
ನವದೆಹಲಿ : ತೀವ್ರ ರೀತಿಯ ಸಂಶಯಗಳಿಗೆ ಕಾರಣವಾಗಿರುವ ದೆಹಲಿಯ ಬಾಟ್ಲಾ ಹೌಸ್ ನಲ್ಲಿ ನಡೆದ ಇಬ್ಬರು ಮುಸ್ಲಿಂ ವಿಧ್ಯಾರ್ಥಿಗಳಾದ ಆತಿಫ್ ಮತ್ತು ಸಾಜಿದ್ ರವರ ಮರಣೋತ್ತರ ಪರೀಕ್ಷಾ ವರದಿ ಬಹಿರಂಗಗೊಂಡಿದ್ದು ಎನ್ಕೌಂಟರ್ ಮುನ್ನ ಇವರಿಬ್ಬರ ಮೇಲೆ ತೀವ್ರ ರೀತಿಯ ಹಲ್ಲೆ ನಡೆಸಲಾಗಿದೆ ಎಂಬ ಅಂಶ ಆ ಮೂಲಕ ಬೆಳಕಿಗೆ ಬಂದಿದೆ.
ಇದರೊಂದಿಗೆ ಈ ಎನ್ಕೌಂಟರ್ ನಕಲಿ ಎಂದು ಆರೋಪಿಸುತಿದ್ದ ಮಾನವ ಹಕ್ಕುಗಳ ಹೋರಾಟಗಾರಾರ ಮತ್ತು ಮೃತ ವಿಧ್ಯಾರ್ಥಿಗಳ ಕುಟುಂಬಿಕರಿಗೆ ಇದು ಅವರ ಸಂಶಯಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ.
ಈ ಹಿಂದೆಯೇ ಮೃತ ಆತಿಫ್ ಮತ್ತು ಸಾಜಿದ್ ಕುಟುಂಬಿಕರು ಮೃತ ದೇಹದ ಮೇಲೆ ತೀವ್ರ ರೀತಿಯ ಹಲ್ಲೆಯ ಗಾಯಗಳನ್ನು ಕಂಡಿದ್ದಾಗಿ ತಿಳಿಸಿದ್ದರು. ಈಗ ಮರಣೋತ್ತರ ಪರೀಕ್ಷಾ ವರದಿ ಅದನ್ನು ಧೃಡಪಡಿಸಿದೆ. ಈ ವಿಧ್ಯಾರ್ಥಿಗಳು ಭಯೋತ್ಪಾದಕರೆಂದು ಎನ್ಕೌಂಟರ್ ಮಾಡಿದ್ದರೆ ಇವರ ಮೇಲೆ ಅದಕ್ಕೂ ಮೊದಲು ಹಲ್ಲೆ ನಡೆಸಿದ ಉದ್ದೇಶವಾದರೂ ಏನು ಎಂಬುವುದು ಇನ್ನೂ ನಿಗೂಢವಾಗಿದೆ.
ದೆಹಲಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಹಾಗೂ ಸಾಮಾಜಿಕ ಕಾರ್ಯಕರ್ತ ಅಫ್ರೋಜ್ ಆಲಂ ಸಾಹಿಲ್ ರವರು ಮೃತ ಆತಿಫ್ ಅಮೀನ್ ಮತ್ತು ಮಹಮ್ಮದ್ ಸಾಜಿದ್ ರ ಮರಣೋತ್ತರ ವರದಿ ನೀಡುವಂತೆ ಕೋರಿ ವಿವಿಧ ಇಲಾಖೆಗಳಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಯ ಫಲವಾಗಿ ನಿರಂತರ ಹೋರಾಟದ ಬಳಿಕ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಈ ವರದಿ ಲಭ್ಯವಾಗಿದೆ.
No comments:
Post a Comment