
wd
ಬೆಂಗಳೂರು:ಮುಂಬರುವ ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ಗಾಗಿನ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿರುವ ಕರ್ನಾಟಕದ ವೇಗದ ಬೌಲರ್ ವಿನಯ್ ಕುಮಾರ್, ಕಠಿಣ ಪ್ರಯತ್ನಕ್ಕೆ ಸಂದ ಫಲ ಎಂದು ಹೇಳಿಕೊಂಡಿದ್ದಾರೆ.
ಕಳೆದ ನಾಲ್ಕು ರಣಜಿ ಋತುವಿನಲ್ಲಿ ಸ್ಥಿರತೆಯ ಪ್ರದರ್ಶನ ನೀಡಿ ಬರುತ್ತಿರುವ 'ದಾವಣಗೆರೆ ಎಕ್ಸ್‌ಪ್ರೆಸ್' ಕೊನೆಗೂ ಆಯ್ಕೆ ಸಮಿತಿಯ ಗಮನ ಸೆಳೆಯುವಲ್ಲಿ ಸಫಲರಾಗಿದ್ದಾರೆ.
ಪ್ರಸಕ್ತ ರಣಜಿ ಋತುವಿನಲ್ಲಿ 46 ವಿಕೆಟುಗಳನ್ನು ಪಡೆದಿದ್ದ ವಿನಯ್ 54 ರಣಜಿ ಪಂದ್ಯಗಳಲ್ಲಾಗಿ ಒಟ್ಟು 202 ವಿಕೆಟುಗಳನ್ನು ಪಡೆದಿದ್ದಾರೆ. ಅದೇ ರೀತಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ.
ಟೀಮ್ ಇಂಡಿಯಾದದಿಂದ ಕರೆ ಲಭಿಸಿದ ನಂತರ ಪ್ರತಿಕ್ರಿಯಿಸಿದ 26ರ ಹರೆಯದ ವಿನಯ್, ಕೊನೆಗೂ ನನ್ನ ಪ್ರತಿಭೆಯನ್ನು ಗುರುತಿಸಿಕೊಳ್ಳುವಲ್ಲಿ ಸಫಲನಾಗಿದ್ದೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾನು ಅತಿಯಾದ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಆದರೆ ಇದೀಗ ಅವಕಾಶ ಸಿಕ್ಕಿರುವುದು ಅವಿಸ್ಮರಣೀಯ ಕ್ಷಣ. ಇದಕ್ಕಾಗಿ ಕಾಯುತ್ತಿದ್ದೆ ಎಂದವರು ಹೇಳಿದರು.
ಇದೀಗ ನನ್ನ ಜವಾಬ್ದಾರಿ ಹೆಚ್ಚಿದ್ದು, ಒಂದು ವೇಳೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿದರೆ ಕರ್ನಾಟಕ ಹಾಗೂ ದಾವಣಗೆರೆ ಜನತೆಗೆ ಹೆಮ್ಮೆ ತರುವಂತಹ ಪ್ರದರ್ಶನ ನೀಡಲಿದ್ದೇನೆ ಎಂದವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಕುಂಬ್ಳೆ ಅಭಿನಂದನೆ...
ಅದೇ ವೇಳೆ ಕಾಣಿಸಿಕೊಂಡಿರುವ ವಿನಯ್ ಕುಮಾರ್‌ರನ್ನು ಮಾಜಿ ಲೆಗ್ ಸ್ಪಿನ್ ದಿಗ್ಗಜ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಅನಿಲ್ ಕುಂಬ್ಳೆ ಅಭಿನಂದಿಸಿದ್ದು, ವಿನಯ್ ಇದೀಗ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗಿದೆ ಎಂದವರು ಹೇಳಿದರು.
No comments:
Post a Comment