

ಶುಕ್ರವಾರ, 19 ಫೆಬ್ರವರಿ :ಡಾ.ವಿಷ್ಣುವರ್ಧನ್ ಅವರ 200ನೇ ಹಾಗೂ ಕೊನೆಯ ಚಿತ್ರ ಆಪ್ತರಕ್ಷಕ ಚಿತ್ರ ಶುಕ್ರವಾರ ಬಿಡುಗಡೆಗೊಂಡಿದ್ದು, ರಾಜ್ಯಾದ್ಯಂತ ಎಲ್ಲೆಲ್ಲೊ ಅಭಿಮಾನಿಗಳ ಹರ್ಷೋದ್ಗಾರ, ಚಿತ್ರಮಂದಿರಗಳಲ್ಲಿ ಟಿಕೆಟ್‌ಗಳಿಗಾಗಿ ಪರದಾಟ ದೃಶ್ಯ ಸಾಮಾನ್ಯವಾಗಿತ್ತು.
ಚಿತ್ರದ ಬಿಡುಗಡೆಯ ಹಿನ್ನೆಲೆಯಲ್ಲಿ ಚಿತ್ರಮಂದಿರದ ನರ್ತಕಿಯಲ್ಲಿ ಇಂದು ಬೆಳಿಗ್ಗಿನಿಂದಲೇ ಸಾವಿರಾರು ಜನರು ಜಮಾಯಿಸಿದ್ದರು. 250ರೂ. ನಿಂದ 3,000 ಸಾವಿರ ರೂ.ಗಳವರೆಗೆ ನೀಡಿ ಬ್ಲಾಕ್ ಟಿಕೆಟ್ ನೀಡಿ ಚಿತ್ರ ನೋಡಿದವರು ಹಲವರು. ತುಮಕೂರು, ಮೈಸೂರು ಸೇರಿದಂತೆ ಕಡೆಗಳಲ್ಲಿ ವಿಷ್ಣು ಅಭಿಮಾನಿಗಳು ಆಪ್ತರಕ್ಷದಲ್ಲಿನ ವಿಷ್ಣು ವೇಷಧಾರಿಯಾಗಿ ಸಂಭ್ರಮಿಸಿದರು.
ವಿಷ್ಣು ಅಭಿಮಾನಿಗಳ ಸಂಘದಿಂದ ಬಿಡುಗಡೆಯ ಹಿನ್ನೆಲೆಯಲ್ಲಿ ನಗದರ ನರ್ತಕಿ ಚಿತ್ರಮಂದಿರದಲ್ಲಿ ಅನ್ನದಾನ ಕಾರ್ಯಕ್ರಮ ನಡೆಸಲಾಗಿದೆ. ಹಲವು ಕಡೆಗಳಲ್ಲಿ ಅಭಿಮಾನಿಗಳ ನುಕುನುಗ್ಗಲಿನಿಂದಾಗಿ ಆಕ್ರೋಶಗೊಂಡ ವಿಷ್ಣು ಅಭಿಮಾನಿಗಳು ಚಿತ್ರಮಂದಿರಕ್ಕೆ ಮುಗಿಬಿದ್ದರು. ಇದರಿಂದ ಲಾಠಿಪ್ರಹಾರ ನಡೆಸಲಾಯಿತು.
ವಿಷ್ಣು ತವರೂರಾದ ಮೈಸೂರಿನಲ್ಲಿ ಇಂದು ಸಂಭ್ರಮದ ವಾತಾವರಣ ಕಂಡು ಬಂದಿತ್ತು. ದಾವಣಗೆರೆಯ ತ್ರಿಶೂಲ್ ಮಂದಿರದಲ್ಲಿ ಟಿಕೆಟ್ಗಾಗಿ ನೂಕುನುಗ್ಗಲು ಕಂಡುಬಂದಿತ್ತು. ಟಿಕೆಟ್ ದೊರೆಯದ ಹಲವರು ಚಿತ್ರಮಂದಿರದ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದರು. ಅಷ್ಟೇ ಅಲ್ಲದೆ, ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ವಿಷ್ಣುವರ್ಧನ್ ಕಟೌಟ್‌ಗಳಿಗೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಿದರು.
No comments:
Post a Comment