VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 20, 2010

ಐಶ್ವರ್ಯಾ ರೈ ಬಗ್ಗೆ ಮಾತಾಡಿದರೆ ಜೋಕೆ!: ಮಾವ ಅಮಿತಾಭ್ ಎಚ್ಚರಿಕೆ


ಮುಂಬಯಿ: ಸೊಸೆ ಐಶ್ವರ್ಯಾ ರೈ ಅವರ ಆರೋಗ್ಯದ ಬಗ್ಗೆ ಇಲ್ಲಸಲ್ಲದನ್ನು ಮಾತಾಡಿದರೆ, ಸುದ್ದಿ ಪ್ರಕಟಿಸಿದರೆ ಜೋಕೆ! ಹೀಗೆ ಹೇಳಿದವರು ಅವರ ಮಾವ ಅಮಿತಾಭ್ ಬಚ್ಚನ್. ಐಶ್ವರ್ಯಾ ರೈ ಅವರು ಉದರ ಕ್ಷಯದಿಂದ ಬಳಲುತ್ತಿದ್ದಾರೆ. ಅದೇ ಕಾರಣದಿಂದ ಆಕೆ ಗರ್ಭಿಣಿಯಾಗಿಲ್ಲ ಎಂದು ಮುಂಬಯಿಯ ಆಂಗ್ಲ ಪತ್ರಿಕೆಯೊಂದು ಪ್ರಕಟಿಸಿದ ಬಗ್ಗೆ ಅಮಿತಾಭ್ ಆಕ್ರೋಶ ವ್ಯಕ್ತಪಡಿಸಿ ತನ್ನ ಬ್ಲಾಗ್ನಲ್ಲಿ ಬರೆದಿದ್ದಾರೆ. ಐಶ್ವರ್ಯ ಬಗ್ಗೆ ಪ್ರಕಟಿಸಿರುವುದು ಸುಳ್ಳು ಮತ್ತು ಸಂವೇದನಾ ರಹಿತ ಸುದ್ದಿ. ಇದನ್ನು ನಾನು ಸಹಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮುಂಬಯಿಯ ಟ್ಯಾಬ್ಲೋಯ್ಡ್ ಪತ್ರಿಕೆಯ ವರದಿಗೆ ಕಿಡಿ ಕಾರಿರುವ ಅಮಿತಾಭ್ ಬಚ್ಚನ್, ಇದು ತೀರಾ ಕೀಳು ಗುಣಮಟ್ಟದ ಪತ್ರಿಕೋದ್ಯಮ ಎಂದಿದ್ದಾರೆ. ಇದನ್ನು ನಾನು ಅತಿಯಾದ ಸಿಟ್ಟು , ನೋವು ಮತ್ತು ಹತಾಶೆಯಿಂದ ಬರೆಯುತ್ತಿದ್ದೇನೆ. ಈ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಕಪೋಲಕಲ್ಪಿತ. ಐಶ್ವರ್ಯಾ ನನಗೆ ಮಗಳ ಸಮಾನ. ನನ್ನ ಮನೆಯಲ್ಲಿರುವ ಹೆಣ್ಣು. ಆಕೆಯ ಬಗ್ಗೆ ಯಾರಾದರೂ ಕೀಳಾಗಿ ಮಾತನಾಡಿದರೆ ಅವರ ವಿರುದ್ಧ ಕೊನೆಯ ಉಸಿರು ಇರುವ ತನಕ ಹೋರಾಡುತ್ತೇನೆ. ನನ್ನ ಅಥವಾ ಅಭಿಷೇಕ್ ಬಗ್ಗೆ ಏನಾದರೂ ಹೇಳಿದರೆ ಸಹಿಸಿಕೊಳ್ಳಬಲ್ಲೆ ಎಂದು ಬಚ್ಚನ್ ಹೇಳಿದ್ದಾರೆ.

webdunia

No comments: