ಸಿಬಿಐ ತನಿಖೆಗೆ ಯಾರ ಅಪ್ಪಣೆಯೂ ಬೇಡ
ರಾಜ್ಯ ಅಥವಾ ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ನೇರವಾಗಿ ಸಿಬಿಐ ತನಿಖೆಗೆ ಆದೇಶಿಸುವ ಅಧಿಕಾರ ಉನ್ನತ ನ್ಯಾಯಾಲಯ ಗಳಿಗಿದೆ ಎಂಬ ಮಹತ್ವದ ತೀರ್ಪನ್ನು ಸುಪ್ರೀಂರ್ಟ್ ಬುಧವಾರ ನೀಡಿದೆ.
ನವದೆಹಲಿ: ರಾಜ್ಯ ಅಥವಾ ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ನೇರವಾಗಿ ಸಿಬಿಐ ತನಿಖೆಗೆ ಆದೇಶಿಸುವ ಅಧಿಕಾರ ಉನ್ನತ ನ್ಯಾಯಾಲಯ ಗಳಿಗಿದೆ ಎಂಬ ಮಹತ್ವದ ತೀರ್ಪನ್ನು ಸುಪ್ರೀಂರ್ಟ್ ಬುಧವಾರ ನೀಡಿದೆ.
ಆದರೆ, ಅತೀ ಅಪರೂಪದ ಸಂದರ್ಭ ಮತ್ತು ವಿಶೇಷ ಪ್ರಕರಣ ಗ ಳಲ್ಲಿ ಮಾತ್ರ ಹೈಕೋರ್ಟ್, ಸುಪ್ರೀಂ ಕೋರ್ಟ್ ಜಾಗರೂಕತೆಯಿಂದ ಈ ಅಧಿಕಾರ ಬಳಸಬಹುದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲ ಕೃಷ್ಣನ್ ನೇತೃತ್ವದ ಐವರು ನ್ಯಾಯ ಮೂರ್ತಿಗಳ ಸಂವಿಧಾನ ಪೀಠ ಹೇಳಿದೆ. ಈ ತೀರ್ಪು ಉನ್ನತ ನ್ಯಾಯಾಲಯಗಳ ಸಾಂವಿಧಾನಿಕ ಮಹತ್ವವನ್ನು ಎತ್ತಿ ಹಿಡಿದಿದೆ.
ನ್ಯಾಯಮೂರ್ತಿಗಳಾದ ಆರ್.ವಿ. ರವೀಂದ್ರನ್, ಡಿ.ಕೆ. ಜೈನ್, ಪಿ. ಸದಾಶಿವಂ ಹಾಗೂ ಜೆ.ಎಂ. ಪಂಚಾಲ್ ಅವರನ್ನು ಒಳಗೊಂಡ ಪೀಠ ಒಮ್ಮತದ ತೀರ್ಪು ನೀಡಿದ್ದು, ರಾಷ್ಟ್ರ- ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಬೀರುವಂತಹ ಅಪರೂಪದ ಪ್ರಕರಣ ಗಳಲ್ಲಿ ಮಾತ್ರ ಉನ್ನತ ನ್ಯಾಯಾಲಯ ಗಳು ಈ ಅಧಿಕಾರ ಬಳಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಮಾಮೂಲು ಪ್ರಕರಣಗಳಿಗೂ ತೀರ್ಪು ಅನ್ವಯಿಸಿದರೆ ಸಿಬಿಐಗೆ ಹೊರೆ ವಿಪರೀತವಾಗಲಿದೆ ಎಂದು ಹೇಳಿರುವ ನ್ಯಾಯಪೀಠ, ಸಂವಿಧಾನದ 21ನೇ ಕಲಮಿನ ಅನ್ವಯ ನಾಗರಿಕರ ಮೂಲ ಭೂತ ಹಕ್ಕುಗಳ ರಕ್ಷಣೆ ಹೊಣೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಮೇಲಿದೆ ಎಂದು ವಿವರಿಸಿದೆ. ಆದರೆ, ಯಾವುದೇ ಪ್ರಕರಣ ಕುರಿತು ಸಿಬಿಐ ತನಿಖೆಗೆ ಆದೇಶಿಸುವ ಮುನ್ನ ಅದರ ಅಗತ್ಯ ಕುರಿತು ನ್ಯಾಯಾಲಯಗಳು ಮನವರಿಕೆ ಮಾಡಿಕೊಳ್ಳಬೇಕು ಎಂದೂ ತೀರ್ಪಿನಲ್ಲಿ ಹೇಳಲಾಗಿದೆ.
ಉನ್ನತ ನ್ಯಾಯಾಲಯಗಳ ಅಧಿ ಕಾರ ವ್ಯಾಪ್ತಿ ಕುರಿತು ಡಿಸೆಂಬರ್ 11ರಂದು ವಾದ-ಪ್ರತಿವಾದ ಕೇಳಿದ ಬಳಿಕ ಸುಪ್ರೀಂ ಕೋರ್ಟ್ ತೀರ್ಪನ್ನು ಕಾದಿರಿಸಿತ್ತು. 11 ಮಂದಿ ಟಿಎಂಸಿ ಕಾರ್ಯಕರ್ತರ ಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಕೊಲ್ಕತ್ತಾ ಹೈಕೋರ್ಟ್ 2001ರ ಏಪ್ರಿಲ್ 7ರಂದು ತೀರ್ಪು ನೀಡಿತ್ತು ಈ ತೀರ್ಪಿನ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅಗರವಾಲ್, ಸಂವಿಧಾನ ಪೀಠಕ್ಕೆ ವರ್ಗಾಯಿಸಿದ್ದರು. ಇದೇ ರೀತಿ ಪ್ರಶ್ನೆಗೆ ಸಂಬಂಧಿಸಿದ ಇನ್ನೂ ಹಲವು ಅರ್ಜಿಗಳನ್ನು ಪೀಠ ಒಟ್ಟಿಗೆ ವಿಚಾರಣೆ ನಡೆಸಿತು.
ಉನ್ನತ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿ ಕುರಿತು ಡಿಸೆಂಬರ್ 11ರಂದು ವಾದ-ಪ್ರತಿವಾದ ಕೇಳಿದ ಬಳಿಕ ಸುಪ್ರೀಂ ಕೋರ್ಟ್ ತೀರ್ಪನ್ನು ಕಾದಿರಿಸಿತ್ತು.
ರಾಜ್ಯದ ಆಕ್ಷೇಪ?
ಕೇಂದ್ರ ತನಿಖಾ ದಳ (ಸಿಬಿಐ) ಯಾವುದೇ ಪ್ರಕರಣದ ತನಿಖೆ ನಡೆಸಬೇಕಾದರೂ ಸಂಬಂಧಪಟ್ಟ ರಾಜ್ಯದ ಅನುಮತಿ ಪಡೆಯಬೇಕಾದ್ದು ಕಡ್ಡಾಯ ಎಂಬುದು ಇದುವರೆಗೆ ಪಾಲಿಸಿಕೊಂಡು ಬಂದಿರುವ ನಿಯಮ.
ನವದೆಹಲಿ: ಕೇಂದ್ರ ತನಿಖಾ ದಳ (ಸಿಬಿಐ) ಯಾವುದೇ ಪ್ರಕರಣದ ತನಿಖೆ ನಡೆಸಬೇಕಾದರೂ ಸಂಬಂಧಪಟ್ಟ ರಾಜ್ಯದ ಅನುಮತಿ ಪಡೆಯಬೇಕಾದ್ದು ಕಡ್ಡಾಯ ಎಂಬುದು ಇದುವರೆಗೆ ಪಾಲಿಸಿಕೊಂಡು ಬಂದಿರುವ ನಿಯಮ.
ಆದರೆ, ಬುಧವಾರದ ಸುಪ್ರೀಂ ಕೋರ್ಟ್ ತೀರ್ಪು ಕೆಲ ಅಪರೂಪದ ಸಂದರ್ಭದಲ್ಲಿ ರಾಜ್ಯದ ಒಪ್ಪಿಗೆ ಇಲ್ಲದೆಯೂ ನ್ಯಾಯಾಲಯದ ಆದೇಶದ ಮೇಲೆ ದೇಶದ ಅತ್ಯುನ್ನತ ತನಿಖಾ ಸಂಸ್ಥೆ ತನಿಖೆ ಕೈಗೆತ್ತಿಕೊಳ್ಳಬಹುದು ಎಂದು ಹೇಳಿದೆ.
