VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 25, 2010

ಜಿಗಿಯದೇ ಬೇರೆ ದಾರಿ ಇರಲಿಲ್ಲಜಿಗಿಯದೇ ಬೇರೆ ದಾರಿ ಇರಲಿಲ್ಲ

6ನೇ ಮಹಡಿಯಿಂದ ಜಿಗಿದರೂ ಪವಾಡಸದೃಶ್ಯವಾಗಿ ಪಾರಾಗಿ ಮಣಿ ಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿ ರುವ ಮೊಜ್ಮುಲ್ ಬಿ. ಹುಸೇನ್ ಅವರ ನುಡಿಗಳಿವು.

ಬೆಂಗಳೂರು: ‘ಕಟ್ಟಡದ ಆರನೇ ಮಹಡಿ ಯಿಂದ ಜಿಗಿಯದೇ ಬೇರೆ ದಾರಿ ಇರಲಿಲ್ಲ. ಹೊಗೆ ದಟ್ಟಣೆ ಹೆಚ್ಚು ತ್ತಿತ್ತು. ಮೆಟ್ಟಿಲು ಕಾಣಿಸುತ್ತಿರಲಿಲ್ಲ. ಏನಾ ದರೂ ಆಗಲಿ, ಇಲ್ಲಿಂದ ಪಾರಾ ಗಬೇಕು ಎಂದು ಜಿಗಿದೆಬಿಟ್ಟೆವು’.

6ನೇ ಮಹಡಿಯಿಂದ ಜಿಗಿದರೂ ಪವಾಡಸದೃಶ್ಯವಾಗಿ ಪಾರಾಗಿ ಮಣಿ ಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿ ರುವ ಮೊಜ್ಮುಲ್ ಬಿ. ಹುಸೇನ್ ಅವರ ನುಡಿಗಳಿವು.

‘ಕಾರ್ಲ್‌ಟನ್ ಟವರ್ಸ್’ ಬಹು ಮಹಡಿ ಕಟ್ಟಡದಲ್ಲಿರುವ ಜೆಡಿಎ ಸಾಫ್ಟ್ ವೇರ್ ಕಂಪೆನಿಗೆ ಭದ್ರತಾ ಸಿಬ್ಬಂದಿ ಯಾಗಿ ಸೇರಿಕೊಂಡ ಮೊದಲ ದಿನದಂದೇ ಅವರು ಸಾವಿ ನೊಂದಿಗೆ ಸರ ಸವಾಡಬೇಕಾಯಿತು. ಪ್ರಾಣವನ್ನು ಪಣಕ್ಕಿಟ್ಟು ಆರನೇ ಮಹಡಿಯಿಂದ ಜಿಗಿಯಬೇಕಾಯಿತು.

ಅಸ್ಸಾಂ ಮೂಲದ ಹುಸೇನ್ ಲೀಲಾ ಪ್ಯಾಲೇಸ್‌ನಲ್ಲಿ ಕಾರ್ಯ ನಿರ್ವಹಿಸು ತ್ತಿದ್ದರು. ಮಂಗಳವಾರ ವಷ್ಟೇ ಸಾಫ್ಟ್‌ವೇರ್ ಕಂಪೆನಿಗೆ ಭದ್ರತಾ ಸಿಬ್ಬಂದಿಯಾಗಿ ಸೇರಿಕೊಂಡಿದ್ದರು. ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅನಾ ಹುತ ಮತ್ತು ಪಾರಾದ ಬಗೆ ಕುರಿತು ಅವರು ‘ಪ್ರಜಾವಾಣಿ’ಯೊಂದಿಗೆ ಮಾತ ನಾಡಿದರು.

