ಇಂದೋರ್, ಶುಕ್ರವಾರ, 19 ಫೆಬ್ರವರಿ : ಇಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಾನೇ ಬೇರೆ, ನನ್ನ ಸ್ಟೈಲೇ ಬೇರೆ ಎಂಬಂತೆ ತಾವೇ ಸ್ವತಃ ಸೈಕಲ್ ಏರಿ ಸುಮಾರು 1ಕಿ.ಮೀ.ಸವಾರಿ ನಡೆಸಿ ಸಮಾವೇಶ ನಡೆಯುವ ಸ್ಥಳ ತಲುಪುವ ಮೂಲಕ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.
ಯಡಿಯೂರಪ್ಪನವರು ಸೈಕಲ್ ಮೇಲೆ ಕೂರುತ್ತಿದ್ದಂತೆಯೇ ಸುತ್ತಮುತ್ತ ಇದ್ದವರು ಏನ್ ಸಾರ್, ನೀವು ಸೈಕಲ್‌ನಲ್ಲಿ...ಎಂದು ರಾಗ ಎಳೆಯುತ್ತಿದ್ದಂತೆಯೇ ಅಯ್ಯೋ, ಸೈಕಲ್ ಹೊಡೆದೇ ಸಿಎಂ ಆಗಿರೋದು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಈ ಎಲ್ಲಾ ಕಷ್ಟ ತಿಳಿದೇ ಶಾಲಾ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಉಚಿತ ಸೈಕಲ್ ನೀಡಿದ್ದು ಎಂದು ಹೇಳಿದರು. ಹೀಗೆ ಮಾತನಾಡುತ್ತಿದ್ದಂತೆಯೇ ಸೈಕಲ್ ಏರಿ ಹೊರಟೇ ಬಿಟ್ಟರು. ಆದರೆ ಸೈಕಲ್ ನಿಲ್ಲಿಸಲು ಬ್ರೇಕ್ ಹಾಕಿದಾಗ...ಅದರಲ್ಲಿ ಬ್ರೇಕ್ ಇರಲಿಲ್ಲವಾಗಿತ್ತು!
ಬ್ರೇಕ್ ಇಲ್ಲದ್ದನ್ನು ಕಂಡು ಗಾಬರಿಗೊಂಡ ಮುಖ್ಯಮಂತ್ರಿಗಳು, ಅಯ್ಯೋ ಇದೇನ್ರಿ...ಸೈಕಲ್‌ಗೆ ಬ್ರೇಕ್ ಇಲ್ಲವಲ್ಲ ಎಂದು ಉದ್ಗರಿಸಿದ್ದರು. ಅಂತೂ ಕೊನೆಗೂ 'ಸರ್ಕಸ್' ಮಾಡಿ ಸೈಕಲ್ ನಿಲ್ಲಿಸಿದ್ದರು.
source: webdunia
Feb 19, 2010
Subscribe to:
Post Comments (Atom)
No comments:
Post a Comment