ನೈಸ್ ಯೋಜನೆಯಲ್ಲಿ ಹೆಚ್ಚು ಭೂಮಿ ಒತ್ತುವರಿಗೆ ತಮ್ಮ ಸಂಘಟನೆಯ ವಿರೋಧವಿದೆ ಎಂದು ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ತಿಳಿಸಿದರು.
ಬೆಂಗಳೂರು: ನೈಸ್ ಯೋಜನೆಯಲ್ಲಿ ಹೆಚ್ಚು ಭೂಮಿ ಒತ್ತುವರಿಗೆ ತಮ್ಮ ಸಂಘಟನೆಯ ವಿರೋಧವಿದೆ ಎಂದು ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ತಿಳಿಸಿದರು.
ತಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದಿಲ್ಲ ಬದಲಾಗಿ ಯಾವುದೇ ಪಕ್ಷದ ವ್ಯಕ್ತಿ ಉನ್ನತ ಮಟ್ಟದ ಕೆಲಸ ನಿರ್ವಹಿಸಿದರೆ ತಮ್ಮ ಸಂಘಟನೆ ಅವರಿಗೆ ಬೆಂಬಲ ಸೂಚಿಸುತ್ತದೆ ಎಂದು ಪರೋಕ್ಷವಾಗಿ ದೇವೇಗೌಡರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಜನಪರ ಕಾಳಜಿಗೆ ಧಕ್ಕೆ ಉಂಟಾಗುವ ಯಾವುದೇ ಯೋಜನೆಯ ವಿರುದ್ಧ ಸಂಘಟನೆಯು ಶಾಂತ ರೀತಿಯಲ್ಲಿ ಹೋರಾಟ ಮಾಡಲಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷರಾಗಿದ್ದ ಜಾಣಗೆರೆ ವೆಂಕಟರಾಮಯ್ಯ ಅವರಿಗೆ ವಯಸ್ಸಾಗಿದೆ. ಅದ್ದರಿಂದ ಯುವಕ ಕುಮಾರ ಸ್ವಾಮಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಸಂಘಟನೆಯ ಕಾರ್ಯಕರ್ತರಲ್ಲಿ ಹೆಚ್ಚಿನವರು ಯುವಕರು ಇರುವುದರಿಂದ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನೂತನ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಜಗದೀಶ ಗೌಡ, ಸಂಘಟನೆಯ ರಾಜ್ಯಕಾರ್ಯಧ್ಯಕ್ಷ ಪ್ರಕಾಶ್ ರೈ ಮತ್ತು ಬಸವರಾಜು ಮುತ್ತಗಿ, ಪ್ರಧಾನ ಕಾರ್ಯದರ್ಶಿ ನಾಗಲೇಖ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಗುಣ ರಂಜನ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ವಾರ್ತೆ
Subscribe to:
Post Comments (Atom)
No comments:
Post a Comment