
ಮಂಗಳೂರು: ದರ್ಗಾವೊಂದರ ಉರೂಸ್ ಪ್ರಯುಕ್ತ ಹಾಕಲಾಗಿದ್ದ ಕಟೌಟ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ವಾಮಂಜೂರು ಬಳಿ ನಡೆದಿದೆ.
ಗುರುಪುರ ಉಳಾಯಿಬೆಟ್ಟು ಹಝ್ರತ್ ಅಸೈಯ್ಯದ್ ಶಾಹುಲ್ ವಲಿಯುಲ್ಲಾಹಿ (ಖ.ಸ)ರವರ ಹೆಸರಲ್ಲಿ 17ನೇ ಉರೂಸ್ ಕಾರ್ಯಕ್ರಮವು ಇಂದಿನಿಂದ ಆರಂಭ ಗೊಂಡು 27ರವರೆಗೆ ನಡೆಯಲಿದೆ. ಇದಕ್ಕೆ ಶುಭ ಕೋರುವ ಎರಡು ಕಟೌಟ್‌ಗಳನ್ನು ವಾಮಂಜೂರು ಪರಾರಿಯಲ್ಲಿ ಹಾಕಲಾ ಗಿತ್ತು.
ಮೊನ್ನೆ ರಾತ್ರಿ ಯಾರೋ ಕಿಡಿಗೇಡಿ ಗಳು ಕಟೌಟ್‌ಗಳಿಗೆ ಬೆಂಕಿ ಹಚ್ಚಿದ್ದು ನಿನ್ನೆ ಬೆಳಿಗ್ಗೆ ಬೆಳಕಿಗೆ ಬಂದಿದೆ. ಬೆಂಕಿಯಿಂದಾಗಿ ಕಟೌಟ್‌ಗಳು ಭಾಗಶಃ ಸುಟ್ಟುಹೋಗಿದ್ದು ವಿಷಯ ತಿಳಿದು ನಿನ್ನೆ ಬೆಳಿಗ್ಗೆ ಜನರು ಜಮಾಯಿಸಿದ್ದು ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ.
source: jayakirana
No comments:
Post a Comment