VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 17, 2010

ಹೆಬ್ರಿ: ವಿಕ್ರಮಾರ್ಜುನ ಹೆಗ್ಡೆ ಮನೆಗೆ ನುಗ್ಗಿ ಮನೆಯ೦ಗಳದಲ್ಲೇ ಊಟ ಮಾಡಿ ಹೋದ ನಕ್ಸಲರು

ಹೆಬ್ರಿ , ಮಾ. ೧೬: ನಾಲ್ಕು ಜನರ ನಕ್ಸಲ್ ತಂಡ ಮಾ. ೧೬ರಂದು ಮಧ್ಯಾಹ್ನ ೧೨.೩೦ರ ಹೊತ್ತಿ ಗೆ ಹೆಬ್ರಿ ಸಮೀಪ ತಿಂಗಳೆಯಲ್ಲಿರುವ ಬಿಜೆಪಿ ಮುಖಂಡ ವಿಕ್ರಮಾರ್ಜುನ ಹೆಗ್ಡೆ ಅವರ ಮನೆಗೆ ನುಗ್ಗಿ ಅಡುಗೆ ಸಾಮಾನುಗಳನ್ನು ತೆಗೆದು ಮನೆಯಂಗಳದಲ್ಲೇ ಅಡುಗೆ ಮಾಡಿ ಊಟ ಮಾಡಿ ಹೋಗಿರುವ ಘಟನೆ ವರದಿಯಾಗಿದೆ.

ಈ ಸಂದರ್ಭದಲ್ಲಿ ಮನೆಯಲ್ಲಿ ಕೆಲಸ ಮಾಡುವವರು ಮಾತ್ರ ಇದ್ದು ಕೆಲಸದಾತ ಸತೀಶ್ ಶೆಟ್ಟಿ ಅವರಲ್ಲಿ ಮನೆಯ ಯಜಮಾನ ನಿನಗೆ ಎಷ್ಟು ಕೂಲಿ ಕೊಡುತ್ತಾರೆ ಎಂದು ವಿಚಾರಿಸಿರುತ್ತಾರೆ ಹಾಗೂ ವಿಕ್ರಮಾರ್ಜುನ ಹೆಗ್ಡೆ ಅವರಿಗೆ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ತಿಳಿದುಬಂದಿದೆ.

ಮನೆಯಲ್ಲಿ ಸಾಮಾನ್ಯವಾಗಿ ೧೦-೧೨ ಮಂದಿ ಇರುತ್ತಿದ್ದರು. ಇಂದು ಯುಗಾದಿ ಆಗಿದ್ದರಿಂದ ಸತೀಶ್ ಒಬ್ಬರೇ ಇದ್ದರು. ಅವರು ೩.೩೦ರ ಸುಮಾರಿಗೆ ಹಾಲು ಕರೆಯಲು ಇದೆ ಎಂದು ಹೇಳಿ ಹಟ್ಟಿಯಿಂದ ನೇರ ಹೊರಗೆ ಬಂದು ಹೆಗ್ಡೆ ಅವರಿಗೆ ಮಾಹಿತಿ ತಿಳಿಸಿದರು ಎಂದು ತಿಳಿದುಬಂದಿದೆ.

ಉಳ್ಳಾಲ: ಲಾರಿ - ಕಾರು ಢಿಕ್ಕಿ: ನೇತ್ರಾವತಿ ಸೇತುವೆಯಲ್ಲಿ ಕೆಲವು ತಾಸುಗಳ ತನಕ ಸಂಚಾರ ವ್ಯತ್ಯಯ

ಉಳ್ಳಾಲ, ಮಾ. ೧೬: ಇಲ್ಲಿನ ನೇತ್ರಾವತಿ ಸೇತುವೆಯಲ್ಲಿ ಮಂಗಳವಾರ ಅಪರಾಹ್ನ ೩ ಗಂಟೆ ವೇಳೆಗೆ ಲಾರಿ ಮತ್ತು ಕಾರು ಮುಖಾಮುಖಿ ಢಿಕ್ಕಿ ಹೊಡೆದ ಕಾರಣ ರಸ್ತೆ ತಡೆ ಉಂಟಾಗಿ ಸುಮಾರು ೩ ಗಂಟೆಗೂ ಅಧಿಕ ಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಘಟನೆಯಲ್ಲಿ ಕಾರಿನ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಕೇರಳದಿಂದ ಮಂಗಳೂರಿನತ್ತ ಬರುತ್ತಿದ್ದ ಕಾಸರಗೋಡು ನೋಂದಣಿಯ ಕಾರಿಗೆ ತೊಕ್ಕೊಟ್ಟು ಕಡೆಗೆ ಮರಳು ಹೇರಿಕೊಂಡು ಹೋಗುತ್ತಿದ್ದ ಲಾರಿ ನೇತ್ರಾವತಿ ಸೇತುವೆಯ ಮಧ್ಯಭಾಗದಲ್ಲಿ ಢಿಕ್ಕಿ ಹೊಡೆಯಿತು.

ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದ್ದು, ಲಾರಿಯ ಹಿಂಬದಿಯ ಎರಡು ಚಕ್ರಗಳು ಕಿತ್ತು ಹೋಗಿ ದ್ದರಿಂದ ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಲು ಭಾರೀ ಪ್ರಯಾಸ ಪಡಬೇಕಾಯಿತು. ಸೇತುವೆಯ ಎರಡೂ ಕಡೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು.

ಘಟನಾ ಸ್ಥಳಕ್ಕೆ ಉಳ್ಳಾಲ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡರು. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಸಚಿವರಿಗಾಗಿ ಕಾಯುತ್ತಿದೆ ಮ೦ಗಳೂರು-ಮಣಿಪಾಲ ನಡುವಿನ ವೋಲ್ವೊ ಬಸ್

ಮಂಗಳೂರು, ಮಾ. ೧೬: ನಿರೀಕ್ಷಿಸಿದಂತೆಯೇ ನಡೆದಿದ್ದರೆ ಈ ವೇಳೆಗೆ ಮಂಗಳೂರು- ಮಣಿಪಾ ಲ ನಡುವೆ ವೋಲ್ವೊ ಬಸ್ ಸಂಚಾರ ಆರಂಭವಾಗಿರುತ್ತಿತ್ತು. ಕೆ‌ಎಸ್‌ಆರ್‌ಟಿಸಿ ಮಂಗಳೂರು ವಿಭಾಗ ಪೂರ್ಣ ಸಜ್ಜಾಗಿದ್ದರೂ ರಾಜ್ಯದ ಸಾರಿಗೆ ಸಚಿವ ಆರ್. ಅಶೋಕ್ ಅವರು ಬಂದು ಉದ್ಘಾ ಟಿಸುವುದಕ್ಕಾಗಿ ಸಾರಿಗೆ ಇಲಾಖೆ ಕಾಯುತ್ತಿದೆ !

ಆರಂಭದಲ್ಲಿದ್ದ ವಿಘ್ನಗಳೆಲ್ಲ ನಿವಾರಣೆಯಾಗಿದ್ದರೂ ಈಗ ಬರೇ ಸಚಿವರಿಗಾಗಿ ಕಾಯುತ್ತಾ ದಿನ ಕಳೆಯುತ್ತಿರುವುದು ನಿಜಕ್ಕೂ ಆಶ್ಚರ್ಯಕರ. ಸಚಿವರಿಗೆ ಸಮಯ ಇಲ್ಲ ಎಂದಾದರೆ ಜಿಲ್ಲಾ ಉಸ್ತು ವಾರಿ ಸಚಿವರ ಮೂಲಕವಾದರೂ ಉದ್ಘಾಟಿಸಿ ಸಾರ್ವಜನಿಕರ ಸೇವೆಗೆ ಬಸ್‌ಗಳನ್ನು ಒದಗಿಸ ಲು ಏಕೆ ವಿಳಂಬ ಮಾಡುತ್ತಿದ್ದಾರೆಯೋ ಗೊತ್ತಿಲ್ಲ.

ಆರಂಭದಲ್ಲಿ ಯೋಜನೆ ಅನುಷ್ಠಾನಕ್ಕೆ ವೋಲ್ವೊ ಬಸ್‌ಗಳ ಕೊರತೆ ಕಂಡುಬಂದರೂ ಇಲಾಖೆ ಈ ಸಮಸ್ಯೆಯನ್ನು ಈಗಾಗಲೇ ನಿವಾರಿಸಿಕೊಂಡಿದೆ ಆಡಳಿತಾತ್ಮಕ ಹಾಗೂ ತಾಂತ್ರಿಕ ಸಮಸ್ಯೆ ಗಳು ಕೂಡ ನಿವಾರಣೆಗೊಂಡು ಯಾವುದೇ ಕ್ಷಣದಲ್ಲಿ ಹೊಸ ಸೇವೆ ಆರಂಭಿಸಲು ಇಲಾಖೆ ಸರ್ವ ಸನ್ನದ್ಧಗೊಂಡಿದೆ. ೬ ವೋಲ್ವೊ ಬಸ್‌ಗಳು ಮಂಗಳೂರು ಕೆ‌ಎಸ್ಸಾರ್ಟಿಸಿ ಕಾರ್‍ಯಾಗಾರದಲ್ಲಿ ಕಾಯುತ್ತಿವೆ.

ವೋಲ್ವೊ ಬಸ್ ಸೇವೆಯನ್ನು ಸಮೀಪದ ಇತರ ಜಿಲ್ಲೆಗಳಿಗೂ ವಿಸ್ತರಿಸುವ ಯೋಜನೆ ಸರಕಾರದ ಮುಂದಿದೆ. ಈಗಾಗಲೇ ಸರಕಾರಿ ಬಸ್‌ಗಳ ಓಡಾಟದಲ್ಲಿ ಮೇಲುಗೈ ಪಡೆದಿರುವ ಮಂಗಳೂರು- ಕಾಸರಗೋಡು ನಡುವೆ ಈ ಸೇವೆಯನ್ನು ಆರಂಭಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಪ್ರಸ್ತಾವಿಸಿದ್ದಾರೆ.

ಮಂಗಳೂರು-ಮಣಿಪಾಲ ನಡುವೆ ವೋಲ್ವೊ ಓಡಿಸುವ ಯೋಜನೆಯನ್ನು ವರ್ಷದ ಹಿಂದೆಯೇ ಸಚಿವರು ಪ್ರಕಟಿಸಿದ್ದರು. ಹಲವು ಕಾರಣಗಳಿಂದ ಯೋಜನೆ ವಿಳಂಬವಾಯಿತು. ಬೆಂಗಳೂರು, ಮೈಸೂರು ಅನಂತರ ರಾಜ್ಯದಲ್ಲಿ ಅಂತರ್ ಜಿಲ್ಲಾ ಸಿಟಿ ವೋಲ್ವೊ ಬಸ್ ಸೇವೆ ಪಡೆಯುತ್ತಿರುವ ಮೂರನೇ ವಿಭಾಗವಾಗಿ ಮಂಗಳೂರು ಗುರುತಿಸಿ ಕೊಳ್ಳುತ್ತಿರುವ ಕಾರಣ ಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲೇ ಅದ್ದೂರಿಯಾಗಿ ಉದ್ಘಾಟನಾ ಸಮಾರಂ ಭ ಏರ್ಪಡಿಸಲು ಇಲಾಖೆ ಉದ್ದೇಶಿಸಿದೆ. ಆ ದಿನ ಎಂದು ಬರುತ್ತದೊ?

ಜನ ಕಾಯುತ್ತಿದ್ದಾರೆ !
ಬಹುನಿರೀಕ್ಷಿತ ವೋಲ್ವೊ ಬಸ್ ಸಂಚಾರ ಆರಂಭವಾಗುವುದನ್ನು ಜನ ಕಾಯುತ್ತಿದ್ದಾರೆ. ಅದೂ ರಣ ಬಿಸಿಲಿನ ಈ ದಿನಗಳಲ್ಲಂತೂ ಸಾಮಾನ್ಯ ಬಸ್‌ಗಳಲ್ಲಿ ಜನರು ಬೆವತು ಒದ್ದೆಯಾಗುತ್ತಿದ್ದಾರೆ. ಈ ನಡುವೆ ವೋಲ್ವೊ ಬಸ್‌ಗಳು ಮಂಗಳೂರು ಡಿಪೊಗೆ ಬಂದು ನಿಂತಿದ್ದರೂ ಜನರಲ್ಲಿ ಇನ್ನೂ ಸಂಶಯ ನಿವಾರಣೆಯಾಗಿಲ್ಲ. ನಿಜಕ್ಕೂ ಬಸ್ ಸಂಚಾರ ಆರಂಭವಾಗುತ್ತದೆಯೇ ಎಂಬ ಪ್ರಶ್ನೆ ಎಲ್ಲೆಲ್ಲೂ ಸಾಮಾನ್ಯವಾಗಿದೆ.

No comments: