VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 23, 2010

‘ನಿಮ್ಮ ಕನಸು ನಮ್ಮ ಸಂಕಲ್ಪ’: ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ


ಬೆಂಗಳೂರು, ಮಾ.೨೨: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜನರ ಮನಗೆಲ್ಲಲು ಬಿಜೆಪಿ ‘ನಿಮ್ಮ ಕನಸು ನಮ್ಮ ಸಂಕಲ್ಪ’ ಎಂಬ ಪ್ರನಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಮುಖವಾಗಿ ೨೦ ಅಂಶಗಳ ಪ್ರನಾಳಿಕೆಯಲ್ಲಿ ಬೆಂಗಳೂರಿನ್ನು ಕೊಳಚೆ ಪ್ರದೇಶ ಮುಕ್ತವನ್ನಾಗಿಸುವ ಭರವಸೆ ನೀಡಲಾಗಿದೆ. ಪ್ರತ್ಯೇಕ ವಿದ್ಯುತ್ ಘಟಕ ಸ್ಥಾಪಿಸುವ ಮೂಲಕ ವಿದ್ಯುತ್ ಸಮಸ್ಯೆ ಬಗೆಹರಿಸುವ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸ್ಥಳೀಯ ನದಿಮೂಲಗಳನ್ನು ಪುನರುಜ್ಜಿವನಗೊಳಿಸುವ ಆಸ್ವಾಸನೆ ನೀಡಲಾಗಿದೆ. ಪ್ರಮುಖ ಸಮಸ್ಯೆಯಾದ ಸಂಚಾರಿ ದಟ್ಟಣೆ ನಿವಾರಣೆಗೆ ೯೩ ರಸ್ತೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿಂದು ಪ್ರನಾಳಿಕೆಯನ್ನು ಬಿಡುಗಡೆ ಮಾಡಿದರು.

ಭರವಸೆಗಳು: ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಅರ್ಕಾವತಿ ಮತ್ತು ಕುಮುದ್ವತಿ ನದಿಯ ಸೆಲೆಗಳನ್ನು ಪುನರುಜ್ಜೀವನಗೊಳಿಸಲಾಗುವುದು.

ಬಿಡದಿ ಬಳಿ ಬೆಂಗಳೂರು ಬಳಕೆಗೆ ಸೀಮಿತವಾಗು ೧೪೦೦ ಮೆಗಾವ್ಯಾಟ್ ಅನಿಲ ಆಧಾರಿತ ವಿದ್ಯುತ್ ಘಟಕ ಸ್ಥಾಪನೆ.
ಮುಂದಿನ ಎರಡು ವರ್ಷಗಳಲ್ಲಿ ನಗರದಲ್ಲಿ ೨೦ ವಾಹನ ನಿಲುಗಡೆ ಸಂಕಿರಣ ನಿರ್ಮಾಣ. ೯೩ ರಸ್ತೆಗಳನ್ನು ನಾಲ್ಕುಪಥಗಳಾಗಿ ಅಭಿವೃದ್ಧಿ. ಕೆ.ಆರ್.ಮಾರುಕಟ್ಟೆ ಮಾದರಿಯಲ್ಲಿ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಶಿಥಲೀಕರಣ ವ್ಯವಸ್ಥೆ ಇರುವ ಹೂವು, ತರಕಾರಿ ಮಾರುಕಟ್ಟೆ ನಿರ್ಮಾಣ.

ಖಾಸಗಿ ಸಹಭಾಗಿತ್ವದಲ್ಲಿ ಒಂದು ವರ್ಷದಲ್ಲಿ ೧೦ ಸ್ಕೆವಾಕರ್ ನಿರ್ಮಾಣ. ಬಿಬಿ‌ಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ ಬಡಾವಣೆಗಳಿಗೆ ಮೂರು ವರ್ಷದಲ್ಲಿ ಒಳಚರಂಡಿ ಸಂಪರ್ಕ. ನಗರದ ಒಳಪ್ರದೇಶಗಳಿದಗೆ ಮೆಟ್ರೋ ಮತ್ತು ಮೋನೋ ರೈಲು ಸಂರ್ಪಕ. ಬೆಂಗಳೂರು ಮಹಾನಗರ ಮೈಸೂರು, ತುಮಕೂರು, ಕೆ.ಆರ್.ಪುರದ ಪ್ರಸ್ತುತ ರೈಲ್ವೆಜಾಲದ ಜೋಡಿಕರಣ ಹಾಗೂ ವಿದ್ಯುತೀಕರಣ ಮಾಡಿ ಮುಂಬೈ ಮಾದರಿಯಲ್ಲಿ ಸ್ಥಳೀಯ ರೈಲು ಸಂಪರ್ಕ.

