VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 24, 2010

ಜಯಕಿರಣದ ಹೆಸರು ಪ್ರಸ್ತಾಪಿಸಿಯೇ ಇಲ್ಲ: ಮುಸ್ಲಿಯಾರ್‌


ಉಪ್ಪಿನಂಗಡಿ: ಸದಾ ಸುಳ್ಳು ಸುದ್ದಿಗಳನ್ನೇ ಪ್ರಕಟಿಸಿ ಓದುಗರನ್ನು ದಾರಿ ತಪ್ಪಿಸುವ ಕರಾವಳಿ ಅಲೆ ಎಂಬ ಸಂಜೆ ಪತ್ರಿಕೆಯ ಬಣ್ಣ ಮತ್ತೊಮ್ಮೆ ಬಯಲಾಗಿದೆ. ಇತ್ತೀ ಚೆಗಷ್ಟೇ ಜಯಕಿರಣದ ಮೇಲಿನ ದಾಳಿಗೆ ತನ್ನದೇ ವ್ಯಾಖ್ಯಾನ ನೀಡಿ ಅಲ್ಪಸಂಖ್ಯಾತರು ಪತ್ರಿಕೆಯ ಮೇಲಿಟ್ಟಿರುವ ನಂಬಿಕೆಯನ್ನು ಬುಡಸಮೇತ ಅಲುಗಾಡಿಸುವ ವ್ಯರ್ಥ ಪ್ರಯತ್ನದ ಮುಂದುವರಿದ ಭಾಗವಾಗಿ ಮುಸ್ಲಿಯಾರ್‌ ಒಬ್ಬರು ಜಯಕಿರಣ ವಿರುದ್ಧ ಕಿಡಿಕಾರಿದ್ದಾರೆಂದು ಸುಳ್ಳು ಸುದ್ದಿ ಪ್ರಕಟಿಸಿದೆ. ಈ ವರದಿ ಸಂಪೂರ್ಣ ಸುಳ್ಳು ಎಂದಿರುವ ಉಮ್ಮರ್‌ ಕುಂಞ ಮುಸ್ಲಿಯಾರ್‌ ಅವರು ತಾನು ಜಯಕಿರಣ ಪತ್ರಿಕೆಯ ವಿರುದ್ಧ ಮಾತಾ ಡಿಯೇ ಇಲ್ಲ ಎಂದಿದ್ದಾರೆ. ಇದನ್ನು ಸಾಕ್ಷ್ಯ ಸಮೇತ ಸಾಬೀತು ಪಡಿಸಲು ಕಾರ್ಯಕ್ರಮದ ವಿಡಿಯೋ ಸಂಗ್ರಹವನ್ನು ಪರಿಶೀಲಿಸಬಹುದು ಎಂದಿದ್ದಾರೆ.
ಕುಂಬ್ರ ಎನ್‌.ಎಫ್‌.ಸಿ ಸಂಘಟನೆ ಆಯೋಜಿಸಿದ್ದ ಸೌಹಾರ್ದ ಸಮ್ಮೇಳನ ಕಾರ್ಯಕ್ರಮದಲ್ಲಿ ಸೌಹಾರ್ದ ವೇದಿಕೆಯ ಸಂಘ ಟಕರಾದ ಉಮ್ಮರ್‌ ಕುಂಞ ಮುಸ್ಲಿಯಾರ್‌ ಅವರ ಭಾಷಣವಿತ್ತು. ಈ ಸಂದರ್ಭದಲ್ಲಿ ಅವರು ಜಯಕಿರಣ ಪತ್ರಿಕೆಯ ವಿರುದ್ಧ ಕಿಡಿಕಾರಿದ್ದಾರೆ ಎಂದು ಸದಾ ಸುಳ್ಳನ್ನೇ ಬರೆದು ಓದುಗರ ಹಾದಿ ತಪ್ಪಿಸುತ್ತಿರುವ ಕರಾವಳಿ ಅಲೆ ಸುಳ್ಳು ವರದಿ ಪ್ರಕಟ ಮಾಡಿತ್ತು. ಈ ವರದಿಯ ವಿರುದ್ಧ ಮುಸ್ಲಿಮ್‌ ಧಾರ್ಮಿಕ ನಾಯಕರು ಕಿಡಿಕಾರಿದ್ದಾರೆ. ಕರಾವಳಿ ಅಲೆಯದ್ದು ತೀರಾ ಅತಿಯಾಯಿತು. ಹೇಳದೆ ಇರುವ ಮಾತನ್ನು ಕಪೋಲಕಲ್ಪಿತವಾಗಿ ಬರೆದು ತನ್ನ ನಿಜ ಬಣ್ಣವನ್ನು ಕರಾವಳಿ ಅಲೆ ಬಯಲು ಮಾಡಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿ ಬಂದಿದೆ.