ಪುತ್ತೂರು, ಫೆ.೧೭: ಪುತ್ತೂರಿನಲ್ಲಿ ಕೋಮುಗಲಭೆ ಸೃಷ್ಟಿಸುವ ಉದ್ದೇಶದಿಂದ ನಗರದ ಹೊರವಲ ಯದ ಎರಡು ಅಂಗಡಿಗಳಿಗೆ ಶುಕ್ರವಾರ ರಾತ್ರಿ ಬೆಂಕಿ ಹಚ್ಚಿದ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರು ಸ್ಥಳೀಯ ಪತ್ರಿಕೆಯೊಂದರ ವರದಿಗಾರನ ಸಹಿತ ಶ್ರೀರಾಮ ಸೇನೆಯ ಮೂವರು ಕಾರ್ಯಕರ್ತ ರನ್ನು ಬುಧವಾರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮುರ ಎಂಬಲ್ಲಿ ಉಮ್ಮರ್ ಮತ್ತು ಹಂಝ ಎಂಬವರ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಶ್ರೀರಾಮ ಸೇನೆಯ ವಿದ್ಯಾರ್ಥಿ ಸೇನೆಯ ಅಧ್ಯಕ್ಷ ಹಾಗೂ ಸ್ಥಳೀಯ ಪತ್ರಿಕೆ ಯೊಂದರ ವರದಿಗಾರ ಪಡ್ನೂರಿನ ನನ್ ಪಡ್ನೂರು ಮತ್ತು ಶ್ರೀ ರಾಮ ಸೇನೆಯ ಕಾರ್ಯಕರ್ತರಾದ ಮುಂಡಾಜೆ ನಿವಾಸಿ ನಾರಾಯಣ ಮತ್ತು ಪಡ್ನೂರಿನ ಪ್ರಣ್ ಎಂಬವರನ್ನು ಬಂಧಿಸಲಾಗಿದೆ.
ಈ ಮೂವರು ಆರೋಪಿಗಳು ಬೈಕೊಂದರಲ್ಲಿ ಬಂದು ಅಂಗಡಿಗೆ ಬೆಂಕಿ ಹಚ್ಚಿರುವುದಾಗಿ ತನಿಖೆ ಯಿಂದ ತಿಳಿದು ಬಂದಿದ್ದು, ಶ್ರೀರಾಮ ಸೇನೆಯ ದಕ್ಷಿಣ ಪ್ರಾಂತ ಸಂಚಾಲಕ ಅರುಣ್‌ಕುಮಾರ್ ಪುತ್ತಿಲರ ಪ್ರೇರಣೆಯಂತೆ ತಾವು ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಅಲ್ಲದೇ ಫೆ.೧೩ರಂದು ಶ್ರೀರಾಮ ಸೇನೆ ರಾಜ್ಯ ಬಂದ್‌ಗೆ ಕರೆ ನೀಡಿದ್ದ ಸಂದರ್ಭದಲ್ಲಿ ಪುತ್ತೂರಿನ ಮಂಜಲ್ಪಡ್ಪು ಎಂಬಲ್ಲಿ ಕೆಎಸ್ಸಾರ್ಟಿಸಿ ಬಸ್ಸೊಂದಕ್ಕೆ ಇದೇ ತಂಡ ಕಲ್ಲು ಹೊಡೆದಿರುವುದನ್ನು ಆರೋಪಿಗಳು ಬಹಿರಂಗಗೊಳಿಸಿದ್ದು, ಪುತ್ತೂರಿನ ಹೊರವಲ ಯದ ಪುರುಷರಕಟ್ಟೆ ಎಂಬಲ್ಲಿ ೨ ಗೂಡಂಗಡಿ ಗಳಿಗೆ ಫೆ.೧೭ರಂದು ರಾತ್ರಿ ಬೆಂಕಿ ಹಚ್ಚಲು ಸಂಚು ರೂಪಿಸಿರುವುದನ್ನು ಆರೋಪಿ ಗಳು ತನಿಖೆಯ ವೇಳೆ ಬಹಿರಂಗಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ಇತ್ತೀಚೆಗೆ ಕಲ್ಲಗೆಯಲ್ಲಿ ಜಾತ್ರೋತ್ಸವ ಸಂಬಂಧ ಹಾಕಲಾಗಿದ್ದ ಬ್ಯಾನರೊಂದನ್ನು ಆರೋಪಿ ನನ್ ಹರಿದು ಹಾಕಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಂಧಿ ಪ್ರತಿಮೆಗೆ ಚಪ್ಪಲಿ ಹಾರ ಶ್ರೀರಾಮಸೇನೆಯ ಕೃತ್ಯ: ಪೊಲೀಸ್
ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ವಠಾರದಲ್ಲಿರುವ ಗಾಂಧಿ ಕಟ್ಟೆಯಲ್ಲಿನ ಗಾಂಧಿ ಪ್ರತಿಮೆಗೆ ಚಪ್ಪಲಿ ಹಾರ ತೊಡಿಸಿ ರಾಷ್ಟ್ರಪಿತನಿಗೆ ಅವಮಾನ ಮಾಡಿರುವುದೂ ಶ್ರೀರಾಮ ಸೇನೆ ಸಂಘಟನೆಯ ಕೃತ್ಯ ಎಂದು ಆರೋಪಿಗಳು ಒಪ್ಪಿಕೊಂಡಿದ್ದು, ಪುತ್ತೂರಿ ನಲ್ಲಿ ಕೋಮುಗಲಭೆ ಸೃಷ್ಟಿಸಿ, ಶಾಂತಿ ಕದಡುವ ದೃಷ್ಟಿಯನ್ನಿಟ್ಟುಕೊಂಡು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಈ ಎಲ್ಲಾ ಕೃತ್ಯಗಳ ಹಿಂದೆ ಶ್ರೀರಾಮ ಸೇನೆಯ ದಕ್ಷಿಣ ಪ್ರಾಂತ ಸಂಚಾಲಕ ಅರುಣ್‌ಕುಮಾರ್ ಪುತ್ತಿಲರ ಕೈವಾಡ ಇರುವುದಾಗಿ ಆರೋಪಿಗಳು ತನಿಖೆಯ ವೇಳೆ ಬಹಿರಂಗ ಪಡಿಸಿದ್ದಾರೆಂದು ಪೊಲೀಸರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
source: sahil online
No comments:
Post a Comment