ದಾಖಲೆ ಇರುವುದೇ ಅಳಿಸಿ ಹಾಕಲು ಹಾಗೂ ಹೊಸದನ್ನು ಬರೆಯಲು. ಆದ್ದರಿಂದ ನನ್ನ ಈ ಸಾಧನೆಯನ್ನು ಭಾರತದವರೇ ಮುರಿಯುವುದನ್ನು ನೋಡಲು ನಾನು ಇಷ್ಟಪಡುತ್ತೇನೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾವುಕರಾಗಿ ನುಡಿದಿದ್ದಾರೆ.
ಮಾತು ಮುಂದುವರಿಸಿದ ಅವರು ನಾನು ದೇವರಲ್ಲ, ನಿಮ್ಮಂತೆಯೇ ಒಬ್ಬ ಸಾಧಾರಣ ವ್ಯಕ್ತಿ ಎಂಬ ಮಾತನ್ನು ಪುನರುಚ್ಛಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ವಿಶ್ವದಾಖಲೆಯ ದ್ವಿಶತಕ ಬಾರಿಸಿದ್ದ ಸಚನ್ ತೆಂಡೂಲ್ಕರ್ ನೆರವಿನಿಂದ ಭಾರತ ಪಂದ್ಯವನ್ನು 153 ರನ್ ಅಂತರದಿಂದ ಗೆದ್ದುಕೊಂಡಿತ್ತಲ್ಲದೆ ಸರಣಿಯನ್ನು 2-0ರ ಅಂತರದಲ್ಲಿ ವಶಪಡಿಸಿಕೊಂಡಿತ್ತು.
ನನ್ನ ಮೇಲಿರುವ ಅಭಿಮಾನಿಗಳ ಅಪಾರ ಪ್ರೀತಿ ನನಗೆ ತಿಳಿದಿದೆ. ಆದ್ದರಿಂದಲೇ ನನ್ನನ್ನು ಅವರು ದೇವರು ಎಂದು ಉಲ್ಲೇಖಿಸುತ್ತಾರೆ. ಆದರೆ ನಾನು ದೇವರಲ್ಲ, ನಿಮ್ಮಂತೆಯೇ ಸಾಧಾರಣ ವ್ಯಕ್ತಿ ಎಂದು ಸಚಿನ್ ಪ್ರತಿಕ್ರಿಯೆ ನೀಡಿದ್ದಾರೆ.
ಕ್ರಿಕೆಟ್ ಮೇಲಿನ ಪ್ರೀತಿಯಿಂದಲೇ ನಾನು ಆಡುತ್ತೇನೇ ಹೊರತು ದಾಖಲೆಗಾಗಿ ಆಡುತ್ತಿಲ್ಲ. ನಾನು ನನ್ನ ಆಟವನ್ನು ಆನಂದಿಸುತ್ತಿದ್ದೇನೆ ಎಂದವರು ಸೇರಿಸಿದರು.
50 ಓವರುಗಳ ವರೆಗೆ ಬ್ಯಾಟಿಂಗ್ ನಡೆಸಲು ಸಾಧ್ಯವಾಗಿರುವುದರಿಂದ ನಾನು ಹೆಮ್ಮೆ ಪಡುತ್ತೇನೆ. ಇನ್ನೊಂದು 50 ಓವರುಗಳಿಗೆ ಬ್ಯಾಟಿಂಗ್ ಮುಂದುವರಿಸಲು ನಾನು ಇಷ್ಟಪಡುತ್ತಿದ್ದೆ. ಆ ಮೂಲಕ ಫಿಟ್‌ನೆಸ್ ಸಾಬೀತುಪಡಿಸಿದ್ದು, ಇದನ್ನೇ ಮುಂದುವರಿಸುವ ವಿಶ್ವಾಸ ತನಗಿದೆ ಎಂದವರು ಹೇಳಿದರು.
ಅದೇ ವೇಳೆ ತನ್ನ ವಿಶ್ವದಾಖಲೆಯ ಶತಕದ ಸಾಧನೆಯನ್ನು ದೇಶದ ಜನರಿಗೆ ಸಚಿನ್ ಸಮರ್ಪಿಸಿದ್ದಾರೆ.
Subscribe to:
Post Comments (Atom)
No comments:
Post a Comment