ಗೋಹತ್ಯೆ ನಿಷೇಧ: ಬಿಜೆಪಿಯಿಂದಾದಿತೇ ಮಹಾ ಪ್ರಮಾದ?
ಸುದ್ದಿ ವಿಶ್ಲೇಷಣೆ
ರಾಜ್ಯದಲ್ಲಿ ಅದೂ ದಕ್ಷಿಣ ಭಾರತದಲ್ಲೇ ಪ್ರಥಮದ್ದಾಗಿ ಕರ್ನಾಟಕದಲ್ಲಿ ಭಾರತೀಯ ಜನತಾಪಾರ್ಟಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಒಂದಲ್ಲೊಂದು ವಿವಾದ, ಹಗರಣ, ಪ್ರಮಾದಗಳ ಬಾಲಗ್ರಹ ಪೀಡೆಯಿಂದ ನರಳುತ್ತಲೇ ದಿನದೂಡುತ್ತಾ ಬರುತ್ತಿದೆ.
ಅಧಿಕಾರ ವಹಿಸಿಕೊಂಡ ಮರುದಿನವೇ ನಡೆದ ರೈತರ ಮೇಲಿನ ಗೋಲಿಬಾರ್, ನಂತರದ ಆಪರೇಶನ್ ಕಮಲ ಕರಾಮತ್ತು, ಬಳಿಕದ ರೆಡ್ಡಿ ಸಹೋದರ ಗಣಿಗಾರಿಕೆ ಹಿನೆ್ನಲೆಯ ಗುಂಪುಗಾರಿಕೆ, ರೆಸಾರ್ಟ್ ರಾಜಕೀಯ, ಬರಪೀಡಿತ ಜನರ ನೆರವಿಗೆ ಬಾರದೆ ಮೊಸಳೆ ಕಣ್ಣೀರು ಹಾಕಿದ ಆರೋ, ಮಠ ಮಂದಿರ ಕವಡೆ ಜ್ಯೋತಿಷ್ಯ ಸ್ವಾಮೀಜಿಗಳ ಒಡನಾಟ, ಪರಿಷತ್ ಚುನಾವಣೆಯಲ್ಲಿನ ಸೋಲು ನೈಸ್ ಹಗರಣ ಮುಂತಾದ ವಿವಾದಗಳಿಂದ ಬಿಜೆಪಿ ಎಂಬ ರಾಷ್ಟ್ರನಿಷ್ಠ ಪಕ್ಷದ ಇಮೇಜಿಗೆ ರೇಣುಕಾಚಾರ್ಯರ ಮತ್ತು ನರ್ಸ್ ಜಯಲಕ್ಷ್ಮಿ ಲವ್ ಸ್ಟೋರಿ ಮತ್ತು ಸುಧಾಕರ್ ಮೇಲಿನ ಬ್ಯಾಂಕ್‌ಕರಪ್ಟ್ ಆಪಾದನೆಗಳು. ಡಾಮರಿನ ಅಭಿಷೇಕವನ್ನೇ ಮಾಡಿಬಿಟ್ಟಿದ್ದವು. ಇದೀಗ ಎಲ್ಲದ್ದಕ್ಕೂ ಮುಕುಟವಿಟ್ಟಂತೆ ಒಂದಲ್ಲೊಂದು ದಿನ ತನ್ನ ಬುರುಡೆಗೆ ಬಿಸಿ ನೀರು ಕಾಯಿಸಬಹುದೆನ್ನುವ ಗೋಹತ್ಯೆ ನಿಷೇಧ ಕಾಯಿದೆಯ ಮಂಡನೆ ಅನುಷ್ಠಾನ ತೀವ್ರ ವಿವಾದದ ಅಲೆಯನ್ನು ರಾಜ್ಯದ ಜನತೆಯ ಒಂದು ವರ್ಗದಿಂದ ಎದುರಿಸಬೇಕಾಗಿದೆ.
ಕೆಲವೇ ತಿಂಗಳ ಹಿಂದೆ ಪ್ರಸ್ತಾವಿತ ಮಸೂದೆಯನ್ನು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ತುರಾತುರಿಯಿಂದ ವಿಧಾನಸಭೆಯಲ್ಲಿ ಮಂಡಿಸಲು ಹೊರಟಾಗ ಎದುರಾದ ತೀವ್ರ ಪ್ರತಿರೋಧದಿಂದಾಗಿ ಕೊನೇ ಘಳಿಗೆಯಲ್ಲಿ ಹಠತ್ತಾಗಿ ವಾಪಾಸು ಪಡೆದುಕೊಂಡಿದ್ದರು. ಆದರೆ ಅದೇನು ಮಾಯ ನಡೆಯಿತೇ ಗೊತ್ತಿಲ್ಲ, ಏಕಾಏಕಿ ಈ ಮಸೂದೆ `ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯೊಳಗಿಂದ ಎಂಬಂತೆ ಮತ್ತೆ ವಕ್ಕರಿಸಿದೆ. ವಿವಾದದ ಅಲೆ ಎಬ್ಬಿಸಿದೆ. ಅಷ್ಟಕ್ಕೂ ಈ ಮಸೂದೆ ಏನು ಹೇಳುತ್ತದೆ ಎಂದರೆ; ದನವನ್ನು ಕೊಲ್ಲುವು ದಂತಿರಲಿ, ಯಾರಾದರೂ ಎಲ್ಲೋ ಕೊಂದು ತನ್ನ `ಪ್ರೀತಿಪಾತ್ರರಿಗೆಂದು ಒಂದರ್ಥ ಕೆಜಿ ಮಾಂಸಕೊಟ್ಟು ಮರುಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ `ಆ ಮನೆಯಲ್ಲಿ ದನದ ಮಾಂಸದ ದಾಸ್ತಾನು ಇದೆ ಎಂದರೂ ಸಾಕು; ಮನೆಯಾತ ಜೈಲು ಸೇರಬೇಕಾಗುತ್ತದೆ. ಈ ಮೊದಲು (ಈ ಮಸೂದೆ ಜಾರಿಗೆ ಬರುವ ಮೊದಲು) ರಾಜ್ಯದಲ್ಲಿ 1964ರ ಗೋಹತ್ಯೆ ನಿಯಂತ್ರಣ ಕಾಯಿದೆ ಜಾರಿಯಲ್ಲಿದ್ದು ಈ ಕಾಯಿದೆಯನ್ವಯ ಹಾಲು ಕೊಡುವ ದನಗಳಿಗೆ ಈ ನಿಷೇಧ ವಿಧಿಸಲ್ಪಟ್ಟಿದ್ದು ಗೊಡ್ಡು ಹಸುಗಳಿಗೆ ಇದು ಅನ್ವಯಿಸುವುದಿಲ್ಲ. ಅದಲ್ಲದೆ ನಿಷೇಧವನ್ನೇ (ನಿಯಂತ್ರಣದ ಬದಲು) ಜಾರಿಗೆ ತಂದರೆ ದೇಶದ ನಾಗರಿಕನ ಆಹಾರ ಮತ್ತು ಉದ್ಯೋ ಗದ ಹಕ್ಕಿಗೂ ಚ್ಯುತಿ ತಂದಂತಾಗುತ್ತದೆ ಎಂದು