ಪುಣೆಯ ಬೇಕರಿ ಸ್ಫೋಟ ಘಟನೆಯ ಹೊಣೆಗಾರಿಕೆಯನ್ನು ಪಾಕಿಸ್ತಾನ ಮೂಲಕ ಅಪರಿಚಿತ ಸಂಘಟನೆ ಲಷ್ಕರ್-ಎ-ತೊಯ್ಬಾ ಅಲ್ ಅಲ್ಮಿ (ಎಲ್‌ಇಟಿ) ಹೊತ್ತುಕೊಂಡಿದೆ.
ನವದೆಹಲಿ (ಐಎಎನ್‌ಎಸ್):ಪುಣೆಯ ಬೇಕರಿ ಸ್ಫೋಟ ಘಟನೆಯ ಹೊಣೆಗಾರಿಕೆಯನ್ನು ಪಾಕಿಸ್ತಾನ ಮೂಲಕ ಅಪರಿಚಿತ ಸಂಘಟನೆ ಲಷ್ಕರ್-ಎ-ತೊಯ್ಬಾ ಅಲ್ ಅಲ್ಮಿ (ಎಲ್‌ಇಟಿ) ಹೊತ್ತುಕೊಂಡಿದೆ.
ಸಂಘಟನೆ ವಕ್ತಾರ ಅಬು ಜಿಂದಾಲ್ ಎಂದು ಹೇಳಿಕೊಂಡ ವ್ಯಕ್ತಿ ಮಂಗಳವಾರ ವಾಜಿರಿಸ್ತಾನದಿಂದ ಪಾಕ್ ಮೂಲಕ ಭಾರತೀಯ ಪತ್ರಕರ್ತ ನಿರುಪಮಾ ಸುಬ್ರಹ್ಮಣ್ಯಂ ಅವರಿಗೆ ಕರೆ ಮಾಡಿ ಸ್ಫೋಟಕ್ಕೆ ತಾವೇ ಹೊಣೆ ಎಂದು ಹೇಳಿದ್ದಾನೆ.
ಭಾರತ- ಪಾಕ್ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಯಲ್ಲಿ ಕಾಶ್ಮೀರ ವಿಷಯ ಚರ್ಚಿಸಲು ಭಾರತ ನಿರಾಕರಿಸಿರುವದನ್ನು ಮತ್ತು ಅಮೆರಿಕದೊಂದಿಗಿನ ಭಾರತದ ಮೈತ್ರಿ ಖಂಡಿಸಿಸ್ಫೋಟ ಎಸಗಿದ್ದಾಗಿ ಹೇಳಿದೆ.
ನಾಲ್ವರ ಬಂಧನ: ಘಟನೆಗೆ ಸಂಬಂಧಿಸಿದಂತೆ ರಾತ್ರಿ ಇನ್ನಿಬ್ಬರನ್ನು ಬಂಧಿಸಿದ್ದು, ಒಟ್ಟಾರೆ ಈತನಕ ನಾಲ್ವರನ್ನು ಬಂಧಿಸಿಲಾಗಿದೆ.
ಪ್ರಜಾವಾಣಿ ವಾರ್ತೆ
Subscribe to:
Post Comments (Atom)
No comments:
Post a Comment