ಉಪ್ಪಿನಂಗಡಿಯ ಜಯಕಿರಣ ಪ್ರತಿನಿಧಿಯೊಂದಿಗೆ ಮಾತನಾಡಿದ ಉಮ್ಮರ್‌ ಕುಂಞ ಮುಸ್ಲಿಯಾರ್‌ ಅವರು `ಕರಾವಳಿ ಅಲೆ ಪತ್ರಿಕೆಯ ವರದಿ ನೋಡಿದಾಗಲೇ ಅದು ಕಟ್ಟು ಕಥೆ ಎಂದು ಸಾಬೀತಾಗಿದೆ. ಜಯಕಿರಣ ಪತ್ರಿಕೆಯ ಹೆಸರು ಹೇಳದೆ ಅದೇ ಎಂದು ಭಾಸವಾಗುವಂತೆ ಹೇಳಿದರು ಎಂದು ಬರೆದಿರುವುದೇ ಇದಕ್ಕೆ ಸಾಕ್ಷಿ ಎಂದು ಮುಸ್ಲಿಯಾರ್‌ ಪ್ರತಿಕ್ರಿಯಿಸಿದ್ದಾರೆ.
ಮುಸ್ಲಿಮರನ್ನು ಜಯಕಿರಣದ ವಿರುದ್ಧ ಎತ್ತಿಕಟ್ಟಲು ನಮ್ಮಂಥವರನ್ನು ಕರಾವಳಿ ಅಲೆ ಬಳಸಲು ನೋಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ನಾನು ಕಾರ್ಯಕ್ರಮದಲ್ಲಿ ಏನು ಹೇಳಿದ್ದೇನೆ ಎನ್ನುವುದು ಚಿತ್ರೀಕರಣವಾಗಿದೆ. ಬೇರೆ ಪತ್ರಿಕೆಯವರು ಕೂಡಾ ಇದನ್ನು ಬರೆದಿದ್ದಾರೆ. ಹೀಗಿರುವಾಗ ಕರಾವಳಿ ಅಲೆ ಬರೆದ ವರದಿ ಪತ್ರಿಕೋದ್ಯಮದ ಘನತೆಯನ್ನೇ ಹಾಳು ಮಾಡುವಂಥದ್ದು ಎಂದು ಮುಸ್ಲಿಯಾರ್‌ ಹೇಳಿದ್ದಾರೆ.ಸೌಹಾರ್ದ ಕಾರ್ಯಕ್ರಮದಲ್ಲಿ ತಸ್ಲಿಮಾ ನಸ್ರೀನ್‌ ಇಸ್ಲಾಮ್‌ ಧರ್ಮದ ಬಗ್ಗೆ ಅಧ್ಯಯನ ಮಾಡದೆ ಏನಾದರೂ ಬರೆದಿದ್ದರೆ ಅದು ತಪ್ಪೇ. ಅದಕ್ಕಾಗಿ ನಾವು ಹೊಡೆದಾಡೊಕೊಳ್ಳುವುದು ಸರಿಯಲ್ಲ. ಹಿಂದೂ-ಮುಸ್ಲಿಮ್‌ ಗಲಭೆಯಾದರೆ ಅದಕ್ಕೆ ಧರ್ಮ ಹೊಣೆಯಲ್ಲ, ಅದಕ್ಕೆ ಸಮಾಜದಲ್ಲಿರುವ ಕೆಲ ದುಷ್ಟ ವ್ಯಕ್ತಿಗಳೇ ಹೊಣೆಯಾಗಿರುತ್ತಾರೆ ಎಂದು ಸೌಹಾರ್ದ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.
