VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 16, 2010

ಬಿಜೆಪಿ ಟೀಮ್‌ಗೆ ವರುಣ್‌ ಗಾಂಧಿ, ಸ್ಮೃತಿ; ಕರಂದ್ಲಾಜೆಗೆ ನಿರಾಸೆ

ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಯವರು ತನ್ನ ನೂತನ ತಂಡವನ್ನು ಪ್ರಕಟಿಸಿದ್ದು ವರುಣ್ ಗಾಂಧಿ, ಸ್ಮೃತಿ ಇರಾನಿ ಸೇರಿದಂತೆ ಯುವಕರು ಹಾಗೂ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಆದರೆ ಭಿನ್ನಮತಗಳ ಕಾರಣದಿಂದ ಸಚಿವೆ ಸ್ಥಾನವನ್ನು ತ್ಯಜಿಸಿದ್ದ ಶೋಭಾ ಕರಂದ್ಲಾಜೆಯವರಿಗೆ ನಿರಾಸೆಯನ್ನುಂಟು ಮಾಡಲಾಗಿದೆ.

ರಾಹುಲ್ ಗಾಂಧಿ, ಜಿತಿನ್ ಪ್ರಸಾದ್, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಸಚಿನ್ ಪೈಲಟ್‌ಗಳು ಕಾಂಗ್ರೆಸ್ಸಿನಲ್ಲಿ ಮಿಂಚುತ್ತಿರುವುದಕ್ಕೆ ತಿರುಮಂತ್ರ ಹಾಕುವ ಸ್ಪಷ್ಟ ಉದ್ದೇಶ ಬಿಜೆಪಿಯ ನೂತನ ತಂಡದಲ್ಲಿ ಕಂಡು ಬರುತ್ತಿದೆ. ಉರಿ ನಾಲಗೆ ಖ್ಯಾತಿಯ ವರುಣ್ ಗಾಂಧಿಯವರನ್ನು ರಾಷ್ಟ್ರೀಯ ಕಾರ್ಯದರ್ಶಿಯವರನ್ನಾಗಿ ನೇಮಕಗೊಳಿಸಿರುವುದು ಬಿಜೆಪಿ ಹಿಂದುತ್ವ ನಿಲುವಿನಿಂದ ಹಿಂದಕ್ಕೆ ಸರಿದಿಲ್ಲ ಎನ್ನುವುದನ್ನೂ ಪ್ರತಿಬಿಂಬಿಸುತ್ತಿದೆ.

ಅತ್ತ ರಾಜಸ್ತಾನ ವಿರೋಧ ಪಕ್ಷದ ನಾಯಕಿ ಹುದ್ದೆಯನ್ನು ಬಲವಂತದಿಂದ ತ್ಯಜಿಸಿದ್ದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆಯವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತರಲಾಗಿದೆ. ಆ ಮೂಲಕ ಅವರನ್ನು ಸಂತೈಸಲು ಯತ್ನಿಸಲಾಗಿದೆ.

ಆದರೆ ಬಳ್ಳಾರಿ ರೆಡ್ಡಿಗಳ ಒಳ ರಾಜಕೀಯದಿಂದಾಗಿ ನಿರಾಶ್ರಿತೆಯಾಗಿದ್ದ ಶೋಭಾ ಕರಂದ್ಲಾಜೆಯವರಿಗೆ ಗಡ್ಕರಿಯವರ ನೂತನ ಪಟ್ಟಿ ನಿರಾಸೆಯನ್ನುಂಟು ಮಾಡಿದೆ. ಕರಂದ್ಲಾಜೆಯವರನ್ನು ರಾಷ್ಟ್ರೀಯ ಸಮಿತಿಗೆ ಸೇರಿಸಿಕೊಳ್ಳಲಾಗುತ್ತದೆ ಎಂದು ಕಳೆದ ಹಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಿದ್ದವು.

ಇತ್ತೀಚೆಗಷ್ಟೇ ರಾಜ್ಯಸಭೆಯಲ್ಲಿ ಮಹಿಳಾ ವಿಧೇಯಕ ಮಸೂದೆಯು ಅಂಗೀಕಾರ ಪಡೆದುಕೊಂಡಿರುವುದನ್ನು ಬಿಜೆಪಿಯ ನೂತನ ತಂಡಕ್ಕೂ ಅನ್ವಯಿಸಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಬಿಜೆಪಿಯ ಪಟ್ಟಿಯಲ್ಲಿ ಹಲವು ಮಹಿಳೆಯರ ಮುಖ ಕಾಣಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ.

ಬಿಜೆಪಿ ಉಪಾಧ್ಯಕ್ಷರುಗಳು:
ಶಾಂತ ಕುಮಾರ್, ಕಾಲ್ರಾಜ್ ಮಿಶ್ರಾ, ವಿನಯ್ ಕಟಿಯಾರ್, ಭಗತ್ ಸಿಂಗ್ ಕೋಶಿಯಾರಿ, ಮುಖ್ತಾರ್ ಅಬ್ಬಾಸ್ ನಖ್ವಿ, ಕರುಣಾ ಶುಕ್ಲಾ, ನಜ್ಮಾ ಹೆಫ್ತುಲ್ಲಾ, ಹೇಮಾ ಮಾಲಿನಿ, ಬಿಜೋಯಾ ಚಕ್ರವರ್ತಿ, ಪುರುಷೋತ್ತಮ ರೂಪಾಲ, ಕಿರಣ್ ಘಾಯ್.

ಪ್ರಧಾನ ಕಾರ್ಯದರ್ಶಿಗಳು:
ಅನಂತ್ ಕುಮಾರ್, ತಾವರ್‌ಚಂದ್ ಗೆಹ್ಲಾಟ್, ವಸುಂಧರಾ ರಾಜೆ, ವಿಜಯ್ ಗೋಯಲ್, ಅರ್ಜುನ್ ಮುಂಡಾ, ರವಿಶಂಕರ್ ಪ್ರಸಾದ್ (ಪ್ರಧಾನ ವಕ್ತಾರ), ಧರ್ಮೇಂದ್ರ ಪ್ರಧಾನ್, ನರೇಂದ್ರ ಸಿಂಗ್ ತೋಮರ್, ಜಗತ್ ಪ್ರಕಾಶ್ ನಡ್ಡಾ, ರಾಮ್ ಲಾಲ್ (ಸಂಘಟನೆ), ವಿ. ಸತೀಶ್ (ಸಂಘಟನಾ ಜಂಟಿ ಪ್ರಧಾನ ಕಾರ್ಯದರ್ಶಿ), ಶ್ರೀ ಸೌದಾನ್ ಸಿಂಗ್ (ಸಂಘಟನಾ ಜಂಟಿ ಪ್ರಧಾನ ಕಾರ್ಯದರ್ಶಿ).

ರಾಷ್ಟ್ರೀಯ ಕಾರ್ಯದರ್ಶಿಗಳು:
ವರುಣ್ ಗಾಂಧಿ, ಸಂತೋಷ್ ಗಂಗ್ವಾರ್, ಸೃತಿ ಇರಾನಿ, ಸರೋಜ್ ಪಾಂಡೆ, ಕಿರಣ್ ಮಹೇಶ್ವರಿ, ತಪಿರ್ ಗಾವ್, ನವಜೋತ್ ಸಿಂಗ್ ಸಿಧು, ಅಶೋಕ್ ಪ್ರಧಾನ್, ಮುರಳೀಧರ್ ರಾವ್, ಡಾ. ಕಿರೀಟ್ ಸೋಮಯ್ಯ, ಡಾ. ಲಕ್ಷ್ಮಣ್, ಕ್ಯಾಪ್ಟನ್ ಅಭಿಮನ್ಯು, ಆರತಿ ಮೆಹ್ರಾ, ಭೂಪೇಂದ್ರ ಯಾದವ್, ಕುಮಾರಿ ವಾಣಿ ತ್ರಿಪಾಠಿ.

ಬಿಜೆಪಿ ಸಂಸದೀಯ ಮಂಡಳಿ:
ನಿತಿನ್ ಗಡ್ಕರಿ (ಅಧ್ಯಕ್ಷ), ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಎಂ. ವೆಂಕಯ್ಯ ನಾಯ್ಡು, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮತ್ತು ಬಾಳ್ ಅಪ್ಟೆ.

ರಾಷ್ಟ್ರೀಯ ವಕ್ತಾರರು:
ಪ್ರಕಾಶ್ ಜಾವಡೇಕರ್, ರಾಜೀವ್ ಪ್ರತಾಪ್ ರೂಢಿ, ಶಹ್ನಾವಾಜ್ ಹುಸೇನ್, ರಾಮನಾಥ್ ಕೋವಿಂದ್, ತರುಣ್ ವಿಜಯ್, ನಿರ್ಮಲಾ ಸೀತಾರಾಮನ್.

ಖಜಾಂಚಿ: ಪಿಯೂಶ್ ಗೋಯಲ್

No comments: