ಕಾಸರಗೋಡು, ಮಾ.೧೨: ಯುವತಿಯರ ಸರಣಿ ಕೊಲೆ ಆರೋಪಿ ಮೋಹನ್‌ಕುಮಾರ್ ಯಾನೆ ಆನಂದ (೩೬)ನನ್ನು ವಿಚಾರಣೆಗಾಗಿ ಸಿಐಡಿ ಪೊಲೀಸರು ಕಾಸರಗೋಡು, ಕುಂಬಳೆಗೆ ಕರೆತಂದಿದ್ದರು.
ಪೈವಳಿಕೆ ಕಳಾಯಿಯ ಸಾವಿತ್ರಿ, ಪೆರಾಜೆಯ ಕಾವೇರಿ ಮತ್ತು ಬಂದ್ಯೋಡ್ ಕೊಕ್ಕೆಚಾಲ್‌ನ ವಿಜಯಲಕ್ಷ್ಮಿ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಿಗಿ ಭದ್ರತೆ ನಡುವೆ ಬೆಂಗಳೂರು ಸಿಐಡಿ ಪೊಲೀಸರು ಮೋಹನ್‌ಕುಮಾರ್‌ನನ್ನು ಮಂಜೇಶ್ವರ, ಕುಂಬಳೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ.
ಮೋಹನ್‌ಕುಮಾರ್ ಹತ್ಯೆಗೈಯಲ್ಪ ಟ್ಟಿದ್ದಾರೆ ಎನ್ನಲಾದ ಪೈವಳಿಕೆ ಕಳಾಯಿಯ ಸಾವಿತ್ರಿ ಹಾಗೂ ಪೆರಾಜೆಯ ಕಾವೇರಿ ಎಂಬವರಿಗೆ ಸೇರಿದ ೩ ಪವನ್ ಚಿನ್ನಾ ಭರಣವನ್ನು ತೊಕ್ಕೊಟ್ಟಿನ ಖಾಸಗಿ ಫೈನಾನ್ಸ್‌ವೊಂದರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡಿನ ಐವರು ಸೇರಿದಂತೆ ೨೦ಕ್ಕೂ ಅಧಿಕ ಯುವತಿಯರನ್ನು ಹತ್ಯೆಗೈದ ಆರೋಪ ಮೋಹನ್‌ಕುಮಾರ್ ಮೇಲಿದೆ.
Subscribe to:
Post Comments (Atom)
No comments:
Post a Comment