VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 25, 2010

ಶ್ರೀರಾಮಸೇನೆಗೆ ಸರಕಾರ ಕಡಿವಾಣ ಹಾಕಲಿ

ಓರ್ವ ನೈಜ ದೇಶಾಭಿಮಾನಿ,ಉಪ್ಪಿನಂಗಡಿ

ರಾಮಸೇನೆಯ ಅಧ್ಯಕ್ಷನಾದ ಮುತಾಲಿಕ್‌ ಇವತ್ತು ಮಸಿ ಬಳಿಸಿಕೊಂಡಿದ್ದು ಅದೊಂದು ಹೆಮ್ಮೆ ಯ ವಿಷಯ. ಆದರೆ ಮಸಿ ಬಳಿದದ್ದು ಮುತಾಲಿಕ್‌ರಿಗೆ ಅಲ್ಲ ಅವರ ಸಿದ್ಧಾಂತಕ್ಕೆಂದು ಬಳಿದವರು ಹೇಳುತ್ತಿದ್ದಾರೆ. ಈ ನಡುವೆ ಅವರು ಮಸಿ ಬಳಿದದ್ದು ನನಗಲ,್ಲ ಹಿಂದೂ ಸಂಸ್ಕೃತಿಗೆ ಹೀಗೆಂದು ಮುತಾಲಿಕ್‌ ಅಬ್ಬರಿಸುತ್ತಾರೆ.
ಅಂತೆಯೇ ಇದೇ ವಿಷಯಕ್ಕೆ ಕೆಲವು ಪ್ರದೇಶಗಳಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಯಿತು. ಜೊತೆಗೆ ಅಲ್ಲಲ್ಲಿ ನಡೆದ ಗಲಾಟೆ ಗದ್ದಲಗಳಿಂದ ಜನಸಾಮಾನ್ಯರು ತತ್ತರಿಸಿ ಹೋಗಿ ದ್ದರು. ಮುತಾಲಿಕ್‌ಗೆ ಮಸಿ ಬಳಿದವರು ಇದೀಗ ನ್ಯಾಯಾಂಗ ಬಂಧನದಿಂದ ಹೊರಗೆ ಬಂದಿದ್ದಾರೆ. ಆದರೆ ಮಸಿ ಬಳಿದವರಿಗೆ ಏನೂ ಮಾಡುವುದಿಲ್ಲ ಎಂಬುವುದಾಗಿ ಮುತಾಲಿಕ್‌ ಘೋಷಿಸಿದ್ದಾರೆ.
ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲೂ ಇರಬೇಕು ಆಗ ಮಾತ್ರ ಸಮಾಜದಲ್ಲಿ ಎಲ್ಲರೂ ಶಾಂತಿ ಸೌಹಾರ್ದ ತೆಯಿಂದ ಒಗ್ಗಟ್ಟಾಗಿ ಯಾವುದೇ ಜಾತಿ, ಮತ, ಭೇದ ಭಾವವಿಲ್ಲದೆ ಬಾಳಬಹುದು. ಇಂದು ಸಂಘ ಪರಿವಾರದಿಂದ ಮನುಷ್ಯ ಸಮುದಾಯಕ್ಕೆ ಎಷ್ಟೋ ತೊಂದರೆಗಳಿವೆ. ಈ ಮಾತನ್ನು ಸಮರ್ಥಿಸುವುದಾ ದರೆ ಅದಕ್ಕೆ ಬೇಕಾದಷ್ಟು ಉದಾಹರಣೆಗಳಿವೆ.
ಇವರು ನಡೆಸುವ ಬಂದ್‌ನಿಂದಾಗಿ ಗಲಭೆ ಸಂಭವಿಸಿ ಎಷ್ಟೋ ಮಂದಿ ಬಲಿಯಾಗುತಿದ್ದಾರೆ. ಆ ನಿಟ್ಟಿನಲ್ಲಿ ಬಂದ್‌ಗೆ ಕರೆ ಕೊಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈ ಗೊಳ್ಳಬೇಕು. ಯಾಕೆಂದರೆ ಇವತ್ತು ಮುತಾಲಿಕ್‌ ಮಸಿ ಬಳಿದರೆ ಬಂದ್‌ ಮಾಡುವ ಅವಶ್ಯಕತೆಯಾದರೂ ಏನು? ಅದರಿಂದಾದ ಲಾಭವಾದರೂ ಏನು?
ಇವತ್ತು ಬಿಜೆಪಿ ಸರಕಾರ ಸಂಘಪರಿವಾರದ ಒಂದು ಮುಖ. ಶಿವರಾತ್ರ್ರಿಯಂತಹ ಹಬ್ಬದ ದಿನದಂದು ಬಂದ್‌ ಮಾಡಿದ ರಾಮಸೇನೆಯಿಂದಾಗಿ ಎಷ್ಟೋ ಮಂದಿ ಶಿವನನ್ನು ಪೂಜಿಸದೇ ನಿರಾಶರಾಗಿದ್ದಾರೆ. ಬೇರೆ ಬೇರೆ ದೇವಸ್ಥಾನಕ್ಕೆ ಹೋಗಿ ಪೂಜಿಸುವ ಭಕ್ತಾದಿಗಳು ಬಂದ್‌ನಿಂದಾಗಿ ಪೂಜಿಸ ಲೇ ಇಲ್ಲ. ಉದಾಹರಣೆಗೆ ಉಪ್ಪಿನಂಗಡಿಯ ಮಖೆಜಾತ್ರೆ.
ಅಲ್ಲದೆ ಪುತ್ತೂರಿನಲ್ಲಿ ರಾಷ್ಟ್ರ ಪಿತ ಗಾಂಧಿಜೀಯವರ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ ಘಟನೆ ಕ್ಷಮಿಸುವಂತಹುದ್ದಲ್ಲ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಸ್ವಾತಂತ್ರ್ಯಹೋರಾಟಗಾರನಿಗೆ ಇವತ್ತು ಚಪ್ಪಲಿಹಾರ ಹಾಕುವುದೆಂದರೆ ದೇಶಕ್ಕೆ ಅವಮಾನ ಮಾಡಿದಕ್ಕೆ ಸಮ. ಅದೂ ಕೂಡ ವಿದ್ಯಾವಂತರ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಎನ್ನುವುದು ಮತ್ತೊಂದು ವಿಷಾದನೀಯ ಸಂಗತಿ.
ಗಾಂಧಿ ಪ್ರತಿಮೆಗೆ ಚಪ್ಪಲಿ ಹಾಕಿದವರು ರಾಮಸೇನೆಯವರು ಹೌದಾದರೆ ಮುತಾಲಿಕ್‌ಗಾಗಿ ಗಾಂಧಿಯನ್ನು ಅವಮಾನ ಮಾಡುವ ಇವರು ನಾಳೆ ತಮ್ಮ ಹೆತ್ತ ತಾಯಿಯನ್ನೂ ಅವಮಾನ ಮಾಡಲು ಹಿಂದೆ ಮುಂದೆ ನೋಡ ಲಾರರು.
ಇಂತಹ ಸಂಘಟನೆಗಳನ್ನು ನಿಷೇಧಿಸಬೇಕು. ಸರ್ಕಾರ ಶ್ರೀ ರಾಮಸೇನೆಯನ್ನು ಇನ್ನೂ ಯಾಕೆ ನಿಷೇಧಿಸಿಲ್ಲ. ಈ ಕೆಲಸ ಮಾಡಿ ಸರ್ಕಾರ ತನ್ನ ನೈತಿಕತೆಯನ್ನು ಉಳಿಸಿಕೊಳ್ಳಲಿ. ರಾಷ್ಟ್ರದ ಪ್ರಜಾಪ್ರಭುತ್ವದ ಕಲ್ಪನೆಗಳಿಗೆ ಅವಮಾನ ಮಾಡುವ ಯಾರೇ ಇದ್ದರೂ ಅವರನ್ನು ಸಹಿಸುವುದು ಸಾಧ್ಯ ಇಲ್ಲ.

-jayakirana

1 comment:

MOHD. ARIF said...

this is absolutely welcomable comment. the government have to ban these communal forces. but at present the state government is under the shadow of these communal forces!! so can we expect ban for (goondasena)Ramasena????!!!!!!