
ಕಾಪು, ಮಾ. ೧೬: ಸಮಾಜವಾದಿ ಪಕ್ಷದಿಂದ ತನ್ನನ್ನು ಉಚ್ಚಾಟಿಸಲಾಗಿದ್ದರೂ ಮುಂದೆ ಯಾವು ದೇ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಪ್ರಶ್ನೆಯೇ ಇಲ್ಲ . ತನ್ನ ಬೆಂಬಲಿಗರು ಹಾಗೂ ಹಿಂದುಳಿದ ವರ್ಗ ದವರ ಏಳಿಗೆಗಾಗಿ ನಿರಂತರವಾಗಿ ಪ್ರಯತ್ನಿಸುವುದಾಗಿ ಸಮಾಜವಾದಿ ಪಕ್ಷದ ಉಚ್ಚಾಟಿತ ನಾಯಕ ಸಂಸದ ಅಮರ್ ಸಿಂಗ್ ಹೇಳಿದ್ದಾರೆ.
ಅವರು ಇಲ್ಲಿನ ಗುತ್ತಿಗೆದಾರ ಕಾಪು ವಾಸುದೇವ ಶೆಟ್ಟಿ ಅವರ ಮನೆಗೆ ಭೇಟಿ ನೀಡಿದ ಸಂದರ್ಭ ಪತ್ರಿಕೆಯೊಂದಿಗೆ ಮಾತನಾಡಿದರು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಇದನ್ನೇ ಮಾಧ್ಯಮವು ತಪ್ಪಾಗಿ ಅರ್ಥೈಸಿ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ಜಾಹೀರು ಮಾಡುತ್ತಿದೆ ಎಂದರು.
ಮಹಿಳಾ ಮೀಸಲಾತಿಯನ್ನು ನಾನು ವಿರೋಧಿಸುವುದಿಲ್ಲ. ಮೀಸಲಾತಿ ವಿರೋಧಿಗಳು ಮಹಿಳೆ ಯರ ವಿರೋಧಿಗಳು ಎಂದರ್ಥ ಕಲ್ಪಿಸುವುದು ಉತ್ತಮ ಎಂದರು.
ಸಮಾಜವಾದಿ ಪಕ್ಷವು ಕಾರ್‍ಯಕರ್ತರಿಂದ ಬೆಳದುಬಂದ ಪಕ್ಷವಾಗಿದೆ. ಆದರೆ ಇಂದು ಅದರ ಪರಮೋಚ್ಚ ನಾಯಕ ಮುಲಾಯಂ ಸಿಂಗ್ ಯಾದವ್ ತಮ್ಮ ಸಂಬಂಧಿಗಳ ಮಾತಿಗೆ ಮರುಳಾ ಗಿ ನಾಯಕರುಗಳ ಪಕ್ಷವೆಂದು ಬಿಂಬಿಸ ಹೊರಟಿದ್ದಾರೆ. ಇದಕ್ಕೆಲ್ಲ ಮುಂದೆ ಜನರಿಂದಲೇ ಉತ್ತರ ದೊರಕುತ್ತದೆ ಎಂದರು.
ಕೊಲ್ಲೂರಿಗೆ ಅಮರ್‌ಸಿಂಗ್
ಕೊಲ್ಲೂರು: ಸಮಾಜವಾದಿ ಪಕ್ಷದ ಉಚ್ಚಾಟಿತ ನಾಯಕ, ಸಂಸದ ಅಮರ್‌ಸಿಂಗ್ ಹಾಗೂ ಸಂಸದೆ, ಚಿತ್ರನಟಿ ಜಯಪ್ರದಾ ಅವರು ಮಂಗಳವಾರ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಚಂಡಿಕಾ ಯಾಗ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ. ಕಾಳಿ, ಅಧೀಕ್ಷಕ ಕೃಷ್ಣಮೂರ್ತಿ, ರಾಮಕೃಷ್ಣ ಅಡಿಗ, ಅರ್ಚಕ ಸುರೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಮೂಡೆ, ಪುಂಡಿ ಸವಿದ ಅಮರ್
ಕರಾವಳಿಯ ಪ್ರಸಿದ್ಧ ಖಾದ್ಯ ಪದಾರ್ಥಗಳಾದ ನೀರು ದೋಸೆ ಚಟ್ನಿ, ಮೂಡೆ ಸಾಂಬಾರ್, ಪುಂಡಿ ರಹಿತ ವಿವಿಧ ಖಾದ್ಯ ತಿನಿಸುಗಳ ಸವಿಯನ್ನು ಸವಿದ ಅವರು ಈ ಪದಾರ್ಥಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರಾವಳಿಯಲ್ಲಿ ವಿಶೇಷ ತಿಂಡಿ ತಿನಿಸುಗಳ ಬಗ್ಗೆ ಮಾಹಿತಿಯೂ ಪಡೆದರು.
No comments:
Post a Comment