ಮಂಗಳೂರು: ರಾಜ್ಯ ಸರಕಾರ ಗೋಹತ್ಯೆ ನಿಷೇಧ ಕಾನೂನು ತರಲು ಹೊರಟಿದ್ದು ಇದರ ಹಿಂದೆ ಕುಮ್ಮಕ್ಕು ಇದೆ. ಕಾನೂನನ್ನು ಹಿಂದಕ್ಕೆ ಪಡೆ ಯದಿದ್ದಲ್ಲಿ ಹೋರಾಟ ಮಾಡಲಾಗು ವುದು ಎಂದು ಎಚ್ಚರಿಕೆ ನೀಡಿದವರು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಬಣ)ದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ್.
ಅವರು ನಿನ್ನೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆ ಯುತ್ತಿದೆ. ದಲಿತರಿಗಿರುವ ಮೀಸಲಾತಿ ಯನ್ನು ಇತರ ವರ್ಗದ ಜನ ನಕಲಿ ದಾಖಲೆ ನೀಡಿ ಬಳಸು ತ್ತಿದ್ದಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬುದ್ಧ ಪೂರ್ಣಿಮೆಯಂದು ಸರಕಾರಿ ರಜೆ ಘೋಷಿಸಬೇಕು, ರಡ್ಡಿ ಸಹೋದರರ ಮೇಲಿನ ಪ್ರಕರಣವನ್ನು ವಾಪಸ್ ಪಡೆದಂತೆ ದಲಿತರ ಪರವಾಗಿ ಹೋರಾಡಿ ಕೇಸುಗಳನ್ನು ಎದುರಿಸುತ್ತಿರುವ ನಾಯಕರ ಮೇಲಿನ ಪ್ರಕರಣವನ್ನು ವಾಪಸ್ ಪಡೆಯಬೇಕು . ಹಾಗೂ ಇತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫೆ.26 ರಿಂದ ರಾಜ್ಯಾದ್ಯಂತ ತಾಲೂಕು ಮಟ್ಟದಲ್ಲಿ ಅನಿರ್ಧಿಷ್ಠಾವಧಿ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.
Feb 22, 2010
Subscribe to:
Post Comments (Atom)
No comments:
Post a Comment