‘ನಾವಿರುವ ಸ್ಥಳದಲ್ಲಿ ಹೊಗೆ ದಟ್ಟಣೆ ಹೆಚ್ಚುತಿತ್ತು. ಏನೂ ಸಹ ಕಾಣುತ್ತಿರಲಿಲ್ಲ. ಹೊಗೆ ಹೋಗುತ್ತದೆ ಎಂದು ಅರ್ಧ ಗಂಟೆ ಕಾದೆವು ಆದರೆ ಪ್ರಯೋಜನವಾಗಲಿಲ್ಲ. ಏನು ಮಾಡ ಬೇಕು ಎಂದು ನಮಗೆ ದಿಕ್ಕು ತೋಚ ಲಿಲ್ಲ. ಉಸಿರಾಡಲು ಕಷ್ಟವಾಗು ತಿತ್ತು. ಬೇರೆ ದಾರಿ ಕಾಣದೇ ನಮ್ಮ ಕಂಪೆ ನಿಯ ಕಿಟಕಿ ತೆರೆದು ಹೊರಗಡೆ ಜಿಗಿ ದೆವು’ ಎಂದು ಮೊಜ್ಮುಲ್ ತಿಳಿಸಿದರು.

ಜೆಡಿಎ ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗಿ ಸುನೀಲ್ ಮತ್ತು ಮೊಜ್ಮುಲ್ ಇಬ್ಬರೂ ಒಟ್ಟಿಗೇ ಜಿಗಿದರು. ಮೊಜ್ಮುಲ್‌ಗೆ ಸಣ್ಣ ಪುಟ್ಟ ಗಾಯ ಗಳಾದರೆ, ಸುನೀಲ್ ಪ್ರಾಣ ಕಳೆದುಕೊಳ್ಳಬೇಕಾಯಿತು.ಕಟ್ಟಡದಲ್ಲಿ ಸಿಲುಕಿದ್ದ ಜನ ರನ್ನು ಪಾರು ಮಾಡಲು ಯತ್ನಿಸಿದ ಕೆಲ ಅಗ್ನಿ ಶಾಮಕ ಸಿಬ್ಬಂದಿಗಳಿಗೂ ಗಾಯ ಗಳಾದವು.

‘ತಂಡದ ರೂಪದಲ್ಲಿ ಏಳನೇ ಮಹ ಡಿಗೆ ಹೋದ ನಾವು 50 ಮಂದಿ ಯನ್ನು ರಕ್ಷಿಸಿ ದೆವು. ಮಹಡಿಯಿಂದ ಹಿಂದಿರುಗುವ ಮುನ್ನ ಮತ್ತೊಮ್ಮೆ ಪರಿಶೀಲಿಸಿದೆವು. ಅಲ್ಲಿ ಇಬ್ಬರು ಮಹಿಳೆ ಯರು ಪ್ರಜ್ಞಾಹೀನ ಸ್ಥಿತಿಯಲ್ಲಿರು ವುದು ಕಂಡು ಬಂತು. ಅವರಲ್ಲಿ ಒಬ್ಬ ರನ್ನು ಹೊತ್ತುಕೊಂಡು ಬರುತ್ತಿದ್ದ ವೇಳೆ ನನಗೂ ಮತ್ತು ನಮ್ಮ ತಂಡದ ಸದಸ್ಯರಿಗೆ ಗಾಯಗಳಾದವು’ ಎಂದು ಅಗ್ನಿಶಾಮಕ ಸಿಬ್ಬಂದಿ ಕೆ.ಟಿ.ಪ್ರಕಾಶ್ ತಿಳಿಸಿದರು. ಎಸ್‌ಐ ಅಶ್ವತ್ಥ್‌ಗೌಡ, ಅಗ್ನಿ ಶಾ ಮಕ ಸಿಬ್ಬಂದಿ ಗುರುಸ್ವಾಮಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗ್ನಿ ಶಾಮಕ ಇಲಾಖೆಯ ಹಿರಿಯ ಅಧಿ ಕಾರಿ ಆರ್.ರಮೇಶ್ ಅವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಕ್ರಪೆ - ಪ್ರಜಾವಾಣಿ

No comments: