VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 18, 2010

ಮಾರ್ಚ್‌ನಿಂದ ಹಾಲಿನ ದರ ಏರಿಕೆ

ನಂದಿನಿ ಹಾಲಿನ ದರವನ್ನು ಹೆಚ್ಚಿಸ ಲೇಬೇಕಾದ ಅನಿವಾರ್ಯ ಕುರಿತು ಇದೇ 20ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು .

ಬೆಂಗಳೂರು: ನಂದಿನಿ ಹಾಲಿನ ದರವನ್ನು ಹೆಚ್ಚಿಸ ಲೇಬೇಕಾದ ಅನಿವಾರ್ಯ ಕುರಿತು ಇದೇ 20ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು ಎಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ತಿಳಿಸಿದರು.

ಭಾರತೀಯ ಡೇರಿ ಒಕ್ಕೂಟವು ನಗರದ ‘ನಿಮ್ಹಾನ್ಸ್’ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ‘ಉತ್ಪಾದಕತೆ ಮತ್ತು ಆಹಾರ ಭದ್ರತೆ’ ಕುರಿತ ಸಮ್ಮೇಳನದ ಉದ್ಘಾಟನಾ ಸಮಾರಂಭದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, ಮಾರ್ಚ್ ಒಂದರಿಂದ ಹಾಲಿನ ದರ ಏರಿಕೆ ಜಾರಿಯಾಗುವುದು ಖಚಿತ ಎಂದರು.

‘ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಪ್ರಸ್ತಾವವನ್ನು ಕೆಲ ದಿನಗಳ ಹಿಂದೆಯೇ ಮುಖ್ಯಮಂತ್ರಿಯವರಿಗೆ ಕಳುಹಿಸಿದ್ದೇನೆ. ಆದರೆ ಅವರು ಅದನ್ನು ಗಮನಿಸದೇ ಇರ ಬಹುದು. ಈಗ ಖುದ್ದಾಗಿ ಯಡಿಯೂರಪ್ಪ ಅವರೊಂದಿಗೆ ಈ ಪ್ರಸ್ತಾವದ ಬಗ್ಗೆ ಚರ್ಚೆ ನಡೆಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹಾಲಿನ ದರ ಪ್ರತಿ ಲೀಟರ್‌ಗೆ ಎಂಟು ರೂಪಾಯಿ ಕಡಿಮೆ ಇದೆ. ಈಗ ಒಂದು ಲೀಟರ್ ಹಾಲು ಉತ್ಪಾದನೆಗೆ ರೈತರು ರೂ 15.97 ವೆಚ್ಚ ಮಾಡುತ್ತಿದ್ದಾರೆ. ಕೆಎಂಎಫ್ ರೂ 13.60ರ ದರದಲ್ಲಿ ಖರೀದಿಸುತ್ತಿದೆ. ಸರ್ಕಾರದ ವತಿಯಿಂದ ರೈತರಿಗೆ ನೇರವಾಗಿ ಪ್ರತಿ ಲೀಟರ್‌ಗೆ ರೂ 2 ಪ್ರೋತ್ಸಾಹ ಧನ ನೀಡಲಾಗುತ್ತಿದೆ. ರೈತರಿಗೆ ಪ್ರತಿ ಲೀಟರ್ ಮೇಲೆ 30 ಪೈಸೆ ನಷ್ಟವಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ದರ ಏರಿಕೆ ಅಗತ್ಯ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಕೂಡ ಸಲಹೆ ಮಾಡಿದ್ದಾರೆ ಎಂದರು.

‘ಪ್ರತಿ ಲೀಟರ್‌ಗೆ ನಾಲ್ಕು ರೂಪಾಯಿ ದರ ಏರಿಕೆಗೆ ಕೆಎಂಎಫ್ ನಿರ್ಧರಿಸಿತ್ತು. ಈಗ ಕನಿಷ್ಠ ಎರಡು ರೂಪಾಯಿ ದರ ಹೆಚ್ಚಳ ಮಾಡುವುದು ಖಚಿತ. ಮಾರ್ಚ್ 1ರಿಂದಲೇ ಈ ನಿರ್ಧಾರ ಜಾರಿಯಾಗಲಿದೆ. ಈ ಮೂಲಕ ಹಾಲು ಉತ್ಪಾದನೆ ಹೆಚ್ಚಿಸುವ ಗುರಿ ತಲುಪಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ವಾರ್ತೆ

No comments: