VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 11, 2010

ನಾಳೆ ಪೆಟ್ರೋಲ್ ದರ ಏರಿಕೆ ಸಾಧ್ಯತೆ:ದೇವ್ರಾ

ನವದೆಹಲಿ, ಬುಧವಾರ, 10 ಫೆಬ್ರವರಿ 2010( 16:32 IST )
ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ಹಾಗೂ ಸರಕಾರದ ನಿಂಯತ್ರಣದಿಂದ ಮಕ್ತಗೊಳಿಸುವಂತೆ ತೈಲ ಸಚಿವಾಲಯದ ಪ್ರಸ್ತಾವನೆಯ ಬಗ್ಗೆ ಕೇಂದ್ರದ ಸಂಪುಟ ಸಮಿತಿ ನಾಳೆ ಚರ್ಚಿಸಲಿದೆ.ಚರ್ಚೆಯ ನಂತರ ದರ ಏರಿಕೆಯ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ಹೇಳಿದ್ದಾರೆ.

ಕೇಂದ್ರ ಸರಕಾರ ಇಂಧನ ದರ ಏರಿಕೆ ನೀತಿಯನ್ನು ಅಧ್ಯಯನ ಮಾಡಿ, ವರದಿ ಸಲ್ಲಿಕೆಗೆ ನೇಮಿಸಲಾದ ಕಿರಿಟ್ ಪಾರೀಖ್ ಸಮಿತಿ ಹಾಗೂ ರಾಜಕೀಯ ಪಕ್ಷಗಳು ಮತ್ತು ಯುಪಿಎ ಮೈತ್ರಿಕೂಟದ ಪಕ್ಷಗಳೊಂದಿಗೆ ಚರ್ಚಿಸಲಾಗಿದೆ ಎಂದು ದೇವ್ರಾ ತಿಳಿಸಿದ್ದಾರೆ.

ಯುಪಿಎ ಅಂಗಪಕ್ಷವಾದ ಡಿಎಂಕೆ ಪಕ್ಷದ ನಾಯಕ ಹಾಗೂ ಟೆಲಿಕಾಂ ಇಲಾಖೆಯ ಸಚಿವರಾದ ಎ.ರಾಜಾ ಅವರನ್ನು ಸಚಿವ ದೇವ್ರಾ ಭೇಟಿ ಮಾಡಿದ್ದ ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ಪ್ರಸ್ತಾಪದ ಬಗ್ಗೆ ಪಕ್ಷದ ನಾಯಕರಾದ ಮುಖ್ಯಮಂತ್ರಿ ಕರುಣಾನಿಧಿಯವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಎ.ರಾಜಾ,ಮುರಳಿ ದೇವ್ರಾ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೀಮೆಎಣ್ಣೆ ಹಾಗೂ ಅಡುಗೆ ಅನಿಲ ದರಗಳಲ್ಲಿ ಏರಿಕೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್‌ ದರಗಳನ್ನು ಸರಕಾರದಿಂದ ಮುಕ್ತಗೊಳಿಸಬೇಕು ಎನ್ನುವ ಪಾರೀಖ್ ಸಮಿತಿಯ ಶಿಫಾರಸ್ಸು ಜಾರಿಗೊಳಿಸಬೇಕು ಎಂದು ದೇವ್ರಾ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
source:webdunia

No comments: