VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 23, 2010

ಉಡುಪಿ: ಮಧ್ಯರಾತ್ರಿ ಹೋಮ! ಪುತ್ತಿಗೆ ಮಠದಲ್ಲಿ ಅಚ್ಚರಿ ಹುಟ್ಟಿಸಿದ ವಿದ್ಯಮಾನ


ಉಡುಪಿ: ಕಲ್ಸಂಕ ಗುಂಡಿಬೈಲ್‌ ನಡುವೆ ಹಾಡಿಗಾರ್‌ ಗೇಟ್‌ ಬಳಿ ಇರುವ ಪುತ್ತಿಗೆ ಶಾಖಾಮಠದಲ್ಲಿ ಒಂದು ವಾರದಿಂದ ಮಧ್ಯರಾತ್ರಿ ವೇಳೆಯಲ್ಲಿ ಹೋಮ ಹವನ ನಡೆ ಯುತ್ತಿದ್ದು ನಿಜ ವಿಚಾರ ತಿಳಿಯದ ಸುತ್ತುಮುತ್ತಲಿನ ಜನ ಕುತೂಹಲ ಕಾರಿಯಾಗಿ ಮಾತನಾಡಲಾರಂಭಿ ಸಿದ್ದಾರೆ.
ಇತ್ತೀಚಿನವರೆಗೆ ಉಡುಪಿ ಶ್ರೀಕೃಷ್ಣ ಮಠದ ಬಳಿ ಇರುವ ಪುತ್ತಿಗೆ ಮಠದಲ್ಲಿಯೇ ವಾಸ್ತವ್ಯ ಇರುವ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಇತ್ತೀಚಿನ ಕೆಲವು ಸಮಯದಿಂದ ಹಾಡಿಗಾರ್‌ ಗೇಟ್‌ ಬಳಿ ಇರುವ ಅನಂತ ನಿಲಯ ಹೆಸರಿನ ಪುತ್ತಿಗೆ ಶಾಖಾಮಠದಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ನಡುವೆ ಕಳೆದ ಒಂದು ವಾರದಿಂದ ನಿರಂತರ ಹೋಮಹವನಗಳು ನಡೆಯುತ್ತಿದ್ದು, ಇದು ಮಧ್ಯರಾತ್ರಿ ನಂತರವೂ ಮುಂದುವರಿಯುತ್ತಿರುವುದು ಕುತೂಹಲ ಕೆರಳಿಸಿದೆ. ಈ ಹೋಮ ಹವನ ಮಾಡಲು ಬೇರೆ ಬೇರೆ ಪ್ರದೇಶಗಳಿಂದ ಋತ್ವಿಜರು ಮಠಕ್ಕೆ ಬಂದು ಇಳಿಯುತ್ತಿರುವುದು ಕಂಡು ಬರುತ್ತಿದೆ.
ಈ ನಡುವೆ ಪುತ್ತಿಗೆ ಮಠಾಧೀಶರಿಗೆ ಆರೋಗ್ಯ ಸರಿ ಇಲ್ಲ. ಮನಸ್ಸಿಗೆ ಸಮಾಧಾನ ಇಲ್ಲ, ಈ ಕಾರಣಕ್ಕಾಗಿ ಈ ಹೋಮ ಹವನ ಗಳು ನಡೆಯುತ್ತಿದೆ ಎನ್ನುವ ಸುದ್ದಿಯೂ ಕೇಳಿಬರುತ್ತಿದೆ.
ಈ ಶಾಖಾಮಠದಲ್ಲಿ ಈ ಹಿಂದೆ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ ತಮ್ಮ ಮತ್ತು ತಮ್ಮನ ಹೆಂಡತಿ ವಾಸ ಇದ್ದರು. ಅವರನ್ನು ಮಠದಿಂದ ಹೊರಗೆಹಾಕಲಾಗಿದೆ ಎನ್ನಲಾಗಿದೆ. ಈ ಮಠದಲ್ಲಿ ಹತ್ತಾರು ಎಕ್ರೆ ಸ್ಥಳಾವಕಾಶ ಇದೆ. ಈಗ ಈ ಶಾಖಾಮಠದ ಆವರಣವನ್ನು ತಕ್ಕ ಮಟ್ಟಿಗೆ ಚೊಕ್ಕ ಮಾಡಲಾಗಿದೆ.

No comments: