VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 20, 2010

ಅಮ್ಮೆಂಬಳ ಮಸೀದಿ ಕೇಸು ಅಂತ್ಯ


ಗೆಲುವಿನ ನಗೆ ಬೀರಿದ ಜಾರದಗುಡ್ಡೆ ನಿವಾಸಿಗಳು
ಮಂಗಳೂರು: ಮೂರು ವರ್ಷಗಳ ಹಿಂದೆ ವಿವಾದದಿಂದಾಗಿ ಭಾರೀ ಪ್ರಚಾರ ಪಡೆದಿದ್ದ ಅಮ್ಮೆಂಬಳ ಮಸೀದಿ ವಿವಾದವು ಅಂತ್ಯಗೊಂ ಡಿದ್ದು ನ್ಯಾಯಾಲಯದ ತೀರ್ಪಿ ನಿಂದಾಗಿ ಜಾರದಗುಡ್ಡೆ ನಿವಾಸಿಗಳು ಗೆಲುವಿನ ನಗೆ ಬೀರಿದ್ದಾರೆ.

ಬೋಳಿಯಾರು ಅಮ್ಮೆಂಬಳದಲ್ಲಿ ಇತಿಹಾಸ ಪ್ರಸಿದ್ಧ ಪುರಾತನ ದರ್ಗಾ, ರಿಫಾಯಿಯ ಜುಮಾ ಮಸೀದಿ ಮತ್ತು ನೂರುಲ್‌ ಹುದಾ ದರ್ಗಾ ಮತ್ತು ಇಲ್ಲಿ 45 ಮನೆಗಳಿದ್ದು ಪ್ರತೀ ವಾರಕ್ಕೊಮ್ಮೆ ಸಾಮೂಹಿಕ ಝಿಯಾರತ್‌ ಮತ್ತು ಎರಡು ವರ್ಷ ಕ್ಕೊಮ್ಮೆ ಅದ್ದೂರಿಯ ಉರೂಸ್‌ ಕಾರ್ಯಕ್ರಮ ನಡೆಯುತ್ತಾ ಬಂದಿತ್ತು. ಇದರ ನಿರ್ವಹಣೆಯನ್ನು ಕುರ್ನಾಡು ಜುಮ್ಮಾ ಮಸೀದಿ ಆಡಳಿತ ಮಂಡಳಿ ನಿರ್ವಹಿಸುತ್ತಿತ್ತು. ಅಮ್ಮೆಂಬಳ ರಿಫಾಯಿ ಮಸೀದಿ ಮತ್ತು ದರ್ಗಾದಿಂದ ಬಂದ ಆದಾಯವನ್ನು ಕುರ್ನಾಡ್‌ ಮಸೀದಿ ಸಮಿತಿಗೆ ನೀಡಲಾಗುತ್ತಿತ್ತು. ಆದರೆ ಮಸೀದಿಯ ಅಧ್ಯಕ್ಷರಾದ ಬಿ.ಎಸ್‌. ಹಸನಬ್ಬರು ರಿಫಾಯಿ ಮಸೀದಿ ಹಾಗೂ ಇದರ ಅಧೀನದಲ್ಲಿದ್ದ ನೂರುಲ್‌ಹುದಾ ಮದ್ರಸವನ್ನು ಸರಿಯಾಗಿ ನಿರ್ವಹಿಸದೆ ನಿರ್ಲಕ್ಷ್ಯ ತಾಳಿದ್ದರೆನ್ನಲಾಗಿದೆ. ತಮಗೆ ಮನಬಂದಂತೆ ತಿಂಗಳು ಹಾಗೂ ವಾರಕ್ಕೊಮ್ಮೆ ಉಸ್ತಾರ್‌ರನ್ನು ಬದಲಾಯಿಸುತ್ತಾ ಬಂದಿದ್ದರಿಂದ ಇಲ್ಲಿನ ಮಕ್ಕಳಿಗೆ ಮದ್ರಸಾ ವಿದ್ಯಾಭ್ಯಾಸವಿಲ್ಲದೆ ತೂಗುಯ್ಯಾಲೆಯ ಸ್ಥಿತಿ ನಿರ್ಮಾಣವಾಗಿತ್ತು. ಇದು ಈ ಪ್ರದೇಶದ ಜನರ ಅಸಮಾಧಾನಕ್ಕೆ ಕಾರಣವಾಗಿದ್ದು ಪ್ರತ್ಯೇಕ ಸಮಿತಿ ರಚಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ಆದರೆ ಇದಕ್ಕೆ ಕುರ್ನಾಡು ಮಸೀದಿ ಅಧ್ಯಕ್ಷರಾಗಿದ್ದ ಹಸನಬ್ಬರು ಸಮ್ಮತಿಸದ ಕಾರಣ ತಾಳ್ಮೆ ಕಳೆದುಕೊಂಡ ಅಮ್ಮೆಂಬಳ ನಿವಾಸಿಗಳು ತಾವೇ ಸ್ವಂತ ಸಮಿತಿಯನ್ನು ರಚಿಸಿದ್ದರು. ಇದರಿಂದ ಮುಖಭಂಗ ಅನುಭವಿಸಿದ ಹಸನಬ್ಬರು ಕುರ್ನಾಡು ಮಸೀದಿಯ ಇನ್ನೋರ್ವ ಪದಾಧಿಕಾರಿಯಾಗಿದ್ದ ಅಬ್ದುಲ್‌ ರಹ್‌ಮಾನ್‌ ಎಂಬವರನ್ನು ಬಳಸಿ ಸುಳ್ಳು ದಾಖಲೆ ಸೃಷ್ಟಿಸಿ ನ್ಯಾಯಾಲಯದ ಮೂಲಕ 2-5-2007ರಂದು ಮಸೀದಿ, ಮದ್ರಸಾಕ್ಕೆ ಬೀಗ ಜಡಿದಿದ್ದರು.

ಇದರಿಂದ ಆಕ್ರೋಶಗೊಂಡ ಅಮ್ಮೆಂಬಳ ಪರಿಸರದ ನಿವಾಸಿಗಳು ಕೆಲವು ತಿಂಗಳ ಬಳಿಕ ಮಸೀದಿಯ ಬೀಗ ಒಡೆದು ನಮಾಝ್‌ ನಿರ್ವಹಿಸಿದ್ದರಲ್ಲದೆ ತಾವೂ ನ್ಯಾಯಾಲಯದ ಮೆಟ್ಟಲೇರಿದ್ದರು. ಪ್ರಕರಣವು ನ್ಯಾಯಾಲಯದಲ್ಲಿದ್ದ ಕಾರಣ ಅಲ್ಲಿ ನಡೆಯುತ್ತಿದ್ದ ಉರೂಸ್‌ ಸಹಿತ ಧಾರ್ಮಿಕ ಕಾರ್ಯಕ್ರಮಗಳು ತಟಸ್ಥಗೊಂಡಿದ್ದವು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ಮಸೀದಿ, ದರ್ಗಾ ಹಾಗೂ ಮದ್ರಸಾ ಅಮ್ಮೆಂಬಳ ನಿವಾಸಿಗಳಿಗೆ ಸೇರಿದ್ದೆಂದು ಕಳೆದ ತಿಂಗಳು ತೀರ್ಪು ನೀಡಿತ್ತು. ನಿನ್ನೆ ಮಸೀದಿ ಹಾಗೂ ದರ್ಗಾಕ್ಕೆ ಸಂಬಂಧಪಟ್ಟ ಸೊತ್ತುಗಳು ಹಾಗೂ ಬೀಗದ ಕೀಲಿಯನ್ನು ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು ಇದರಿಂದಾಗಿ ಕಳೆದ ಕೆಲವು ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ಮಸೀದಿ ಹಾಗೂ ದರ್ಗಾ ವಿವಾದವು ಸಂಪೂರ್ಣ ಮುಕ್ತಗೊಂಡಿದೆ. ಇದು ಅಮ್ಮೆಂಬಳ ನಿವಾಸಿಗಳ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದೆ.

ನಮಾಝ್‌, ಮದ್ರಸಕ್ಕಾಗಿ ಮನೆಯನ್ನೇ ಬಳಸಲಾಗಿತ್ತು

ಕುರ್ನಾಡು ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬರ ಕುತಂತ್ರದಿಂದಾಗಿ ನ್ಯಾಯಾಲಯವು ಅಮ್ಮೆಂಬಳ ರಿಫಾಯಿಯ ಮಸೀದಿ ಹಾಗೂ ನೂರುಲ್‌ಹುದಾ ಮದ್ರಸಾಕ್ಕೆ ಬೀಗ ಜಡಿದಿತ್ತು. ಇದರಿಂದಾಗಿ ಇಲ್ಲಿನ ಮದ್ರಸದಲ್ಲಿ ಕಲಿಯುತ್ತಿದ್ದ 45 ಮನೆಗಳ ಮಕ್ಕಳು ಅತಂತ್ರರಾಗಿದ್ದರಲ್ಲದೆ ಸ್ಥಳೀಯರು ಸಾಮೂಹಿಕ ನಮಾಝ್‌ನಿಂದಲೂ ವಂಚಿತರಾಗಿದ್ದರು. ಇದು ಸ್ಥಳೀಯರಲ್ಲಿ ಸೂತಕದ ಛಾಯೆ ಮೂಡಿಸಿತ್ತು.

ಇದೇ ಸಂದರ್ಭದಲ್ಲಿ ಸ್ಥಳೀಯರ ಕುತಂತ್ರವನ್ನು ಅರಿತ ಮಸೀದಿ ಹಾಗೂ ದರ್ಗಾ ಸಮಿತಿಯ ಕಾರ್ಯದರ್ಶಿ ಅಹ್ಮದ್‌ಬಾವಾರ ತಮ್ಮ ರಫೀಕ್‌ ರವರು ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿದ್ದರು. ಅವರ ಅಂಗಳಕ್ಕೆ ಪೆಂಡಾಲ್‌ ಹಾಕಿ ತಾತ್ಕಾಲಿಕವಾಗಿ ತಾರ್ಪಲನ್ನು ಬಳಸಿ ನೀರಿನ ತೊಟ್ಟಿ ನಿರ್ಮಿಸಿ ನಮಾಝ್‌ ನಿರ್ವಹಿಸಿತ್ತಿದ್ದರಲ್ಲದೆ ಮನೆಯನ್ನೇ ಮದ್ರಸಾ ಮಾಡಲಾಗಿತ್ತು. ಇದು ಸುಮಾರು ಐದು ತಿಂಗಳವರೆಗೆ ಮುಂದುವರಿದಿತ್ತೆಂದು ಸ್ಥಳೀಯರು ಸ್ಮರಿಸುತ್ತಾರೆ.
ಕ್ರಪೆ: ಜಯಕಿರಣ

No comments: