VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 10, 2010

ನಕಲಿ ಸ್ವಾಮೀಜಿಗಳನ್ನು ನೇಣಿಗೆ ಹಾಕಿ: ಬಾಬಾ ರಾಮದೇವ್

ಶಿಮ್ಲಾ, ಬುಧವಾರ, 10 ಮಾರ್ಚ್ ೨೦೧೦:
ಸ್ವಾಮೀಜಿಗಳ ಕಾಮಕಾಂಡಗಳು ಬಹಿರಂಗವಾಗುತ್ತಿರುವುದರಿಂದ ಮುಜುಗರಕ್ಕೊಳಗಾಗಿರುವ ಯೋಗಗುರು ಸ್ವಾಮಿ ರಾಮದೇವ್, ಧರ್ಮದ ಹೆಸರಿನಲ್ಲಿ ಕುಕೃತ್ಯಗಳನ್ನು ಎಸಗುವ ನಕಲಿ ಆಧ್ಯಾತ್ಮಿಕ ಗುರುಗಳಿಗೆ ಮರಣ ದಂಡನೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.ಲೈಂಗಿಕ ಪ್ರಕರಣಗಳು ಮತ್ತು ಹಣಕಾಸು ಅವ್ಯವಹಾರಗಳ ಆರೋಪಗಳನ್ನು ಹೊತ್ತುಕೊಂಡಿರುವ ಕೆಲವು ಸ್ವಾಮೀಜಿಗಳ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಾ ಅವರು, ಪ್ರತಿಯೊಬ್ಬರೂ 'ಬಾಬಾ'ಗಳಾಗುವುದನ್ನು ತಡೆಯುವುದಕ್ಕಾಗಿ ಇಲ್ಲಿ ಕನಿಷ್ಠ ಅರ್ಹತೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಈ ಸಂಬಂಧ ನಾನು ಪ್ರಮುಖ ಧಾರ್ಮಿಕ ಗುರುಗಳ ಜತೆ ಮಾತುಕತೆ ನಡೆಸುತ್ತೇನೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಯೋಗಗುರು ತಿಳಿಸಿದ್ದಾರೆ.ಭಾರತೀಯ ಪತ್ರಿಕಾ ಮಂಡಳಿಯಂತಹ (ಪಿಸಿಐ) ಕಾವಲು ಸಮಿತಿ ಇಂತಹ ನಕಲಿ ಸ್ವಾಮೀಜಿಗಳಿಂದಾಗಿ ಅಗತ್ಯವಿದೆ ಎಂಬ ವಾದಕ್ಕೆ ನಿಮ್ಮ ಬೆಂಬಲವಿದೆಯೇ ಮತ್ತು ಅಂತಹ ಸಮಿತಿಯೊಂದಿದ್ದರೆ ಅದರಲ್ಲಿ ನೀವೂ ಸೇರಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಅವರು, ಅದಕ್ಕಾಗಿ ನಮ್ಮಲ್ಲಿ ಸಾಕಷ್ಟು ಅರ್ಹ ಮಂದಿಯಿದ್ದಾರೆ; ಇದರಲ್ಲಿ ನಾನು ಪಾಲ್ಗೊಳ್ಳಬೇಕಾದ ಅಗತ್ಯವಿಲ್ಲ ಎಂದರು.ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಗಳ ಸೋಗು ಹಾಕಿಕೊಂಡು ಜನರಿಗೆ ಮಂಕುಬೂದಿ ಎರಚುತ್ತಾ, ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಹಲವು ಪ್ರಸಂಗಗಳು ಬಯಲಾಗುತ್ತಿವೆ. ಕೆಲವು ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಇಚ್ಛಾದರಿ ಭೀಮಾನಂದ ಎಂಬುವವನು ಹೈಟೆಕ್ ವೇಶ್ಯಾವಾಟಿಕೆ ನಡೆಸಿ ಸಿಕ್ಕಿ ಬಿದ್ದ ಬೆನ್ನಿಗೆ, ತಮಿಳುನಾಡು ಮೂಲದ ಬಿಡದಿಯಲ್ಲಿ ಮುಖ್ಯ ಆಶ್ರಮ ಹೊಂದಿರುವ ಪರಮಹಂಸ ನಿತ್ಯಾನಂದ ಸ್ವಾಮಿ ಎಂಬಾತ ತಮಿಳು ನಟಿಯೊಂದಿಗೆ ಅಶ್ಲೀಲ ಭಂಗಿಗಳಲ್ಲಿ ಕಾಣಸಿಕೊಂಡ ವೀಡಿಯೋಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಹಿರಂಗವಾಗಿದ್ದವು.ಮಹಿಳೆಯರಿಗೆ ಸಂಸತ್ ಮತ್ತು ರಾಜ್ಯ ಚುನಾವಣೆಗಳಲ್ಲಿ ಶೇ.33ರ ಮೀಸಲಾತಿ ನೀಡುವ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ಸಿಕ್ಕಿರುವುದನ್ನು ಪ್ರಸ್ತಾಪಿಸಿದ ಅವರು, ಮಹಿಳಾ ಮೀಸಲಾತಿ ಮಸೂದೆಗೆ ತನ್ನ ಸಂಪೂರ್ಣ ಬೆಂಬಲವಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

No comments: