‘ಬರಗಾಲದಲ್ಲಿ ಮಗ ಉಣ್ಣೋದು ಕಲಿತ’ ಎನ್ನುವ ಗಾದೆ ಮಾತಿ ನಂತೆ ಕರ್ನಾಟಕ ಸರ್ಕಾರ ಆರ್ಥಿಕ ಮುಗ್ಗಟಿನಂಥ ಸಂದರ್ಭದಲ್ಲಿ ಅತಿಗಣ್ಯ ವ್ಯಕ್ತಿಗಳ ಬಳಕೆಗೆ ದುಬಾರಿ ಬೆಲೆಯ ಕಾರುಗಳನ್ನು ಖರೀದಿಸುತ್ತಿದೆ.
ನವದೆಹಲಿ: ‘ಬರಗಾಲದಲ್ಲಿ ಮಗ ಉಣ್ಣೋದು ಕಲಿತ’ ಎನ್ನುವ ಗಾದೆ ಮಾತಿ ನಂತೆ ಕರ್ನಾಟಕ ಸರ್ಕಾರ ಆರ್ಥಿಕ ಮುಗ್ಗಟಿನಂಥ ಸಂದರ್ಭದಲ್ಲಿ ಅತಿಗಣ್ಯ ವ್ಯಕ್ತಿಗಳ ಬಳಕೆಗೆ ದುಬಾರಿ ಬೆಲೆಯ ಕಾರುಗಳನ್ನು ಖರೀದಿಸುತ್ತಿದೆ.
ಒಂದು ಕಡೆ ಆಡಳಿತ ಯಂತ್ರವು, ಪ್ರವಾಹಪೀಡಿತ ಉತ್ತರ ಕರ್ನಾಟಕದ ಭಾಗದಲ್ಲಿ ಪರಿಹಾರ ಕಾರ್ಯಕ್ಕಾಗಿ ಸಾರ್ವಜನಿಕರಿಂದ ನಿಧಿ ಸಂಗ್ರಹಣೆ ಮಾಡುತ್ತಿದ್ದರೆ, ಇನ್ನೊಂದೆಡೆ ರಾಜಧಾನಿ ದೆಹಲಿಯಲ್ಲಿ ರಾಜ್ಯದ ನಾಯಕರಿಗೆ ಓಡಾಡಲು ದುಬಾರಿ ಕಾರುಗಳ ಖರೀದಿಯಲ್ಲಿ ನಿರತವಾಗಿದೆ!
ರಾಜ್ಯದಿಂದ ದೆಹಲಿಗೆ ತೆರಳುವ ಅತಿಗಣ್ಯ ವ್ಯಕ್ತಿಗಳ ಓಡಾಟಕ್ಕೆ ಈಗಾಗಲೇ ಬಿಜೆಪಿ ನೇತೃತ್ವದ ಸರ್ಕಾರ ರೂ 1 ಕೋಟಿ ಖರ್ಚು ಮಾಡಿ ದುಬಾರಿ ಬೆಲೆಯ 6 ಕಾರುಗಳನ್ನು ಖರೀದಿಸಿದೆ.
ವಿಶೇಷವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಕೆ ಗೆಂದೇ ಸುಮಾರು 23 ಲಕ್ಷ ರೂಪಾಯಿ ಮೌಲ್ಯದ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ)-ಹೊಂಡಾ ಸಿಆರ್‌ವಿ ಖರೀದಿಸಲಾಗಿದೆ. ಇನ್ನು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರ ಓಡಾಟಕ್ಕೆ ರೂ 24 ಲಕ್ಷ ಬೆಲೆಯ ಟೊಯೋಟಾ ಕ್ಯಾಮ್ರಿಯನ್ನು ಖರೀದಿಸಲಾಗಿದೆ.
ಇಷ್ಟೇ ಅಲ್ಲ ರಾಜಧಾನಿಗೆ ಭೇಟಿ ನೀಡಿದಾಗ ಕರ್ನಾಟಕ ಭವನದ ಹಿರಿಯ ಅಧಿಕಾರಿಗಳು, ಸಂಸದರು ಹಾಗೂ ಸಚಿವರ ನಿತ್ಯದ ಬಳಕೆಗೆ ಸರ್ಕಾರವು ತಲಾ ರೂ 7.5 ಲಕ್ಷ ಮೌಲ್ಯದ 7 ಮಾರುತಿ ಸುಜುಕಿ-sx4ಖರೀದಿಸಿದೆ.
ಈಗಾಗಲೇ ಕರ್ನಾಟಕ ಭವನದಲ್ಲಿ ಅತಿಗಣ್ಯ ವ್ಯಕ್ತಿಗಳ ಓಡಾಟಕ್ಕೆ 18 ಅಂಬಾಸಿಡರ್ ಕಾರುಗಳು ಇವೆ. ಇವುಗಳಲ್ಲಿ ಬಹುತೇಕ ಹಳೆಯದಾಗಿದ್ದು, ನಿರ್ವಹಣೆ ಮಾಡುವುದು ದುಬಾರಿ ಕೆಲಸವಾಗಿದೆ. ಹಾಗಾಗಿ ಸರ್ಕಾರವು ಇವುಗಳನ್ನು ಬದಲಿಗೆ ಹೊಸ ವಾಹನಗಳನ್ನು ಖರೀದಿಸಲು ನಿರ್ಧರಿಸಿದೆ ಎಂದು ಸರ್ಕಾರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಅತಿಗಣ್ಯ ವ್ಯಕ್ತಿಗಳಿಗೆ ಇರುವ ‘ಸುರಕ್ಷತಾ’ ನಿಯಮದಂತೆ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗಾಗಿ ಪ್ರತಿಯೊಂದರಲ್ಲೂ 6 ಏರ್‌ಬ್ಯಾಗ್ ಇರುವ ಕಾರುಗಳನ್ನು ಖರೀದಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ವಾರ್ತೆ
Subscribe to:
Post Comments (Atom)
No comments:
Post a Comment