VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 17, 2010

ಹೈಕೋರ್ಟ್ ಮೆಟ್ಟಲೇರಿದ ಬಾಲಕಿ ಮದುವೆ ವಿವಾದ

14 ವರ್ಷದ ಮುಸ್ಲಿಮ್ ಬಾಲಕಿಗೆ ಮದುವೆ ಮಾಡುವ ವಿಚಾರ ಈಗ ಬಾಂಬೈ ಹೈಕೋರ್ಟ್ ಮೆಟ್ಟಲು ಹತ್ತಿದೆ.

ಮುಂಬೈ (ಪಿಟಿಐ): 14 ವರ್ಷದ ಮುಸ್ಲಿಮ್ ಬಾಲಕಿಗೆ ಮದುವೆ ಮಾಡುವ ವಿಚಾರ ಈಗ ಬಾಂಬೈ ಹೈಕೋರ್ಟ್ ಮೆಟ್ಟಲು ಹತ್ತಿದೆ.

ಮಕ್ಕಳ ಮದುವೆ ನಿಷೇಧ ಕಾಯ್ದೆ ಮತ್ತು ಮುಸ್ಲಿಮ್ ವೈಯಕ್ತಿಕ ಕಾನೂನು ಇವೆರಡರಲ್ಲಿ ಯಾವುದು ಇಲ್ಲಿ ಅನ್ವಯವಾಗುತ್ತದೆ ಎಂಬುದನ್ನು ಬಾಂಬೈ ಹೈಕೋರ್ಟ್ ಸದ್ಯದಲ್ಲಿಯೇ ತೀರ್ಮಾನಿಸಲಿದೆ.

ಔರಂಗಾಬಾದ್‌ನ ಜಾಕಿಯಾ ಬೇಗಂ ಎಂಬ ಮಹಿಳೆ ತಮ್ಮ 14 ವರ್ಷದ ಮಗಳಿಗೆ ಮದುವೆ ಮಾಡುವ ಪ್ರಯತ್ನದಲ್ಲಿದ್ದರು. ಆಗ ಹುಡುಗಿ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಿ ಮಕ್ಕಳ ಮದುವೆ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಲಾಗುತ್ತಿದೆ ಎಂದು ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸರು ಬಾಲಕಿಯನ್ನು ವಶಕ್ಕೆ ತೆಗೆದುಕೊಂಡು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಿದರು. ನಂತರ ಬಾಲಕಿಯನ್ನು ರಿಮಾಂಡ್ ಹೋಂಗೆ ಸೇರಿಸಲಾಗಿದೆ.

ಜಾಕಿಯಾ ಬೇಗಂ ಅವರು ಬಾಂಬೈ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಮಗಳು ಹರೆಯಕ್ಕೆ ಬಂದಿರುವುದರಿಂದ ಮುಸ್ಲಿಮ್ ವೈಯಕ್ತಿಕ ಕಾನೂನಿನ ಪ್ರಕಾರ ಮದುವೆ ಮಾಡಬಹುದಾಗಿದೆ, ಆದ್ದರಿಂದ ಮಗಳನ್ನು ತಮ್ಮ ವಶಕ್ಕೆ ಕೊಡುವಂತೆ ಆದೇಶಿಸಬೇಕು ಎಂದು ಕೋರಿದ್ದಾರೆ.

ಪ್ರಜಾವಾಣಿ ವಾರ್ತೆ

No comments: