ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ್ದ, ಲೈಂಗಿಕ ತೀಟೆ ತೀರಿಸಿಕೊಂಡ ನಂತರ ಸೈನೈಡ್ ನೀಡಿ ಮಹಿಳೆಯರನ್ನು ಹತ್ಯೆಗೈಯುತ್ತಿದ್ದ ಸರಣಿ ಹಂತಕ ಮಂಗಳೂರಿನ ಮೋಹನ್ ಕುಮಾರ್, ಇದೀಗ ಮೈಸೂರಿನ ಆರತಿ ನಾಯಕ್(22) ಎಂಬಾಕೆಯನ್ನು ಕೊಲೆ ಮಾಡಿರುವ ಅಂಶ ಬಯಲಾಗಿದೆ. ಇದರೊಂದಿಗೆ ಆತ ಕೊಲೆ ಮಾಡಿದ್ದ ಮಹಿಳೆಯರ ಸಂಖ್ಯೆ 19ಕ್ಕೆ ಏರಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರತಿ ನಾಯಕ್ ಕಾಸರಗೋಡು ಪಡ್ರೆ ನಿವಾಸಿ ರಾಮನಾಯ್ಕ ಅವರ ಪುತ್ರಿ. ಮೈಸೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಆರತಿ ಮೃತ ದೇಹ ಪತ್ತೆಯಾಗಿತ್ತು. ಈ ಸಂಬಂಧ 2006ರ ಜ.4ರಂದು ಮೈಸೂರಿನ ಲಷ್ಕರ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಸಿಐಡಿಗೆ ವರ್ಗಾವಣೆಗೊಂಡ ನಂತರ, ಮೃತಪಟ್ಟವರ ಮಾಹಿತಿ ಕಲೆ ಹಾಕಿ ಮೋಹನ್ ಕುಮಾರ್‌ನನ್ನು ವಿಚಾರಣೆಗೆ ಗುರಿಪಡಿಸಿದ ಸಂದರ್ಭ ಈ ಅಂಶ ಬಯಲಾಗಿದೆ.
ಈಗಾಗಲೇ ಹನ್ನೊಂದು ಪ್ರಕರಣಗಳಲ್ಲಿ ಮೋಹನ್ ಕುಮಾರ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಇನ್ನೂ ಏಳು ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಸಿಐಡಿ ಎಸ್ಪಿ ಕೆ.ಪಿ.ಭೀಮಯ್ಯ ತನಿಖೆ ನಡೆಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.
Subscribe to:
Post Comments (Atom)
No comments:
Post a Comment