ಮಂಗಳೂರು: ಕ್ಯಾಂಡಲ್ ಸಂತು ಯಾನೆ ಸಂತೋಷ್ನ ಕೊಲೆ ನಡೆದು ಇಂದಿಗೆ ಒಂದು ವರ್ಷ ಸಂದಿದೆ. ಈ ಮಧ್ಯೆ ಕೊಲೆ ನಡೆಸಿದ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು ಪೊಲೀಸರಿಗೆ ತಲೆನೋವಾಗಿ ಕಾಡು ತ್ತಿದೆ.
ಒಂದು ಕಾಲದಲ್ಲಿ ರೌಡಿಯಾಗಿ ಮೆರೆದು ಅನೇಕರ ಪಾಲಿಗೆ ಕಂಟಕನಾ ಗಿದ್ದ ರೌಡಿ ಕ್ಯಾಂಡಲ್ ಸಂತು ನಂತ ರದ ದಿನಗಳಲ್ಲಿ ಅಪಘಾತವೊಂದರಲ್ಲಿ ಕಾಲಿಗೆ ಗಾಯಮಾಡಿಕೊಂಡು ನಡೆದಾ ಡಲೂ ಅಸಾಧ್ಯವಾದ ಸ್ಥಿತಿಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದ.
ಜನವರಿಯಲ್ಲಿ ತನ್ನ ತಂಗಿಗೆ ಮದುವೆ ಮಾಡಿ ಸಂಭ್ರಮದಲ್ಲಿದ್ದ ಸಂತುವನ್ನು ಕಳೆದ ಫೆಬ್ರವರಿ 18ರಂದು ಪೊಳಲಿ ಸಮೀಪದ ಬಡಕಬೈಲ್ ನಲ್ಲಿರುವ ಆತನ ಮನೆಯ ಪಕ್ಕದಲ್ಲಿ ಬೆಳ್ಳಂಬೆಳಿಗ್ಗೆ ದುಷ್ಕಮರ್ಿಗಳು ತಲವಾರಿ ನಿಂದ ಯತ್ವಾತದ್ವಾ ಕೊಚ್ಚಿ ಹಾಕಿದ್ದರು. ನಡೆದಾಡಲೂ ಅಸಹಾಯಕನಾಗಿದ್ದ ಸಂತು ತಲ್ವಾರಿನೇಟಿಗೆ ಗಂಭೀರ ಗಾಯಗೊಂಡಿದ್ದ. ಆತನನ್ನು ಮುಸ್ಲಿಂ ಯುವಕನೋರ್ವ ಆಸ್ಪತ್ರೆಗೆ ಸಾಗಿಸು ತ್ತಿದ್ದಂತೆಯೇ ಅರ್ಧದಾರಿಯಲ್ಲಿ ಅಸು ನೀಗಿದ್ದ. ಸಂತುವಿನ ಹತ್ಯೆಗೆ ಒಂದು ವರ್ಷದ ಮೊದಲು (ಫೆಬ್ರವರಿ 21-2008) ಬಂಟ್ವಾಳ ಕೆಳಗಿನ ಪೇಟೆಯ ರಿಕ್ಷಾ ಚಾಲಕ ಇಕ್ಬಾಲ್ನ ಹತ್ಯೆಯಾ ಗಿದ್ದು, ಆತನ ಹತ್ಯೆಗೆ ಪ್ರತೀಕಾರ ತೀರಿಸಲು ಮುಂದಾಗಿದ್ದವರು ಆ ಕೆಲಸ ಮುಗಿಸಿದ್ದರು. ಸಂತು ಹತ್ಯೆಯ ಲ್ಲಿ 22 ಮಂದಿ ಆರೋಪಿಗಳನ್ನು ಗುರುತಿಸಲಾಗಿದ್ದು, ಅವರ ಪೈಕಿ ಮಹಮ್ಮದ್ ಇಕ್ಬಾಲ್, ಕಬೀರ್, ಖಾದರ್, ಭೋಜರಾಜ್, ಅಕ್ರಂ, ರಶೀದ್, ರಹ್ಮಾನ್, ಮಾಡೂರು ಇಸ್ಮಾಯಿಲ್, ಇಕ್ಬಾಲ್ ಮತ್ತು ಅನ್ವರ್ ಎಂಬವರನ್ನು ಹತ್ಯೆ ನಡೆದ 13 ದಿನಗಳ ಬಳಿಕ (3-3-2009) ಬಂಟ್ವಾಳ ಪೊಲೀಸರು ಬಂಧಿಸಿದ್ದರು.
ಕಳೆದ ತಿಂಗಳು ಅಶ್ರಫ್ ಹಾಗೂ ಮಹಮ್ಮದ್ ಆಸಿಫ್ನನ್ನು ಬಂಧಿಸಲಾಗಿತ್ತು. ಈಗಾಗಲೇ ಪ್ರಕರಣದ 22 ಆರೋಪಿಗಳ ಪೈಕಿ 13 ಮಂದಿಯನ್ನು ಬಂಧಿಸಲಾಗಿದ್ದರೆ ಒಂಭತ್ತು ಮಂದಿ ಆರೋಪಿಗಳು ವಿದೇಶ ಮತ್ತು ಹೊರ ರಾಜ್ಯಗಳಲ್ಲಿ ತಲೆಮರೆಸಿಕೊಂಡಿ ರುವುದು ಪೊಲೀಸರ ನಿದ್ದೆಗೆಡಿಸಿದೆ.
source: jayakirana
Feb 18, 2010
Subscribe to:
Post Comments (Atom)
No comments:
Post a Comment