VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 18, 2010

ಮಂಗಳೂರು ಉದ್ಯಮಿ : ಮೈಸೂರಲ್ಲಿ ಅಜ್ಞಾತ ವಾಸ?

ದಾವೂದ್ ಸಹಚರರ ಕೊಲೆ ಬೆದರಿಕೆ

ಮೈಸೂರು: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರನ ಸಹಚರ ರೆಂದು ಹೇಳಿಕೊಂಡು ಕೊಲೆ ಬೆದರಿಕೆಗೆ ಒಳಗಾಗಿರುವ ಮಂಗಳೂರಿನ ಉದ್ಯಮಿ ಮೈಸೂರಿನಲ್ಲಿ ಅಜ್ಞಾತ ವಾಸವಾಗಿರುವುದು ಬೆಳಕಿಗೆ ಬಂದಿದೆ.

ಮಂಗಳೂರಿನಲ್ಲಿ ಬಹುದೊಡ್ಡ ಕಟ್ಟಡ ಉದ್ಯಮಿಯಾಗಿರುವ ಮುಜೀಬ್ ಉರ್ ರೆಹಮಾನ್ ಎಂಬುವರಿಗೆ ದಾವೂದ್ ಇಬ್ರಾಹಿಂ ಸಹೋದರ ಅನಿಷ್ ಇಬ್ರಾಹಿಂ ಸಹಚರರು ಎಂದು ಹೇಳಿಕೊಂಡಿರುವ ಉಮರ್ ಮತ್ತು ಮೊಹಿದ್ದೀನ್ ಹಣ ನೀಡುವಂತೆ 2008ರಲ್ಲಿ ಕೊಲೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಇದರಿಂದ ಕಂಗೆಟ್ಟ ಮುಜೀಬ್ ಭೂಗತ ಪಾತಕಿಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ಉಮರ್ ಮತ್ತು ಮೊಹಿದ್ದೀನ್ ಆದೇಶದ ಮೇರೆಗೆ ಮುಂಬೈಗೆ ತೆರಳಿ ರೂ. 1.70 ಕೋಟಿ ಹಣ ತಲುಪಿಸಿದ್ದರು ಎನ್ನಲಾಗಿದೆ.

ಉಮರ್ ಮತ್ತು ಮೊಹಿದ್ದೀನ್ ಮತ್ತೆ ರೂ. 50 ಲಕ್ಷ ನೀಡುವಂತೆ ಈಚೆಗಷ್ಟೆ ಮುಜೀಬ್‌ಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಇವರ ಉಪಟಳದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮುಜೀಬ್ ಇದೀಗ ಮೈಸೂರಿಗೆ ಬಂದು ನೆಲೆಸಿದ್ದಾರೆ ಎನ್ನಲಾಗಿದೆ.

ಅಲ್ಲದೆ ಭೂಗತ ಪಾತಕಿಗಳ ಸಹಚರರ ವಿರುದ್ಧ ಮುಜೀಬ್ ಹಿರಿಯ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಆದರೆ ಯಾವ ಉದ್ಯಮಿಯಿಂದಲೂ ದೂರು ಬಂದಿಲ್ಲ ಎಂದು ನಗರ ಪೊಲೀಸರು ನಿರಾಕರಿಸಿದ್ದಾರೆ.

ಪ್ರಜಾವಾಣಿ ವಾರ್ತೆ

No comments: