ದಾವಣಗೆರೆ: ಬಿಗಿ ಪೊಲೀಸ್ ಭದ್ರತೆ ನಡುವೆಯೂ ಇಲ್ಲಿನ ಶ್ರೀದುರ್ಗಾಂಬಿಕಾ ದೇವಿ ಜಾತ್ರೆಯಲ್ಲಿ ಬುಧವಾರ ಐದು ಕೋಣ ಮತ್ತು ಸುಮಾರು 50,000ಕ್ಕೂ ಹೆಚ್ಚು ಕುರಿಗಳನ್ನು ಬಲಿ ಕೊಡಲಾಯಿತು.
ಮಂಗಳವಾರವೇ ಪ್ರಾಣಿ ಬಲಿಗೆ ಎಲ್ಲಾ ಸಿದ್ಧತೆ ನಡೆದಿತ್ತು. ಬುಧವಾರ ಬೆಳಗಿನ ಜಾವ ದೇವಿಯ ಪಟ್ಟದಕೋಣ ಸೇರಿದಂತೆ ಐದು ಕೋಣಗಳನ್ನು ಬಲಿ ನೀಡಲಾಯಿತು. ದೇವಸ್ಥಾನದ ಆವರಣದಲ್ಲಿ ಕೋಳಿ, ಕುರಿ, ಕೋಣ ಕಡಿಯಲು ಅವಕಾಶ ಇರಲಿಲ್ಲ. ಪೊಲೀಸ್ ಪಹರೆ ಹಾಕಲಾಗಿತ್ತು.
ಸುಮಾರು ಒಂದು ಲಕ್ಷ ಜನರು ದೇವಸ್ಥಾನದ ಸುತ್ತಮುತ್ತ ಜಮಾಯಿಸಿದ್ದರು. ರಹಸ್ಯ ಸ್ಥಳದಲ್ಲಿ ಪಟ್ಟದಕೋಣದ ಬಲಿ ನಡೆಸಿ, ಅದರ ತಲೆ ಹೊತ್ತು ಹುಲುಗ್ಯೋ... ಹುಲುಗ್ಯೋ ಘೋಷಣೆಯೊಂದಿಗೆ ಬೆಳಗಿನ ಜಾವ 5.13ರ ವೇಳೆಗೆ ಪೊಲೀಸರ ಎದುರಿನಲ್ಲೇ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ನಂತರ ದೇವಿಗೆ ರಕ್ತ ಸಮರ್ಪಿಸಲಾಯಿತು. ಈ ಮಧ್ಯೆ ಮಾಜಿ ಸಚಿವರೊಬ್ಬರು ಕೋಣನ ತಲೆಯಿಂದ ಸುರಿಯುತ್ತಿದ್ದ ರಕ್ತವನ್ನು ಹಣೆಗೆ ಹಚ್ಚಿಕೊಂಡು ಪುನೀತರಾದರು! ಭಕ್ತರ ಪರಾ ಕಾಷ್ಠೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಮೂಕ ಸಾಕ್ಷಿಯಾಯಿತು. ಬೆಳಿಗ್ಗೆ 10ರ ವೇಳೆಗೆ ಸುಮಾರು 50,000 ಕುರಿಗಳ ಬಲಿ ನಡೆಯಿತು. ಕುರಿಗಳ ಸಂಖ್ಯೆಯ ಎರಡರಷ್ಟು ಕೋಳಿಗಳ ಬಲಿಯೂ ನಡೆಯಿತು.
ಭಕ್ತರ ಮನವೊಲಿಸಲು ಜಿಲ್ಲಾಡಳಿತ, ಪೊಲೀಸರು ಹಾಗೂ ಮಹಿಳಾ ಸಂಘಟನೆಗಳು ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಅರೆಬೆತ್ತಲೆ ಬೇವಿ ನುಡುಗೆಯೂ ನಿರಾಂತಕವಾಗಿ ನಡೆಯಿತು.
ಕ್ರಪೆ - ಪ್ರಜಾವಾಣಿ
Subscribe to:
Post Comments (Atom)
No comments:
Post a Comment