VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 19, 2010

2 ಮಕ್ಕಳ ಕಿಶೋರ್ ಜೊತೆ 3 ಮಕ್ಕಳ ಹಸೀನಾ ಎಸ್ಕೇಪ್!

ಮೂರು ಮಕ್ಕಳ ತಾಯಿಯೊಬ್ಬಳು, ಮದುವೆಯಾಗಿರುವ ಬಸ್ ಕಂಡಕ್ಟರ್‌ನೊಬ್ಬನ ಜೊತೆ ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಇದೀಗ ಪತ್ನಿಗಾಗಿ ಪತಿ, ಪತಿಗಾಗಿ ಪತ್ನಿ ಪರದಾಡುವ ಸ್ಥಿತಿ ಬಂದೊದಗಿದೆ. ಅಲ್ಲದೇ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಉಳ್ಳಾಲದ ಮೊಯುದ್ದೀನ್ ಎಂಬವರು ಪತ್ನಿ ಹಸೀನಾ ಎಂಬಾಕೆ ಮೂಳೂರಿನ ನಿವಾಸಿ, ಬಸ್ ಕಂಡಕ್ಟರ್ ಆಗಿರುವ ಕಿಶೋರ್ ಎಂಬಾತನ ಜೊತೆ ಕಳೆದ 25ದಿನಗಳ ಹಿಂದೆ ಎಸ್ಕೇಪ್ ಆಗಿದ್ದಾರೆ!.

ಸ್ಥಳೀಯವಾಗಿಯೇ ಗುಸು, ಗುಸುವಾಗುತ್ತಿದ್ದ ಸುದ್ದಿ ಠಾಣೆಯ ಮೆಟ್ಟಿಲೇರುವ ಮೂಲಕ ಬಹಿರಂಗಗೊಂಡಿದೆ. 3ಮಕ್ಕಳ ತಾಯಿಯಾಗಿರುವ ಹಸೀನಾ ಪರ ಪುರುಷನೊಂದಿಗೆ ಪರಾರಿಯಾಗಿರುವುದಾಗಿ ಪತಿ ಮೊಯುದ್ದೀನ್ ಠಾಣೆಯಲ್ಲಿ ಕಿಡ್ನಾಪ್ ದೂರನ್ನು ದಾಖಲಿಸಿದ್ದರೆ, ಎರಡು ಮಕ್ಕಳ ತಂದೆಯಾಗಿರುವ ಕಿಶೋರ್ ತನಗೆ ವಂಚಿಸಿರುವುದಾಗಿ ಪತ್ನಿ ವಿಜಯಲಕ್ಷ್ಮಿ ಕೂಡ ಠಾಣೆಯ ಮೆಟ್ಟಿಲೇರಿದ್ದಾರೆ. ಒಟ್ಟಾರೆ ಪ್ರಕರಣ ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ.

ಘಟನೆ ವಿವರ: ಹಸೀನಾ ತಾಯಿಯ ಮನೆ ಪಡುಬಿದ್ರೆಯಲ್ಲಿರುವ ಕಾರಣ ಆಕೆ ಬಸ್‌ನಲ್ಲಿ ಸಂಚರಿಸುತ್ತಿರುವ ಸಂದರ್ಭದಲ್ಲಿ ಅದೇ ರೂಟ್‌ನಲ್ಲಿ ಕಂಡಕ್ಟರ್ ಆಗಿದ್ದ ಕಿಶೋರ್ ಜೊತೆ ಪ್ರೇಮಾಂಕುರವಾಗಿತ್ತಂತೆ!. ಇದು ಇಂದು ನಿನ್ನೆಯ ಕಥೆಯಲ್ಲ, ಕಳೆದ ಆರು ವರ್ಷಗಳಿಂದ ಒಬ್ಬೊರಿಗೊಬ್ಬರು ಚಿರಪರಿಚಿತರು. ಪ್ರೇಮಬಂಧದಲ್ಲಿ ಸಿಲುಕಿದ್ದ ಕಿಶೋರ್ ಹಾಗೂ ಹಸೀನಾ ತಮ್ಮ ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದಾರೆ.

ಹಸೀನಾ ಮನೆಯಿಂದ ಹೋಗುವಾಗ ಸುಮಾರು 45ಪವನ್ ಚಿನ್ನ ತೆಗೆದುಕೊಂಡು ಹೋಗಿರುವುದಾಗಿ ಪತಿ ಮೊಯುದ್ದೀನ್ ತಿಳಿಸಿದ್ದಾರೆ. ಕಿಶೋರ್ ಚಿನ್ನದ ಆಸೆಗಾಗಿಯೇ ತನ್ನ ಪತ್ನಿ ಹಸೀನಾಳನ್ನು ಕಿಡ್ನಾಪ್ ಮಾಡಿರಬೇಕು ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ದಾಖಲಿಸಿದ್ದಾರೆ.

No comments: