VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 26, 2010

ಟ್ವೆಂಟಿ-20 ವಿಶ್ವಕಪ್; ಪಾಂಡೆಗಿಲ್ಲ, ವಿನಯ್‌ಗೆ ಅವಕಾಶ

ಮುಂಬರುವ ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ಗಾಗಿನ ಭಾರತ ತಂಡ ಪ್ರಕಟಿಸಲಾಗಿದ್ದು, ಅಚ್ಚರಿಯೆಂಬಂತೆ ಕರ್ನಾಟಕದ ಮನೀಷ್ ಪಾಂಡೆ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದರೂ ವೇಗಿ ವಿನಯ್ ಕುಮಾರ್ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಪ್ರಥಮ ದರ್ಜೆ ಹಾಗೂ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವುದೇ ವಿನಯ್ ಆಯ್ಕೆಗೆ ಕಾರಣವಾಗಿದೆ. ಆದರೆ ಮನೀಷ್ ಪಾಂಡೆಯವರನ್ನು ಆಯ್ಕೆಗೆ ಪರಿಗಣಿಸದೇ ಇರುವ ಮೂಲಕ ಆಯ್ಕೆ ಸಮತಿಯು ಭಾರೀ ಟೀಕೆಗೆ ಗುರಿಯಾಗುತ್ತಿದೆ. ಅಮೋಘ ಫಾರ್ಮ್‌ನಲ್ಲಿರುವ ಪಾಂಡೆ ಬದಲಿಗೆ ರೋಹಿತ್ ಶರ್ಮಾರನ್ನು ಆಯ್ಕೆ ಮಾಡಲಾಗಿದೆ.

ರಣಜಿ ಋತುವಿನಲ್ಲಿ ಅತ್ಯಧಿಕ ರನ್ ಸೊರೆಗೈದಿದ್ದ ಪಾಂಡೆ ಸ್ಥಿರ ಪ್ರದರ್ಶನವನ್ನು ಮುಂದುವರಿಸುತ್ತಿದ್ದರೂ ಕೂಡಾ ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ಆಯ್ಕೆ ಸಮಿತಿಯು ಆಯ್ಕೆಗೆ ಪರಿಗಣಿಸುವಲ್ಲಿ ಹಿಂದೇಟು ಹಾಕಿದೆ.

ಅದೇ ರೀತಿ ಯುವರಾಜ್ ಸಿಂಗ್, ಆಶಿಶ್ ನೆಹ್ರಾ, ಗೌತಮ್ ಗಂಭೀರ್ ಕೂಡಾ ಗಾಯದಿಂದ ಪೂರ್ಣವಾಗಿ ಗುಣಮುಖರಾಗಿಲ್ಲ. ಆದರೂ ಆಯ್ಕೆಗೆ ಪರಿಗಣಿಸಲಾಗಿದೆ. ಕಳೆದ ಬಾರಿ ಇದೇ ಪ್ರಮಾದವೆಸಗಿದ್ದ ಆಯ್ಕೆ ಸಮಿತಿ ಸೆಹ್ವಾಗ್‌ರನ್ನು ಆಯ್ಕೆ ಮಾಡುವ ಮೂಲಕ ಭಾರೀ ಟೀಕೆಗೆ ಗುರಿಯಾಗಿತ್ತು.

ತಂಡದಲ್ಲಿ ಏಳು ಬ್ಯಾಟ್ಸ್‌ಮನ್‌ಗಳು, ತಲಾ ಇಬ್ಬರು ಸ್ಪಿನರ್ ಹಾಗೂ ವಿಕೆಟ್ ಕೀಪರುಗಳು ಹಾಗೂ ನಾಲ್ಕು ವೇಗಿಗಳು ಕಾಣಿಸಿಕೊಂಡಿದ್ದಾರೆ.

ಇಶಾಂತ್, ಕೊಹ್ಲಿ, ಶ್ರೀ ಔಟ್...
ಅದೇ ವೇಳೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ನನ್ ವಿರಾಟ್ ಕೊಹ್ಲಿ, ವೇಗಿಗಳಾದ ಇಶಾಂತ್ ಶರ್ಮಾ, ಎಶ್. ಶ್ರೀಶಾಂತ್, ಆರ್. ಪಿ. ಸಿಂಗ್ ಮತ್ತು ಸ್ಪಿನ್ನರ್ ಪ್ರಗ್ಯಾನ್ ಓಜಾ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದವರಲ್ಲಿ ಪ್ರಮುಖರಾಗಿದ್ದಾರೆ.

ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಬಿನ್ ಉತ್ತಪ್ಪ, ಸೌರಭ್ ತಿವಾರಿ ಮತ್ತು ಮುರಳಿ ಕಾರ್ತಿಕ್ ಈ ಹಿಂದೆಯೇ ಘೋಷಿಸಲಾಗಿದ್ದ 30 ಮಂದಿಯ ಸಂಭವನೀಯರ ಪಟ್ಟಿಯಲ್ಲಿಯೇ ಕಾಣಿಸಿಕೊಂಡಿರಲಿಲ್ಲ.

ತಂಡ ಇಂತಿದೆ:

ಮಹೇಂದ್ರ ಸಿಂಗ್ ಧೋನಿ (ನಾಯಕ)
ವೀರೇಂದ್ರ ಸೆಹ್ವಾಗ್ (ಉಪನಾಯಕ)
ಗೌತಮ್ ಗಂಭೀರ್
ಯುವರಾಜ್ ಸಿಂಗ್
ಸುರೇಶ್ ರೈನಾ
ರೋಹಿತ್ ಶರ್ಮಾ
ದಿನೇಶ್ ಕಾರ್ತಿಕ್
ರವೀಂದ್ರ ಜಡೇಜಾ
ಪ್ರವೀಣ್ ಕುಮಾರ್
ಹರಭಜನ್ ಸಿಂಗ್
ಆಶಿಶ್ ನೆಹ್ರಾ
ವಿನಯ್ ಕುಮಾರ್
ಜಹೀರ್ ಖಾನ್
ಪಿಯೂಷ್ ಚಾವ್ಲಾ
ಯೂಸುಫ್ ಪಠಾಣ್

No comments: