ಮಂಗಳೂರು: ಶಾಸಕ ಯು.ಟಿ.ಖಾದರ್ ಕಾರು ಚಾಲಕನ ಮೇಲೆ ಉಳ್ಳಾಲ ಪೊಲೀಸರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೊನ್ನೆ ರಾತ್ರಿ ದಗರ್ಾ ಎದುರು ಇರುವ ಹೊಸ ಮಸೀದಿಯಲ್ಲಿ ಧಾಮರ್ಿಕ ಪ್ರಸಂಗ ನಡೆಯುತ್ತಿದ್ದು ಇದರಲ್ಲಿ ಭಾಗವಹಿಸಿದ್ದ ಚಾಲಕ ರಫೀಕ್ ಮನೆಗೆ ಹೊರಟಿದ್ದರು.
ಇದೇ ವೇಳೆ ಆತನ ಎದುರು ಪ್ರತ್ಯಕ್ಷರಾದ ಉಳ್ಳಾಲದ ಇಬ್ಬರು ಪೊಲೀಸರು ಆತನನ್ನು ವಿಚಾರಿಸಿದಾಗ ತಾನು ಖಾದರ್ ಕಾರು ಚಾಲಕನೆಂದು ಹೇಳಿದನೆನ್ನಲಾಗಿದೆ. ಆದರೂ ಆತನ ಮಾತನ್ನು ಕಿವಿಗೆ ಹಾಕಿಕೊಳ್ಳದ ಪೊಲೀಸರು `ನೀನು ಭಾರಿ ಸ್ಟೈಲ್ ಮಾಡುತ್ತೀಯಾ ಎಂದು ಪ್ರಶ್ನಿಸಿ ಹಲ್ಲೆ
ನಡೆಸಿದ್ದಾರೆನ್ನಲಾಗಿದೆ.
ಈ ವಿಷಯದ ಕುರಿತು ದೂರು ನೀಡಲು ಮುಂದಾದ ರಫೀಕ್ ಮನೆಗೆ ಮತ್ತೆ ಬಂದ ಪೊಲೀಸರು ನಿನ್ನನ್ನು ಬೇರೆ ಕೇಸಿನಲ್ಲಿ ಫಿಕ್ಸ್ ಮಾಡುತ್ತೇವೆ ಎಂದು ಬೆದರಿಸಿದ್ದಾರೆಂದು ಹೇಳ ಲಾಗಿದೆ. ಯಾವುದೇ ತಪ್ಪು ಮಾಡದಿದ್ದ ಶಾಸಕರ ಕಾರು ಚಾಲಕ ರಫೀಕ್ ಮೇಲೆ ಪೊಲೀಸರು ನಡೆಸಿರುವ ಹಲ್ಲೆಯಿಂದ ಸ್ಥಳೀಯರು ಅಸಮಧಾನಗೊಂಡಿದ್ದು ಶಾಸಕರ ಕಾರು ಚಾಲಕನಿಗೆ ಇಂತಹ ಗತಿಯಾದರೆ ತಮ್ಮ ಪಾಡೇನು ಎಂಬ ಪ್ರಶ್ನೆಯೂ ಕಾಡುತಿದ್ದು ಹಿರಿಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಅಮಾಯಕ ರಫೀಕ್ಗೆ ನ್ಯಾಯ ದೊರಕಿಸಿಕೊಡುವಂತೆ ವಿನಂತಿಸಿದ್ದಾರೆ.
source: jayakirana
Feb 18, 2010
Subscribe to:
Post Comments (Atom)
No comments:
Post a Comment