VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 20, 2010

ವಿಜಯ್ ಹಜಾರೆ ಟ್ರೋಫಿ; ಕರ್ನಾಟಕಕ್ಕೆ ದ್ರಾವಿಡ್ ನಾಯಕತ್ವ

ಮುಂಬರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಭಾಗವಹಿಸುವ ಕರ್ನಾಟಕ ತಂಡವನ್ನು 'ವಾಲ್' ಖ್ಯಾತಿಯ ಹಿರಿಯ ಅನುಭವಿ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಮುನ್ನಡೆಸಲಿದ್ದಾರೆ.

ಭಾರತದ ದೇಶಿಯ ಟೂರ್ನಿಯಲ್ಲಿ ಅತೀ ಪ್ರಾಮುಖ್ಯವೆನಿಸಿರುವ ಈ ಟೂರ್ನಮೆಂಟ್ ಫೆಬ್ರವರಿ 23ರಿಂದ ಬರೋಡ ಮತ್ತು ಅಹಮಬಾದ್‌ನಲ್ಲಿ ನಡೆಯಲಿದೆ.

ಪ್ರಸಕ್ತ ಋತುವಿನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿರುವ ಕರ್ನಾಟಕ ತನ್ನ ಕ್ವಾರ್ಟರ್ ಹಣಾಹಣಿಯಲ್ಲಿ ಹರಿಯಾಣ ತಂಡವನ್ನು ಎದುರಿಸಲಿದೆ. ಈ ಪಂದ್ಯ ಬರೋಡದಲ್ಲಿ ನಡೆಯಲಿದೆ.

ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ವೇಳೆ ಗಾಯಗೊಂಡಿದ್ದ ದ್ರಾವಿಡ್ ಇದೀಗ ಪೂರ್ಣವಾಗಿ ಚೇತರಿಸಿಕೊಂಡಿದ್ದು, ಪ್ರಥಮ ದರ್ಜೆ ಕ್ರಿಕೆಟ್ ಆಡುವ ಮೂಲಕ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋಗುವ ನಿರೀಕ್ಷೆಯಲ್ಲಿದ್ದಾರೆ.

ಗಾಯದಿಂದಾಗಿ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ದ್ರಾವಿಡ್ ಗುರುವಾರ ಮುಕ್ತಾಯಗೊಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಕೂಡಾ ಪಾಲ್ಗೊಂಡಿರಲಿಲ್ಲ. ಅನುಭವಿ ದ್ರಾವಿಡ್ ಆಗಮನದಿಂದಾಗಿ ತಂಡದ ಬ್ಯಾಟಿಂಗ್ ವಿಭಾಗ ಇನ್ನಷ್ಟು ಬಲಗೊಂಡಿದ್ದು, ಯುವ ಆಟಗಾರರಿಗೆ ಉತ್ತೇಜನ ನೀಡಲಿದ್ದಾರೆ.

ಇತ್ತೇಚೆಗಷ್ಟೇ ನಡೆದ ದಕ್ಷಿಣ ವಲಯದ ಸುಬ್ಬಯ್ಯ ಪಿಳ್ಳೈ ಟ್ರೋಫಿ ಟೂರ್ನಮೆಂಟ್‌ನಲ್ಲಿ ವಿನಯ್ ಕುಮಾರ್ ನೇತೃತ್ವದಲ್ಲಿ ಭಾಗವಹಿಸಿದ ಕರ್ನಾಟಕ ತಂಡ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿತ್ತು. ರಾಬಿನ್ ಉತ್ತಪ್ಪ, ಗಣೇಶ್ ಸತೀಶ್, ಮನೀಷ್ ಪಾಂಡೆ ಮತ್ತು ವಿನಯ್ ಕುಮಾರ್ ಭರ್ಜರಿ ಫಾರ್ಮ್‌ನಲ್ಲಿರುವುದು ಕರ್ನಾಟಕದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ತಂಡ ಇಂತಿದೆ: ರಾಹುಲ್ ದ್ರಾವಿಡ್ (ನಾಯಕ), ರಾಬಿನ್ ಉತ್ತಪ್ಪ, ಗಣೇಶ್ ಸತೀಶ್, ಮನೀಷ್ ಪಾಂಡೆ, ಅಮಿತ್ ವರ್ಮಾ, ಸಿ.ಎಂ. ಗೌತಮ್, ಆರ್. ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಉದಿತ್ ಬಿ ಪಟೇಲ್, ಕೆ.ಪಿ. ಅಪ್ಪಣ್ಣ, ರಾಜು ಭಟ್ಕಳ್, ಕೆ.ಎಲ್. ರಾಹುಲ್, ಎಸ್. ಅರವಿಂದ್, ಸ್ಟುವರ್ಟ್ ಬಿನ್ನಿ, ಎಸ್.ಎಲ್. ಅಕ್ಷಯ್, ಆರ್. ಜೊನಾಥನ್.

ಕೋಚ್: ಕೆ. ಸನತ್ ಕುಮಾರ್
ಸಹಾಯಕ ಕೋಚ್: ಸೋಮಶೇಖರ ಶಿರಗುಪ್ಪಿ.

ಕ್ರಪೆ - ವೆಬ್ ದುನಿಯಾ

No comments: