
ಮಂಗಳೂರು: ಕಾಟಿಪಳ್ಳ-ಕೃಷ್ಣಾಪುರ ಪರಿಸರದಲ್ಲಿ ಕಳೆದ ಒಂದು ವಾರದಿಂದ ನಿರಂತರ ಅಹಿತಕರ ಘಟನೆಗಳು ನಡೆಯುತ್ತಿ ರುವ ಹಿನ್ನೆಲೆಯಲ್ಲಿ ಸುರತ್ಕಲ್ ಪರಿಸರದಲ್ಲಿ ಸೆಕ್ಷನ್ ಜಾರಿಗೊಳಿಸಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಶಾಂತಿ ಯಿಂದ ಇದ್ದ ಕೃಷ್ಣಾಪುರ-ಕಾಟಿಪಳ್ಳ ಪ್ರದೇಶ ದಲ್ಲಿ ಮತ್ತೆ ದ್ವೇಷದ ಕಿಡಿ ಹಚ್ಚುವ ಪ್ರಯತ್ನ ವನ್ನು ಕಿಡಿಗೇಡಿಗಳು ನಡೆಸುತ್ತಿದ್ದು, ಪರಿಣಾಮವಾಗಿ ದಿನಗಳ ಅಂತರದಲ್ಲಿ ಸಾಲು ಸಾಲು ಅಹಿತಕರ ಘಟನೆಗಳು ನಡೆದಿದ್ದವು.
ಕಳೆದ ಜನವರಿ ಐದರ ರಾತ್ರಿ ಕಿಡಿಗೇಡಿ ಗಳು ಕಾಟಿಪಳ್ಳ ಈದ್ಗಾ ಮೈದಾನದಲ್ಲಿ ದೀಪ ಹಾಗೂ ಹೂವನ್ನಿಟ್ಟು ಶಾಂತಿ ಕದಡಲು ಯತ್ನಿಸಿದ್ದರು. ಇದರ ಬೆನ್ನಿಗೆ ಜನವರಿ ಏಳರ ರಾತ್ರಿ ಕೃಷ್ಣಾಪುರದ ಬಳಿ ನಡೆದು ಕೊಂಡು ಹೋಗುತ್ತಿದ್ದ ಟ್ಯಾಂಕರ್ ಚಾಲಕ ರೋರ್ವರಿಗೆ ತಂಡವೊಂದು ತಲ ವಾರಿ ನಿಂದ ದಾಳಿ ನಡೆಸಿತ್ತು. ಇದಾಗಿ ಒಂದು ರಾತ್ರಿ ಕಳೆಯುವುದ ರೊಳಗೆ ಅಂದರೆ ಸೋಮವಾರ ರಾತ್ರಿ ಸುರತ್ಕಲ್ ಕಾಂತೇರಿ ಧೂಮಾವತಿ ದೈವಸ್ಥಾನದ ಆವರಣದಲ್ಲಿ ಕಿಡಿಗೇಡಿಗಳು ದನದ ರುಂಡವನ್ನು ಇಟ್ಟು ಪರಾರಿಯಾ ಗಿದ್ದಾರೆ. ಇದು ಶಾಂತಿಯಿಂದಿರುವ ಪ್ರದೇಶದಲ್ಲಿ ಅಶಾಂತಿಯ ಕಿಡಿ ಹಚ್ಚುವ ಯತ್ನ ಎಂದು ಆರೋಪಿಸಿದ ಹಿಂದೂ ಸಂಘಟನೆಗಳು ನಿನ್ನೆ ಸುರತ್ಕಲ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದವು. ಮೊದಲ ಅಹಿತಕರ ಘಟನೆ ನಡೆದಾ ಗಲೇ ಪೊಲೀಸರು ಈ ಪ್ರದೇಶದಲ್ಲಿ ತೀವ್ರ ನಾಕಾಬಂಧಿ ಹಾಕಿದ್ದರು. ಆದರೂ ಒಂಭತ್ತು ಗಂಟೆಯ ವೇಳೆಗೆ ದೈವಸ್ಥಾನದ ಆವರಣಕ್ಕೆ ದನದ ರುಂಡ ಎಸೆಯಲಾಗಿತ್ತು.
ಇಲ್ಲಿ ಮತ್ತೊಂದು ಅನಾಹುತ ನಡೆದು ಶಾಂತಿ ಕದಡುವ ಮುನ್ನ ಪರಿಸ್ಥಿತಿಯನ್ನು ತಹಬಂದಿಗೆ ತರಲು ಬಿಗು ಕ್ರಮ ಅಗತ್ಯ ಎಂದು ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೈವಸ್ಥಾನದ ಆವರಣದಲ್ಲಿ ದನದ ರುಂಡ ಇರಿಸಿದ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿ ಹಿಂದೂ ಸಂಘಟನೆಯ ಆಶ್ರಯದಲ್ಲಿ ನಾಗರಿಕರು ಸುರತ್ಕಲ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಧೂಮಾವತಿ ದೈವಸ್ಥಾನದಿಂದ ಮೌನ ಮೆರವಣಿಗೆ ಮೂಲಕ ಠಾಣೆಗೆ ಬಂದ ಪ್ರತಿಭಟನಾಕಾರರು, ಠಾಣೆ ಮುಂದೆ ಜಮಾಯಿಸಿ ಶಾಂತಿಯಿಂದ ಇರುವ ಹಿಂದುಗಳನ್ನು ಕೆಣಕುವ ಕೃತ್ಯಗಳನ್ನು ಕಿಡಿಗೇಡಿಗಳು ನಡೆಸುತ್ತಿದ್ದಾರೆ. ಹಿಂದುಗಳು ಎದ್ದು ನಿಲ್ಲುವ ಮುನ್ನ ಅವರು ತಮ್ಮ ಆಟಾಟೋಪ ನಿಲ್ಲಿಸಲಿ. ಪೊಲೀಸರು ದುಷ್ಕತ್ಯ ನಡೆಸುವ ಕಿಡಿಗೇಡಿಗಳನ್ನು ಬಂಧಿಸಬೇಕು ಮತ್ತು ಸುರತ್ಕಲ್ ಪರಿಸರದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಹಿಂದು ನೇತಾರ ಅಶೋಕ್ ಮಾತನಾಡಿದರು. ಬಳಿಕ ಪ್ರತಿಭಟನಾಕಾರರ ಪರವಾಗಿ ಉಪಮೇಯರ್ ರಜನಿ ದುಗ್ಗಣ್ಣ, ಸತೀಶ್ ಭಟ್ ಕೊಳವೈಲು, ದಿವಾಕರ ಸಾಮಾನಿ, ಕಾಂತೇರಿ ಧೂಮವತಿ ದೈವಸ್ಥಾನದ ಆಡಳಿತ ಮೊಕ್ತೇಸರ ಪಿ ಟಿ ರೈ, ಸರ್ಕಲ್ ಇನ್ಸ್‌ಪೆಕ್ಟರ್ ಬೆಳ್ಳಿಯಪ್ಪ ಅವರ ಜೊತೆ ಮಾತುಕತೆ ನಡೆಸಿದರು.
ದೈವಸ್ಥಾನದ ಆವರಣದಲ್ಲಿ ರುಂಡ ಎಸೆದ ಘಟನೆಯ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅವರನ್ನು ತಕ್ಷಣ ಬಂಧಿಸುವುದಾಗಿ ಬೆಳ್ಳಿಯಪ್ಪ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಯನ್ನು ಹಿಂಪಡೆಯಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ವಿಚಾರಣೆಗೊಳಪಡಿಸಲಾಗಿದೆ.
ಅಶಾಂತಿಗೆ ಧರ್ಮಧರ್ಮದ ಕಿಚ್ಚು ಬೇಡ, ಮತಾಂಧರ ಕಿಡಿಸಾಕು
ಪ್ರಸಕ್ತ ಪರಿಸ್ಥಿತಿಯಲ್ಲಿ ಸುರತ್ಕಲ್‌ನಂತಹ ಕೋಮುಸೂಕ್ಷ್ಮ ಪ್ರದೇಶದಲ್ಲಿ ಗಲಭೆ ಹಬ್ಬಿಸಲು ಹೆಚ್ಚು ಸಮಯ ಬೇಕಾಗಿಲ್ಲ. ಧರ್ಮ ಧರ್ಮದ ನಡುವಿನ ಕಚ್ಚಾಟ ಬೇಕಾಗಿಲ್ಲ. ಕೇವಲ ಒಂದೇ ಒಂದು ಕ್ಷಣದ ಕಿಡಿಗೇಡಿತನವು ಸಾಕು. ಮತಾಂಧರು ಹಚ್ಚುವ ಒಂದು ಸಣ್ಣ ಕಿಡಿ ಸಾಕಾಗಬಹುದು.
ಮಸೀದಿಯಲ್ಲಿ ದೀಪ, ಪಾದಾಚಾರಿಗೆ ತಲವಾರಿನಿಂದ ಹಲ್ಲೆ, ದೈವಸ್ಥಾನದಲ್ಲಿ ದನದ ರುಂಡ, ಇದೆಲ್ಲವನ್ನು ಧರ್ಮ ವಿರೋಧಿಗಳೇ ಮಾಡಬೇಕಾಗಿಲ್ಲ. ಬದಲಾಗಿ ಮುಸ್ಲಿಮರೇ ಮಸೀದಿಯಲ್ಲಿ ದೀಪ ಹಚ್ಚಬಹುದು. ಹಿಂದೂವೇ ದೈವಸ್ಥಾನದಲ್ಲಿ ದನದ ರುಂಡ ಇಟ್ಟು ಅಶಾಂತಿಯ ಬೀಜ ಬಿತ್ತಿ ವಿಘ್ನ ಸಂತೋಷ ಅನುಭವಿಸಬಹುದು. ಆದರೆ ಇದರಲ್ಲಿ ಬೆಂದು ಹೋಗುವುದು ಅಮಾಯಕರು ಎನ್ನುವುದು ಮಾತ್ರ ಸತ್ಯ
source: jayakirana
No comments:
Post a Comment