ದೇಶದ ಸುಪ್ರೀಂಕೋರ್ಟ್ ಒಂದು ಪ್ರಕರಣದಲ್ಲಿ ಈ ಹಿಂದೆ ತೀರ್ಪು ನೀಡಿತ್ತು. ಈ ಹಿನೆ್ನಲೆಯಲ್ಲಿ ಪರಾಮರ್ಶಿಸಿದರೆ ರಾಜ್ಯ ಸರಕಾರ ಈಗ ಹೊಡಿಸಿರುವ ಮಸೂದೆ ರಾಜ್ಯದ ಆಡಳಿತ ವ್ಯವಸ್ಥೆಯನ್ನೇ ಒಂದಿಷ್ಟು ಸಮಯ ಅಡಕತ್ತರಿಯಲ್ಲಿ ಕುಣಿಸುವ ಸಾಧ್ಯತೆಗಳಿವೆ ಎಂದು ದೇಶದ ಖ್ಯಾತ ವಕೀಲರೇ ಅಭಿಪ್ರಾಯ ವ್ಯಕ್ತಪಡಿಸಿ ದ್ದಾರೆ. ವಿಧೇಯಕವಿನ್ನೂ ಮೇಲ್ಮನವಿ ಯಲ್ಲಿ ಅನುಮೋದನೆ ಪಡೆದಿರುವು ದರಿಂದ ಈ ಬಗೆಗಿನ ವಿವಾದ ಭಾರೀ ಕಾವೇರುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ಯಾವುದೇ ಒಂದು ಪ್ರಾಣಿಯ ಹತ್ಯೆ ಅಥವಾ ವಧೆ ಎಂಬುದು ಸಮರ್ಥನೀಯವಲ್ಲವೆಂಬುದೇನೋ ಸರಿ. ಆದರೆ ಎಲ್ಲಾ ಜೀವಿಗಳಂತೆ ದನ ವನ್ನು ಗ್ರಹಿಸಬೇಕಲ್ಲದೆ ದಿನಕ್ಕೊಂದು ವಿಶೇಷ ಕಾಯಿದೆ ರಚಿಸಿ ಆ ಮೂಲಕ ರಾಜಕೀಯ ವಿವಾದ ಸೃಷ್ಠಿಸುತ್ತಿರುವುದು ಅಷ್ಟೇನೂ ಸರಿಯೆನಿಸದು. ದನವನ್ನು ನಮ್ಮ ಒಡನಾಡಿ ಎಂದು ತಿಳಿಯುವು ದಾದರೆ ಅದರಿಂದ ನಮಗೆ ಸಿಗುವ ಉಪಯೋಗಗಳ ಬಳಿಕ ಅದರ ವೃದ್ಧಾ ಪ್ಯದಲ್ಲಿ ಅದನ್ನೇನು ಮಾಡಬೇಕು ? ಎಂಬುದರ ಬಗ್ಗೆಯೂ ಸರಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕು. ಎಲ್ಲೋ ಒಂದೆರಡು ಮಠಗಳು ಗೋ ಶಾಲೆಯ ಹೆಸರಿನಲ್ಲಿ ಎಕರೆಗಟ್ಟಲೆ ಜಮೀನನ್ನು ಪಡೆದುಕೊಂಡು, ಹಿಂದೂಪರ ಸಂಘಟನೆಗಳು ಮುಸ್ಲಿಮರಿಂದ ಕಾದು ನಿಂತು ವಶಪಡಿಸಿ ಕೊಳ್ಳುವ ಕೆಲವೇ ಜಾನುವಾರುಗಳನ್ನು ಸಾಕುವ ನಾಟಕ ನಿಲ್ಲಬೇಕು.
ಮನುಷ್ಯ ಅನಾದಿಕಾಲದಿಂದಲೂ ಮಾಂಸಾಹಾರಿ ಎಂಬುದನ್ನು ಸ್ವತಃ ಉಡುಪಿ ಮಠದ ಪೇಜಾವರ ಶ್ರೀಗಳೇ ಧಾರ್ಮಿಕ ಸಮಾರಂಭದಲ್ಲಿ ಒಪ್ಪಿಕೊಂಡು ಕ್ರಮೇಣ ಆತ ಹೇಗೆ ಸಸ್ಯಹಾರಿಯಾಗಿ(ಒಂದು ವರ್ಗ) ಬದಲಾದ ಎಂಬುದನ್ನು ವಿವರಿಸಿ ದ್ದಾರೆ. ಇಲಿ, ಮೊಲ, ಅಳಿಲು, ಹೆಗ್ಗಣ ಗಳಂತೆ ಬಾಚಿ ಹಲ್ಲುಗಳಿರದ ಮನುಷ್ಯನಿಗೆ ದವಾಡೆಯಲ್ಲಿರುವ ಗ್ರೈಂಡಿಂಗ್ ಟೀತ್(ಅರಗುವ ದಂತ) ಗಳೇ ಇದಕ್ಕೆ ಆಧಾರವೆಂದಿದ್ದಾರೆ. ಪುರಾಣದಲ್ಲಿ ನಡೆದಿದ್ದ ಅಶ್ವಮೇಧ, ಕುದುರೆ ಹತ್ಯೆ ಯಾಗ, ಆಯುತ ಚಂಡಿಕಾಯಾಗ (ಕೋಲಬಲಿ)ಗಳಿಗೆ ಮುಂತಾದವುಗಳಲ್ಲಿಯೂ ಸಂಬಂಧಿತ ಪ್ರಾಣಿಗಳ ರಕ್ತದರ್ಪಣ ನಡೆಸಿ ಬಳಿಕ ಅವುಗಳನ್ನುಕೊಂದು ತಿನ್ನುವ ಪರಿ ಪಾಠವಿತ್ತೆನ್ನುವುದರಲ್ಲಿ ಉಲ್ಲೇಖಾರ್ಹ ವಾಗುತ್ತದೆ.
ಯಾವುದೇ ಒಂದು ಮಾಂಸಾ ಹಾರ ಅಥವಾ ಸಸ್ಯಹಾರವನ್ನು ತಿನ್ನುವುದು, ಬಿಡುವುದು ವ್ಯಕ್ತಿಯೊ ಬ್ಬರಿಗೆ ಬಿಟ್ಟ ವಿಚಾರ. ಬಸಳೆ ಸೊಪ್ಪು ತಿನ್ನದ ಬ್ರಾಹ್ಮಣನೊಬ್ಬ ಬೊಂಡಾಸ್ ಮೀನು ತಿನ್ನಬಹುದು. ಹಂದಿ ತಿನ್ನದ ಮುಸ್ಲಿಮನೋರ್ವ ದನದ ಮಾಂಸ ತಿನ್ನಬಹುದು. ಹಂದಿ, ದನ, ಹರಿವೆ, ತೊಗರಿಸಾರು ಎಲ್ಲವನ್ನೂ ತಿನ್ನು ವವರು ಎಲ್ಲಾ ಧರ್ಮದಲ್ಲೂ ಇರಬ ಹುದು ಅಂದ ಮಾತ್ರಕ್ಕೆ `ನನಗಿಷ್ಟವಿಲ್ಲ; ನಾನು ತಿನ್ನುವುದಿಲ್ಲ ಹಾಗಾಗಿ ನೀನೂ ಇದನ್ನು ತಿನ್ನಬಾರದು ಎಂದು ಫರ್ಮಾನು ಹೊರಡಿಸುವ ಹಕ್ಕು ಯಾರಿಗೂ ಇಲ್ಲ ! ಇಷ್ಟಕ್ಕೂ ಯಾವುದೇ ಮಾಂಸದ ಕಾಪಿರೈಟನ್ನು ಯಾವುದೇ ಧರ್ಮಿಯರು ಪಡೆದು ಕೊಂಡಿಲ್ಲ. ತನಗೆ ಒಗ್ಗಿದ್ದನ್ನು ತಾನು ಅರಗಿಸಿಕೊಳ್ಳಬಹುದಾದನ್ನು ತಿನ್ನುವ ಹಕ್ಕು ನಾಗರಿಕನಿಗೆ ಇದ್ದೇ ಇದೆ. ಅದು ಕಬ್ಬಿಣವಾದರೂ ಸರಿ!

-jayakirana
No comments:
Post a Comment