VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 17, 2010

ಜ್ಯೋತಿಷಿ ಅಪಹರಣ ಪ್ರಕರಣ ಸುಖಾಂತ್ಯ

ರಾಜಸ್ತಾನದಲ್ಲಿ ಬೆಂಗಳೂರಿನ ಜ್ಯೋತಿಷಿ ಒಬ್ಬರನ್ನು ಅಪಹರಿಸಿದ್ದ ದುಷ್ಕರ್ಮಿಗಳನ್ನು ಬಂಧಿಸಿರುವ ಪೊಲೀಸರು ಅಪಹೃತ ಜ್ಯೋತಿಷಿ ಯನ್ನು ಪ್ರಾಣಾ ಪಾಯ ದಿಂದ ಪಾರು ಮಾಡುವಲ್ಲಿ ಯಶಸ್ವಿ ಯಾಗಿದ್ದಾರೆ.

ಬೆಂಗಳೂರು: ರಾಜಸ್ತಾನದಲ್ಲಿ ಬೆಂಗಳೂರಿನ ಜ್ಯೋತಿಷಿ ಒಬ್ಬರನ್ನು ಅಪಹರಿಸಿದ್ದ ದುಷ್ಕರ್ಮಿಗಳನ್ನು ಬಂಧಿಸಿರುವ ಪೊಲೀಸರು ಅಪಹೃತ ಜ್ಯೋತಿಷಿ ಯನ್ನು ಪ್ರಾಣಾ ಪಾಯ ದಿಂದ ಪಾರು ಮಾಡುವಲ್ಲಿ ಯಶಸ್ವಿ ಯಾಗಿದ್ದಾರೆ.

ನಗರದ ಕುರುಬರಹಳ್ಳಿ ನಿವಾಸಿ ಜ್ಯೋತಿಷಿ ಲಕ್ಕಪ್ಪ ಶಾಸ್ತ್ರಿಗೌಡ ಅವರು ಕಾರ್ಯ ನಿಮಿತ್ತ ಫೆ. 5ರಂದು ರಾಜಸ್ತಾನಕ್ಕೆ ಹೋಗಿದ್ದ ಸಂದರ್ಭ ದಲ್ಲಿ ದುಷ್ಕರ್ಮಿಗಳು ಅವರನ್ನು ಅಪ ಹರಿಸಿದ್ದರು.

ಅಪಹರಣಕಾರರ ಗುಂಪಿನ ಸತೀಶ್, ಸಂತೋಷ್ ಮತ್ತು ಗುರುಮಿಯ ಎಂಬುವರನ್ನು ಬಂಧಿಸಲಾಗಿದೆ. ಇವರೆಲ್ಲ ರಾಜಸ್ತಾನ ಮೂಲದವರಾಗಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಅಪಹರಣದ ನಂತರ ಲಕ್ಕಪ್ಪ ಅವರ ಕುಟುಂಬದ ಸದಸ್ಯರಿಗೆ ದೂರವಾಣಿ ಕರೆ ಮಾಡಿದ್ದ ದುಷ್ಕರ್ಮಿಗಳು 50 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅವರನ್ನು ಮಧ್ಯಪ್ರದೇಶದ ಚಂಬಲ್ ಕಣಿವೆ ಸಮೀಪ ಕರೆದೊಯ್ದು ಅರಣ್ಯ ಪ್ರದೇಶದಲ್ಲಿ ಅಡಗಿಸಿಟ್ಟಿದ್ದ ಕಿಡಿಗೇಡಿಗಳು ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಆತಂಕಗೊಂಡ ಅವರ ಕುಟುಂಬ ಸದಸ್ಯರು ಬಸವೇಶ್ವರ ನಗರ ಪೊಲೀಸರಿಗೆ ದೂರು ಕೊಟ್ಟಿದ್ದರು.

‘ಅಪಹರಣಕಾರರ ದೂರವಾಣಿ ಕರೆಯ ಬಗ್ಗೆ ಮಾಹಿತಿ ಕಲೆ ಹಾಕಿ ಅವರು ಚಂಬಲ್ ಕಣಿವೆ ಸಮೀಪದ ಅರಣ್ಯ ಪ್ರದೇಶದಲ್ಲಿ ಇರುವುದನ್ನು ಪತ್ತೆ ಹಚ್ಚಲಾಯಿತು. ಬಳಿಕ ಮಧ್ಯ ಪ್ರದೇಶ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಲಾಯಿತು.

ಲಕ್ಕಪ್ಪ ಹಾಗೂ ಬಂಧಿತ ಆರೋಪಿ ಗಳನ್ನು ಬುಧವಾರ ಬೆಳಿಗ್ಗೆ ನಗರಕ್ಕೆ ಕರೆತರಲಾಗುವುದು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಬಿ.ಶಿವಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ವಾರ್ತೆ

No comments: