಅತ್ಯುತ್ತಮವಾಗಿ ಆಡುವ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಇದರಿಂದಾಗಿ ತಂಡ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಸಫಲವಾಗಿತ್ತು.
ಯಾವ ರೀತಿ ಲಿಟ್ಲ್ ಮಾಸ್ಟರ್ ಇನ್ನಿಂಗ್ಸ್ ಬೆಳಿಸಿದರೋ ಅದು ಅದ್ಭುತವಾಗಿತ್ತು. ಅಂತಿಮ ಹಂತದಲ್ಲಿ ದಣಿವಿದ್ದರೂ ಅದನ್ನು ಲೆಕ್ಕಿಸದೇ ಬ್ಯಾಟ್ ಬೀಸಿದ ರೀತಿ ಅಮೋಘವಾಗಿತ್ತು. ಇದು ಅವರ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದಾಗಿತ್ತು ಎಂದವರು ಹೇಳಿದರು.
ಅದೇ ವೇಳೆ ಅತ್ಯುತ್ತಮ ಪ್ರತಿಭೆ ಹೊಂದಿದ್ದರಿಂದಲೇ ಯೂಸುಫ್‌ರನ್ನು ಅಗ್ರ ಕ್ರಮಾಂಕದಲ್ಲಿ ಆಡಿಸಲು ನಿರ್ಧರಿಸಲಾಯಿತು ಎಂದು ನಾಯಕ ಅಭಿಪ್ರಾಯಪಟ್ಟರು. ಈ ಮೂಲಕ ಕಳೆದುಕೊಂಡ ಆತ್ಮವಿಶ್ವಾಸ ಮರಳಿ ಪಡೆಯಲು ಯೂಸುಫ್‌ಗೆ ಸಹಕಾರಿಯಾಯಿತು ಎಂದು ಹೇಳಿದರು.
Subscribe to:
Post Comments (Atom)
No comments:
Post a Comment