VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 3, 2010

ಕುಚೋದ್ಯದ ಲೇಖನ : ಪಿ.ಚಿದಂಬರಂ


ನವದೆಹಲಿ: ಬಾಂಗ್ಲಾದೇಶದ ವಿವಾದಾತ್ಮಕ ಬರಹಗಾರ್ತಿ ತಸ್ಲೀಮಾ ನಸ್ರೀನ್ ಅವರ ಬರಹವೊಂದರ ಅನುವಾದವು ಕರ್ನಾಟಕದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹಸಚಿವ ಪಿ ಚಿದಂಬರಂ ಅವರು ‘ಈ ಘಟನೆಯು ತಸ್ಲಿಮಾ ಅವರ ಭಾರತೀಯ ವೀಸಾ ಅವಧಿ ವಿಸ್ತರಣೆಗೆ ತೊಡಕುಂಟು ಮಾಡುವುದಿಲ್ಲ’ ಎಂದು ಸ್ಪಷ್ಟ ಪಡಿಸಿದ್ದಾರೆ.

“ಕರ್ನಾಟಕದಲ್ಲಿ ಕನ್ನಡ ಪತ್ರಿಕೆಯೊಂದು ತಸ್ಲೀಮಾ ಅವರು ಬರೆದಿದ್ದಾರೆಂಬ ಲೇಖನದ ಕನ್ನಡಾನುವಾದವೇ ಸರಿ ಇಲ್ಲ. ಇದು ದುರದೃಷ್ಟಕರ ಮತ್ತು ಕುಚೋದ್ಯದಿಂದ ಕೂಡಿದೆ” ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ.

ಈ ಲೇಖನದಿಂದಾಗಿ ಉದ್ರಿಕ್ತಗೊಂಡ ಒಂದು ಸಮುದಾಯದ ಜನರು ಹಿಂಸಾಚಾರಕ್ಕಿಳಿದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ತಹಬದಿಗೆ ತರುವುದಕ್ಕಾಗಿ ಕರ್ನಾಟಕಕ್ಕೆ ಅರೆಸೇನಾಪಡೆಯನ್ನು ಕಳುಹಿಸಿ ಕೊಟ್ಟಿದ್ದೇವೆ ಎಂದೂ ಚಿದಂಬರಂ ಹೇಳಿದ್ದಾರೆ.

ತಾವು ಸೋಮವಾರದಿಂದ ಈವರೆಗೆ ಹಲವಾರು ಸಲ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ್ದು, ಗಲಭೆಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ರಾಜ್ಯಸರ್ಕಾರ ನಡೆಸುತ್ತಿರುವ ಪ್ರಯತ್ನಕ್ಕೆ ಕೈಜೋಡಿಸಿರುವುದಾಗಿಯೂ ತಿಳಿಸಿದ್ದಾರೆ.

ಈ ಘಟನೆ ಕುರಿತು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮ ಕೈಗೊಂಡಿದೆ ಎಂಬುದನ್ನು ತಿಳಿದುಕೊಳ್ಳಲು ತಾವು ಉತ್ಸುಕರಾಗಿದ್ದೇವೆ ಎಂದಿರುವ ಚಿದಂಬರಂ ‘ಕರ್ನಾಟಕದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ರಾಜ್ಯಪಾಲರು ಮುಸ್ಲಿಂ ಮುಖಂಡರ ಸಭೆ ಕರೆದು ಚರ್ಚಿಸಿದ್ದಾರೆ’ ಎಂದೂ ತಿಳಿಸಿದ್ದಾರೆ.

No comments: