ಮಂಗಳೂರು: ಉಪ್ಪಿನಂಗಡಿಯ ಮರ್ದಾಳ ಸಮೀಪದ ಕರ್ಮಾಯಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾ ಗಿದ್ದ ದಂಪತಿಯನ್ನು ಬಲವಂತದ ಮತಾಂತರಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ಬಜರಂಗದ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. 
ಮರ್ದಾಳ ಕರ್ಮಾಯಿ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮಂಗಳೂರು ಮೂಲದ ಹರೀಶ್ ಹಾಗೂ ಅವರ ಪತ್ನಿ ಲಕ್ಷ್ಮೀ ಎಂಬವರು ವಾಸವಾಗಿದ್ದು ಇವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮರ್ದಾಳದ ನ್ಯೂ ಇಂಡಿಯಾ ಚರ್ಚ್‌ನಲ್ಲಿ ಕೆಲಸ ಮಾಡುತ್ತಿರುವ ಇವರು ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು ಎನ್ನಲಾಗಿದೆ. ನಂತರ ಈ ದಂಪತಿಗಳು ಮನೆಪರಿಸರದಲ್ಲಿ ಹಿಂದೂ ಮನೆಗಳಿಗೆ ತೆರಳಿ ಕ್ರೈಸ್ತ ಮತ ಪ್ರಚಾರ ಮಾಡಿ ಬಲವಂತವಾಗಿ ಮತಾಂತರ ಮಾಡಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಷ ಗೊಂಡ ಬಜರಂಗದಳದ ಕಾರ್ಯಕರ್ತರು ಇವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. 
source: jayakirana
Feb 10, 2010
Subscribe to:
Post Comments (Atom)
No comments:
Post a Comment