`ಸಾರ್ವಜನಿಕವಾಗಿ ವಿಡಿಯೋ ಪ್ರದರ್ಶಿಸುತ್ತೇವೆ'
ಪುತ್ತೂರು: ಪುತ್ತೂರಿನ ಗ್ರಾಮೀಣ ಪ್ರದೇಶವಾದ ಕುಂಬ್ರದಲ್ಲಿ ಮಾ. 21ರಂದು ನಡೆದ ಸೌಹಾರ್ದ ಸಮ್ಮೇಳನದಲ್ಲಿ ಯಾವುದೇ ಭಾಷಣಗಾರರಾಗಲಿ, ಅತಿಥಿಗಳಾಗಲಿ, ಸಂಘಟಕರಾಗಲಿ ಯಾವುದೇ ಪತ್ರಿಕೆ ಅಥವಾ ಸಂಘಟನೆಗಳನ್ನು ಉದ್ದೇಶಿಸಿ ಮಾತನಾಡಿಲ್ಲ. ಈ ಬಗ್ಗೆ ತಾ. 23-03-2010ರ ಕರಾವಳಿ ಅಲೆ ಪತ್ರಿಕೆಯಲ್ಲಿ ಬಂದ ಜಯಕಿರಣ ವಿರುದ್ಧ ಮುಸ್ಲಿಯಾರ್‌ ಕಿಡಿ ವರದಿಯು ಸರಿಯಲ್ಲ. ಮಾತ್ರವಲ್ಲ ಈ ಬಗ್ಗೆ ನಮ್ಮಲ್ಲಿ ಸಮ್ಮೇಳನದ ವಿಡಿಯೋ ಚಿತ್ರೀಕರಣವಾಗಿದ್ದು, ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಸಿದ್ಧರಿದ್ದೇವೆ ಎಂದು ಸೌಹಾರ್ದ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಸಾಲ್ಮರ ನೂರುದ್ದೀನ್‌ ಅವರು ತಿಳಿಸಿದ್ದಾರೆ.
ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುವ ನಿಟ್ಟಿನಲ್ಲಿ ಎನ್‌.ಎಫ್‌.ಸಿ. ಕುಂಬ್ರ ಇದರ ಆಶ್ರಯದಲ್ಲಿ ನಡೆದ ಸೌಹಾರ್ದ ಸಮ್ಮೇಳನ ಅಭೂತಪೂರ್ವ ಯಶಸ್ಸನ್ನು ಗಳಿಸಿದ್ದು, ಸಾರ್ವಜನಿಕರಿಂದ, ಜಿಲ್ಲಾಡಳಿತದಿಂದ ಪ್ರಶಂಸೆಯನ್ನು ಪಡಕೊಂಡಿದೆ. ಹೀಗಿರುವಾಗ ಸೌಹಾರ್ದ ಸಮ್ಮೇಳನದಲ್ಲಿ ಮುಖ್ಯ ಭಾಷಣಗಾರರಲ್ಲಿ ಓರ್ವರಾದ ಕರ್ನಾಟಕ ರಾಜ್ಯ ಮತೀಯ ಸೌಹಾರ್ದ ಸಂದೇಶ ವೇದಿಕೆಯ ಮುಖ್ಯ ಸಂಘಟಕ ಉಮ್ಮರ್‌ ಕುಂಞ ಮುಸ್ಲಿಯಾರ್‌, ಬೆಳ್ತಂಗಡಿ ಇವರು ಪ್ರಸ್ತಾಪಿಸಿದ ವಿಚಾರಗಳನ್ನು ತಿರುಚಿ ಬರೆಯಲಾಗಿದ್ದು ಇದು ಸೌಹಾರ್ದವನ್ನು ಕೆಡಿಸುವ ಹುನ್ನಾರವಾಗಿದೆ. ಈ ಬಗ್ಗೆ ಕರಾವಳಿ ಅಲೆಯು ಸಾರ್ವಜನಿಕರಿಗೆ ನೈಜ ವಿಷಯವನ್ನು ತಿಳಿಸಬೇಕಾಗಿದೆ ಎಂದು ನ್ಯಾಯವಾದಿ, ನೋಟರಿ, ಮುಸ್ಲಿಮ್‌ ಸೆಂಟ್ರಲ್‌ ಕಮಿಟಿಯ, ಅಲ್‌ ಇಂಡಿಯಾ ಮಿಲ್ಲಿಕೌನ್ಸಿಲ್‌ನ ಕಾನೂನು ಸಲಹೆಗಾರ, ಮುಸ್ಲಿಮ್‌ ಯೂತ್‌ ಕೌನ್ಸಿಲ್‌ ಹಾಗೂ ಪುತ್ತೂರು ತಾಲೂಕು ಅಹಿಂದದ ಅಧ್ಯಕ್ಷರಾದ ಸಾಲ್ಮರ ನೂರುದ್ದೀನ್‌ ಸ್ಪಷ್ಟಪಡಿಸಿದ್ದಾರೆ.
ಸಾಲ್ಮರ ನೂರುದ್ದೀನ್‌ ಅವರ ಮೊಬೈಲ್‌ ನಂಬರ್‌: 9448124100
ಅಂಥ ವರದಿಯೇ ಬರೆದಿಲ್ಲ: ಅಲೆ ವರದಿಗಾರ
`ನಾನು ಅಂಥ ವರದಿಯೇ ಕಳಿಸಿಲ್ಲ ಎಂದು ಕರಾವಳಿ ಅಲೆಯ ಪುತ್ತೂರು ವರದಿಗಾರ ಸಿದ್ದಿಕ್‌ ಕುಂಬ್ರ ಪತ್ರಿಕೆಗೆ ತಿಳಿಸಿದ್ದಾರೆ. ನಾನು ಬರೆದ ವರದಿ ತಿರುಚಲಾಗಿದೆ ಎಂದು ಸಿದ್ದಿಕ್‌ ತಿಳಿಸಿದ್ದಾರೆ. (ಕರಾವಳಿ ಅಲೆ ವರದಿಗಾರನ ಮೊಬೈಲ್‌ ನಂಬರ್‌ ಕೂಡಾ ಪ್ರಕಟಿಲಾಗಿದ್ದು ಓದುಗರು ಸತ್ಯಾಸತ್ಯತೆಯನ್ನು ತಿಳಿಯಬಹುದು)
ನಾನು ಪತ್ರಿಕೆಗೆ ಸೇರಿ ಕೇವಲ ಆರು ದಿನಗಳಾಗಿವೆೆ. ನನ್ನ ಊರಿನ ಕಾರ್ಯಕ್ರಮ ಎಂಬ ಅಭಿಮಾನದಿಂದ ಪತ್ರಿಕೆ ವರದಿ ಕಳಿಸಿದ್ದೆ. ಅದರಲ್ಲಿ ಪತ್ರಿಕೆಯಲ್ಲಿ ಪ್ರಕಟವಾದಂತಹ ಯಾವುದೇ ವಿವರ ಇರಲಿಲ್ಲ ಎಂದು ಸಿದ್ದಿಕ್‌ ಜಯಕಿರಣ ಪತ್ರಿಕೆಯ ವರದಿಗಾರನಲ್ಲಿ ತಿಳಿಸಿದ್ದಾರೆ.(ಸಿದ್ದಿಕ್‌ ಅವರ ಮೊಬೈಲ್‌ ನಂಬರ್‌: 9480403241)

-jayakirana

No comments: