ಬೆಂಗಳೂರು: ‘ಭಾರತೀಯರ ಜೀವನ ಶೈಲಿ, ಆಹಾರ ಪದ್ಧತಿಯಲ್ಲಿ ಬದ ಲಾವಣೆ ಆಗದಿದ್ದರೆ ಮಹಾರೋಗ ಮಧುಮೇಹವನ್ನು ನಿಯಂತ್ರಣಕ್ಕೆ ತರುವುದು ಅಸಾಧ್ಯ ಎಂದು ಡಿ. ದೇವರಾಜ ಅರಸು ವೈದ್ಯಕೀಯ ಶಿಕ್ಷಣ ಸಂಶೋಧನಾ ಕೇಂದ್ರದ ಕುಲಪತಿ ಡಾ. ಎಸ್. ಚಂದ್ರಶೇಖರ ಶೆಟ್ಟಿ ಹೇಳಿದರು.
ಭಾನುವಾರ ಜೆ.ಪಿ. ನಗರದ ಆರ್.ವಿ. ದಂತ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಎಸ್-ವ್ಯಾಸ ಯೋಗ ವಿಶ್ವವಿದ್ಯಾಲಯ ಹಾಗೂ ಸ್ವಾಮಿ ವಿವೇಕಾನಂದ ಯೋಗ ಸಂಶೋಧನಾ ಮತ್ತು ಸಮಗ್ರ ಆರೋಗ್ಯ ಟ್ರಸ್ಟ್ ಹಮ್ಮಿ ಕೊಂಡಿದ್ದ ‘ಮಧುಮೇಹ ನಿಯಂ ತ್ರಣ’ ಕುರಿತ ಮಹಾ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹೃದಯಾಘಾತ, ಕುರುಡುತನ, ಮುತ್ರ ಪಿಂಡ ತೊಂದರೆ, ಗ್ಯಾಂಗ್ರಿನ್, ನರದೌರ್ಬಲ್ಯದಿಂದ ಬಳಲುತ್ತಿರುವ ವರು ಹೆಚ್ಚಾಗಿ ಮಧುಮೇಹಿಗಳೇ ಆಗಿದ್ದಾರೆ. ಮುಖ್ಯವಾಗಿ ಡಯಾ ಬೀಟಿಸ್ ಗುಣಪಡಿಸದಿದ್ದರೆ ಬಾಧಕನಿಗೆ ಇತರೆ ರೋಗಗಳು ಕೂಡ ಹೆಚ್ಚು ಬಾಧಿಸುತ್ತವೆ. ಅದಕ್ಕಾಗಿ ಮಧುಮೇಹ ನಿಯಂ ತ್ರಣಕ್ಕೆ ಸೂಕ್ತ ಚಿಕಿತ್ಸೆ ಅಗತ್ಯ ಎಂದು ಅವರ ನುಡಿದರು.
ಇತ್ತೀಚೆಗೆ ಭಾರತ ಮಧುಮೇಹಿಗಳ ತವರೂರಾಗಿ ಮಾರ್ಪಡುತ್ತಿದೆ. ಈಗಾಗಲೇ ದೇಶದಲ್ಲಿ 5.6 ಕೋಟಿ ಜನರು ಮಧುಮೇಹದಿಂದ ನರಳುತ್ತಿದ್ದಾರೆ. ಮಧುಮೇಹ ಇದ್ದು ತಿಳಿಯದೇ, ವೈದ್ಯಕೀಯ ಪರೀಕ್ಷೆ ಮಾಡಿಸದೆ ಇರುವವರು ಅಂದಾಜು 5 ಕೋಟಿ ಜನರಿದ್ದಾರೆ. ಇನ್ನು ಹತ್ತು ವರ್ಷದೊಳಗೆ ಆ ಸಂಖ್ಯೆ ದ್ವಿಗುಣ ಆಗುವುದರಲ್ಲಿ ಅಚ್ಚರಿಯಿಲ್ಲ ಎಂದು ಅವರ ಹೇಳಿದರು.
ಎಸ್-ವ್ಯಾಸ ಯೋಗ ವಿಶ್ವವಿದ್ಯಾಲ ಯದ ಡೀನ್ ಡಾ. ಆರ್. ನಾಗರತ್ನ ಮಾತನಾಡಿ, ಮಧುಮೇಹ ಅನೇಕರಿಗೆ ಅನುವಂಶಿಕತೆಯಿಂದ, ದಡೂತಿ ಯಿಂದ, ಮಾನಸಿಕ ಒತ್ತಡದಿಂದ ಬರು ವಂತಾಗಿದೆ. ಎಂದಿಗೂ ಯಾರಲ್ಲೂ ಮಧುಮೇಹ ಬಗ್ಗೆ ನಿರ್ಲಕ್ಷ್ಯ ಬೇಡ. ಸೂಕ್ತ ಚಿಕಿತ್ಸೆಯಿಂದ ಮಧುಮೇಹ ವನ್ನು ದೂರ ಮಾಡಬಹುದು. ಯೋಗದ ಮೂಲಕ ಡಯಾಬಿಟೀಸ್ ನಿಯಂತ್ರಣ ಸಾಧ್ಯವಿದೆ ಎಂದು ಹೇಳಿದರು.
ಕರ್ನಾಟಕ ಮಧುಮೇಹ ಸಂಸ್ಥೆ ನಿರ್ದೇಶಕ ಡಾ. ಕೆ.ಆರ್. ನರಸಿಂಹ ಶೆಟ್ಟಿ, ಅಂಕಿ ಅಂಶಗಳ ಮೂಲಕ ಮಧು ಮೇಹದ ಬಗ್ಗೆ ಮಾಹಿತಿ ನೀಡಿದರು. ಸ್ವಾಮಿವಿವೇಕಾನಂದ ಯೋಗ ಸಂಶೋ ಧನ ಮತ್ತು ಸಮಗ್ರ ಆರೋಗ್ಯ ಟ್ರಸ್ಟ್ ಸಂಸ್ಥಾಪಕ ಡಾ. ದೇವರಾಜ್ ಮಧು ಮೇಹ ನಿಯಂತ್ರಣ ಮಹಾ ಜಾಗೃತಿ ಶಿಬಿರದ ಉದ್ದೇಶ ವಿವರಿಸಿ ದರು. ಎಸ್-ವ್ಯಾಸ ಕುಲಸಚಿವ ಡಾ. ಎನ್.ಕೆ. ಮಂಜುನಾಥ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಆರೋಗ್ಯ ನಗರ ಯೋಜನಾ ನಿರ್ದೇ ಶಕ ಡಾ. ವಿ.ಆರ್. ಪಾಂಡುರಂಗಿ, ಆರ್.ವಿ. ದಂತ ವೈದ್ಯಕೀಯ ಮಹಾ ವಿದ್ಯಾ ಲಯದ ಪ್ರಾಚಾರ್ಯ ಡಾ. ಕೆ.ಎಸ್. ನಾಗೇಶ್, ಲೈಪ್ ಕೇರ್ ಕ್ಲಿನಿಕ್ ಮತ್ತು ರಿಸರ್ಚ್ ಸೆಂಟರ್ ಮುಖ್ಯಸ್ಥ ಡಾ. ಎಲ್. ಶ್ರೀನಿವಾಸ ಮೂರ್ತಿ, ಡಾ. ವೆಂಕಟಸುಬ್ರಮಣ್ಯಂ ಮತ್ತಿತರ ವೈದ್ಯರು ಪಾಲ್ಗೊಂಡಿದ್ದರು. ನಂತರ ಮಧುಮೇಹಿಗಳ ಜೊತೆ ಸಂವಾದ ಮತ್ತು ವೈದ್ಯಕೀಯ ತಪಾಸಣೆ ನಡೆಯಿತು.
source: prajavani
Feb 22, 2010
Subscribe to:
Post Comments (Atom)
No comments:
Post a Comment