ಪ್ರತೀ ಪ್ರಮುಖ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಾಗಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಂಘರ್ಷ ಸಾಮಾನ್ಯ. ಅದರಲ್ಲೂ ವಿಭಿನ್ನ ಪಕ್ಷಗಳ ಸರ್ಕಾರವಿದ್ದಾಗ ಈ ಮಾತು ಅಕ್ಷರಶಃ ಸತ್ಯ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಸಿಬಿಐ ಬಳಸಿಕೊಂಡು ತನ್ನ ಎದುರಾಳಿಗಳನ್ನು ಬಲಿ ಹಾಕುತ್ತದೆ ಎಂಬ ಆರೋಪವೂ ಉಂಟು.
ಸಿಬಿಐ ಅಸ್ತಿತ್ವಕ್ಕೆ ಬಂದಿರುವುದು ‘ದೆಹಲಿ ವಿಶೇಷ ಪೊಲೀಸ್ ಕಾಯ್ದೆ’ಯಡಿ. ಯಾವುದೋ ಒಂದು ರಾಜ್ಯದ ಕಾಯ್ದೆಯಡಿ ಸ್ಥಾಪನೆಯಾದ ತನಿಖಾ ಸಂಸ್ಥೆಗೆ ಮತ್ತೊಂದು ರಾಜ್ಯದ ತನಿಖೆ ವಹಿಸುವುದು ಎಷ್ಟು ಸೂಕ್ತ ಎಂಬ ಪ್ರಶ್ನೆಯನ್ನು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಅನೇಕ ಸಂದರ್ಭಗಳಲ್ಲಿ ಎತ್ತಿವೆ.
ಪೊಲೀಸ್ ರಾಜ್ಯಕ್ಕೆ ಸಂಬಂಧಪಟ್ಟ ವಿಷಯ. ಹೀಗಾಗಿ ನಮ್ಮ ವ್ಯಾಪ್ತಿಯಲ್ಲಿ ಹೊರಗಿನವರು ತಲೆ ಹಾಕಲು ಬಿಡುವುದಿಲ್ಲ ಎಂದು ಪ್ರತಿಪಾದಿಸಿವೆ. ಈ ವಿಷಯ ವಿಧಾನ ಮಂಡಲದಲ್ಲೂ ಸಾಕಷ್ಟು ಚರ್ಚೆಗೆ ವಸ್ತುವಾಗಿದೆ. ‘ರಾಜ್ಯದ ಅನುಮತಿ ಇಲ್ಲದೆ ಸಿಬಿಐ ತನಿಖೆಗೆ ಅವಕಾಶವಿಲ್ಲ’ ಎಂಬ ಅಧಿಸೂಚನೆಗಳೂ ಪ್ರಕಟವಾಗಿದೆ.
ಈಚೆಗೆ ಅಕ್ರಮ ಗಣಿಗಾರಿಕೆ ಕುರಿತಂತೆ ಸಿಬಿಐ ತನಿಖೆಗೆ ಅನುಮತಿ ನೀಡುವಂತೆ ಕೇಂದ್ರ ಗಣಿ ಮತ್ತು ಭೂವಿಜ್ಞಾನ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದರೆ, ರಾಜ್ಯ ಸರ್ಕಾರ ಇದಕ್ಕೆ ಅನುಮತಿ ಕೊಡಲಿಲ್ಲ ಎಂಬುದು ಇತಿಹಾಸ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯಗಳು ಅನೇಕ ಸಂದರ್ಭಗಳಲ್ಲಿ ಇಂತಹದೇ ರಾಜಕೀಯ ಕಾರಣಗಳಿಗೆ ಸಿಬಿಐ ತನಿಖೆಗೆ ಆಕ್ಷೇಪ ಮಾಡಿವೆ.
ಪ್ರಜಾವಾಣಿ ವಾರ್ತೆ
Subscribe to:
Post Comments (Atom)
No comments:
Post a Comment