VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 22, 2010

ಖಾಝಿಯದ್ದು ಕೊಲೆಯೂ ಅಲ್ಲ; ಆತ್ಮಹತ್ಯೆಯೂ ಅಲ್ಲ!ಸ್ಥಳೀಯರ ಮಾಹಿತಿ

ಮಂಗಳೂರು: ಖಾಝಿ ಚೆಂಬರಿಕ್ಕ ಅಬ್ದುಲ್ಲಾ ಮುಸ್ಲಿಯಾರ್‌ರ ಸಾವು ಕೊಲೆಯೂ ಅಲ್ಲ; ಆತ್ಮಹತ್ಯೆಯೂ ಅಲ್ಲ. ಅದೊಂದು ಅನಿರೀಕ್ಷಿತ ಸಾವು. ಇಂತಹ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ.

ಚೆಂಬರಿಕ್ಕ ಮುಸ್ಲಿಯಾರ್‌ ಕಳೆದ ಸೋಮವಾರ ತಮ್ಮ ಊರಿನಲ್ಲೇ ಮೃತಪಟ್ಟಿದ್ದು ಅವರ ಶವ ಕಡಲ ಬದಿಯಲ್ಲಿ ಸಿಕ್ಕಿದ್ದು ಅನೇಕ ಊಹಾ ಪೋಹಗಳಿಗೆ ಕಾರಣವಾಗಿತ್ತು. ಅವರ ಅಭಿಮಾನಿಗಳು ಇದೊಂದು ಕೊಲೆ ಎನ್ನುತ್ತಿದ್ದರೆ, ವಿರೋಧಿಗಳು ಆತ್ಮಹತ್ಯೆ ಎನ್ನುತ್ತಿದ್ದಾರೆ. ಆದರೆ ಇವೆರಡೂ ಊಹಾಪೋಹಗಳನ್ನು ಅಲ್ಲಗಳೆ ಯುವ ಸ್ಥಳೀಯರು ಇದೊಂದು ಅನಿರೀಕ್ಷಿತ ಸಾವು ಎನ್ನುತ್ತಾರೆ.

ಖಾಝಿಯವರ ಮೃತದೇಹವಿದ್ದ ಸ್ಥಳದಲ್ಲಿ ಬಂಡೆ ಕಲ್ಲೊಂದು ಇದ್ದು ಅದರ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆನ್ನಲಾಗುತ್ತಿದೆ. ಆದರೆ ಅವರಿಗೆ ನಡೆದಾಡಲೂ ಅಸಾಧ್ಯ ವಾಗಿತ್ತು. ಹೀಗಿರುವಾಗ ಅದರ ಮೇಲೆ ಏರುವುದು ಅಸಾಧ್ಯ. ಅವರನ್ನು ಮೇಲಿಂದ ದೂಡಿ ಹಾಕಿ ಕೊಲೆ ಗೈಯ್ಯಲಾಗಿದೆ ಎಂಬ ಅನುಮಾನ ಅಭಿಮಾನಿಗಳದ್ದಾಗಿದೆ. ಆದರೆ ಇದನ್ನು ಸ್ಥಳೀಯರು ಅಲ್ಲಗಳೆಯುವುದರ ಜೊತೆಗೆ ಆತ್ಮಹತ್ಯೆಯನ್ನೂ ನಿರಾಕ ರಿಸುತ್ತಾರೆ. ಹಿಂದೆ ಖಾಝಿಯವರ ತಂದೆಯವರು ಇದೇ ಬಂಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು ಎಂದು ಹೇಳಲಾಗಿದ್ದು, ಅಸೌಖ್ಯದಿಂದ ಬಳಲುತ್ತಿದ್ದ ಖಾಝಿಯವರು ಬೇಸರದಿಂದ ತಂದೆಯ ನೆನಪಿನಲ್ಲಿ ತಾವೇ ಪ್ರಯತ್ನ ಪಟ್ಟು ಬಂಡೆ ಏರಿರಬಹುದು. ಖಾಝಿಯಂತಹ ಮಹಾನ್‌ ವ್ಯಕ್ತಿಗೆ ಅಂತಹ ಶಕ್ತಿ ಬರುವುದು ಸ್ವಾಭಾವಿಕ. ಇದೇ ಸ್ಥಿತಿಯೂ ಖಾಝಿಯವರದ್ದಾಗಿದ್ದು ಬಂಡೆಯ ಮೇಲೇರಿ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿರಬಹುದೆನ್ನಲಾಗಿದೆ.

ಶವ ಮಹಜರು ಮರೀಕ್ಷೆಯ ವರದಿಯಂತೆ ಅವರ ಹೊಟ್ಟೆಯೊಳಗೆ ನೀರಿದ್ದು ಅದೇ ಸಾವಿಗೆ ಕಾರಣ. ಆದರೆ ಅವರನ್ನು ಬಲವಂತದಿಂದ ಮುಳುಗಿಸಿದ ಕುರುಹು ಇಲ್ಲವೆನ್ನಲಾಗಿದೆ. ಖಾಝಿ ಸಾವಿಗೀಡಾಗಿ ಇಂದಿಗೆ ಒಂದು ವಾರ ಪೂರ್ತಿಯಾಗಿದೆ. ಆದರೆ ಅವರ ಸಾವಿನ ನಿಗೂಢತೆ ಇನ್ನೂ ಬಯಲಾಗದೆ ದಿನಕ್ಕೊಂದು ಊಹಾಪೋಹ, ಕಟ್ಟುಕತೆಗಳು ಹುಟ್ಟುತ್ತಲೇ ಇವೆ. ಇದು ಖಾಝಿಯವರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಇಂದು ಪ್ರತಿಭಟನೆ

ಖಾಝಿ ಚೆಂಬರಿಕ್ಕ ಅಬ್ದುಲ್ಲಾ ಮುಸ್ಲಿಯಾರ್‌ರ ಅಸಹಜ ಸಾವು ಸಂಭವಿಸಿ ಇಂದಿಗೆ ಒಂದು ವಾರ ಪೂರ್ತಿಯಾಗುತ್ತಿದೆ. ಅವರ ಅಸಹಜ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಇಂದು ಬೆಳಿಗ್ಗೆ 10.30ಕ್ಕೆ ಮುಸ್ಲಿಂ ಸೆಂಟ್ರಲ್‌ ಕಮಿಟಿ ದ.ಕ. ಜಿಲ್ಲಾಧಿ ಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಿದೆ.



source: jayakirana

No comments: