ಮಂಗಳೂರು: ಕ್ರಿಕೆಟ್ ಮೈದಾನ ದಲ್ಲಿ ವಿಭಿನ್ನ ಕೋಮಿನ ಯುವಕರಿಬ್ಬರ ಮಧ್ಯೆ ಉಂಟಾದ ತಕರಾರು ಹೊಡೆ ದಾಟದ ಹಂತ ತಲುಪಿದ್ದು ಪೊಲೀಸರ ಕಾರ್ಯಾಚರಣೆಯಿಂದ ತಪ್ಪಿದೆ.
ಮುಡಿಪುವಿನ ನವಗ್ರಾಮ ಸೈಟಿನ ನಿವಾಸಿಗಳಾದ ಮನ್ಸೂರ್ ಅಹ್ಮದ್ ಹಾಗೂ ಚಂದ್ರ ಶೇಖರ್ ಮಧ್ಯೆ ವೈಮನಸ್ಸು ಇತ್ತೆನ್ನಲಾಗಿದೆ. ನಿನ್ನೆ ಮಧ್ಯಾಹ್ನ ಇವರ ವೈಮನಸ್ಸು ಕ್ರಿಕೆಟ್ ಮೈದಾನದಲ್ಲಿ ಸ್ಫೋಟಿಸಿದ್ದು, ವಾಕ್ಸಮರಕ್ಕೆ ಕಾರಣವಾಯಿತು. ಈ ಸಂದರ್ಭ ಚಂದ್ರಶೇಖರ್ ಕಡೆಯವರು ಮನ್ಸೂರ್ ಮೇಲೆ ಹಲ್ಲೆಯನ್ನು ನಡೆಸಿದ್ದರು.
ಇದರಿಂದ ಆಕ್ರೋಶಿತನಾಗಿ ಮಾರುತ್ತರ ನೀಡುವ ಸವಾಲೆಸೆದು ಹೋಗಿದ್ದ. ಸಂಜೆ ವೇಳೆ ಓಮ್ನಿ ಯೊಂದರಲ್ಲಿ ಕೋಟೆಕಣಿ ನಿವಾಸಿ ಗಳಾದ ಇಮ್ರಾನ್ ಖಾನ್ , ಸಮದ್, ಸಜಿಪದ ಹಂಝ, ಮುಡಿಪು ನಿವಾಸಿ ಗಳಾದ ನವಾಝ್, ಕಲೀಲ್ ಯಾನೆ ಇಬ್ರಾಹಿಂ ಕಲೀಲ್, ಅಬ್ದುಲ್ ಹಮೀದ್ ಎಂಬವರೊಂದಿಗೆ ಆಗಮಿ ಸಿದ್ದ. ಇದೇ ವೇಳೆ ಚಂದ್ರಶೇಖರ್ ನ ಸ್ನೇಹಿತರಾದ ಅವಿನಾಶ್ ಯಾನೆ ಮುನ್ನ, ಅರುಣ್ ಕುಮಾರ್ ಮತ್ತು ಸಂತು ಯಾನೆ ಸಂತೋಷ್ ಶೆಟ್ಟಿ ಎಂಬವರೂ ಮಾರುತ್ತರ ನೀಡಲು ಸಜ್ಜಾಗಿದ್ದರು. ಮಾಹಿತಿ ತಿಳಿದ ಕೊಣಾಜೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಎರಡು ತಂಡದ ಜನರನ್ನು ಬಂಧಿಸಿ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.
source: jayakirana
Feb 22, 2010
Subscribe to:
Post Comments (Atom)
No comments:
Post a Comment