ಮಹಾನಗರ ಪಾಲಿಕೆಯ ಶಾಲೆಗಳನ್ನು ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಅಭಿವೃದ್ಧಿ. ನಗರದ ನಾಲ್ಕು ಕಡೆಗಳಲ್ಲಿ ಹೈಟೆಕ್ ಆಸ್ಪತ್ರೆಗಳ ನಿರ್ಮಾಣ. ಜನಸ್ನೇಹಿ ಅಕ್ರಮ-ಸಕ್ರಮ ಯೋಜನೆ ಜಾರಿ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಅಬೈಡ್ ಶಿಫಾರಸ್ಸಿನಂತೆ ಬೆಂಗಳೂರು ಮುನ್ನೋಟ-೨೦೨೦ರ ಸಾಕಾರ.

ಜನನ, ಮರಣ ದೃಢೀಕರಣಗಳು, ಖಾತೆ ಮತ್ತು ನಕ್ಷೆ ಅನುಮೋದನೆ, ಅಂಗಡಿ ಮುಂಗಟ್ಟುಗಳ ಲೈಸೆನ್ಸ್ ನಕರಣ ಮುಂತಾದ ಸಂಗತಿಗಳು ಆನ್‌ಲೈನ್‌ಗೊಳಿಸುವುದು. ಹಸಿರು ಸಂತೆಯನ್ನು ನಗರಾದ್ಯಂತ ವಿಸ್ತರಿಸಲಾಗುವುದು ಮತ್ತು ಮರ ನಡೆಯುವ ಯೋಜನೆಯನ್ನು ನಗರಾದ್ಯಂತ ಕೈಗೊಳ್ಳುವುದು.

ಮುಂದಿನ ಹತ್ತು ವರ್ಷದಲ್ಲಿ ಬೆಂಗಳೂರನ್ನು ಕೊಳಚೆ ಪ್ರದೇಶ ಮುಕ್ತ ನಗರವನ್ನಾಗಿ ಮಾಡುವುದು. ನಗರದ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ಮತ್ತು ಖಾತೆ ನೀಡಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವುದು. ದೊಡ್ಡ ಪ್ರಮಾಣದಲ್ಲಿ ಇ-ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕ್ರಮ. ಮುಂದಿನ ೫ ವರ್ಷದಲ್ಲಿ ನಗರದ ೧೦೪ ಕೆರೆಗಳನ್ನು ಸಂಪುರ್ಣವಾಗಿ ಅಭಿವೃದ್ಧಿ ಕೈಗೊಳ್ಳುವುದು. ನಗರಕ್ಕೆ ಎಲ್ಲ ಬಗೆಯ ಸಹಾಯವಾಣಿಗಳಿಗೆ ಒಂದೇ ಸಂಖ್ಯೆಯ ದೂರವಾಣಿಯನ್ನು ಜನಪ್ರಿಯ ಗೊಳಿಸುವುದು. ಅಂಗವಿಕಲರಿಗೂ ನುರಿತ ಸಹಾಯಕರನ್ನೊಳಗೊಂಡ ಡೇಕೇರ್ ಕೇಂದ್ರಗಳನ್ನು ತೆರೆಯಲಾಗುವುದು. ಮಹಾನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ವಾಹನ ಜನದಟ್ಟಣೆಯ ಒತ್ತಡವನ್ನು ನಿವಾರಿಸಲು ಬೆಂಗಳೂರು ಮಹಾನಗರ ನಾಲ್ಕು ದಿಕ್ಕುಗಳಲ್ಲಿ ಉಪಗ್ರಹ ಬಸ್‌ನಿಲ್ದಾಣ ನಿರ್ಮಾಣ.

ಪ್ರತಿವರ್ಷವೂ ಮಹಾನಗರ ಪಾಲಿಕೆ ಸದಸ್ಯರು ತಮ್ಮ ಆಸ್ತಿ ಘೋಷಣೆ ಮಾಡುವುದನ್ನು ಕಡ್ಡಾಯಗೊಳಿಸುವುದು.
ನಾಡಪ್ರಭು ಕೇಂಪೆಗೌಡ ಜನ್ಮದಿನಾಚರಣೆಯನ್ನು ಬೆಂಗಳೂರಿನ ಶ್ರೀಮಂತ ಸಂಸ್ಕೃತಿಯ ಕಲೆ, ಪರಂಪರೆ ಬಿಂಬಿಸಿ ನಾಡಿನ ಮುಂದಿಡಲು ಅದ್ದೂರಿಯಾಗಿ ಬೆಂಗಳೂರಿನ ಹಬ್ಬವನ್ನು ಆಚ್ಚರಿಸಲಾಗುವುದು. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಾಡಪ್ರಭು ಕೇಂಪೆಗೌಡ ಅಂತರಾಷ್ಟ್ರೀಯ ಬೆಂಗಳೂರು ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾಗುವುದು.

No comments: