VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 3, 2010

ಸಿಎಂಗೇ ಕೈ ಕೊಟ್ಟ ವಿದ್ಯುತ್...

ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕಿ ನಿಲುವಳಿ ಸೂಚನೆ ಮಂಡಿಸಿದ ಕೆಲ ನಿಮಿಷಗಳಲ್ಲೇ ದೀಪಗಳು ಆರಿ ಹೋದುದು ಆಡಳಿತ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿತು.

ಬೆಂಗಳೂರು: ವಿದ್ಯುತ್ ಲೋಡ್ ಶೆಡ್ಡಿಂಗ್ ಕಾಟ ಮಂಗಳವಾರ ವಿಧಾನಮಂಡಲದ ಉಭಯ ಸದನಗಳನ್ನೂ ಬಿಡಲಿಲ್ಲ.
ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆ ನೀಗಿಸಲು ಕೈಗೊಂಡ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ವಿಧಾನಸಭೆಯಲ್ಲಿ ದೀರ್ಘ ಉತ್ತರ ನೀಡುತ್ತಿದ್ದಾಗಲೇ ವಿದ್ಯುತ್ ಕೈಕೊಟ್ಟಿತು. ಇದರಿಂದ ಕೆಲಹೊತ್ತು ಸದನ ಕತ್ತಲಲ್ಲಿ ಮುಳುಗ ಬೇಕಾಯಿತು. ಆಗ ಪ್ರತಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ಶೇಮ್... ಶೇಮ್.. ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಮಾತನಾಡಿ, ‘ನೋಡಿ ನೀವೆಲ್ಲ ಹೇಳುವುದು ಸುಳ್ಳು ಎನ್ನುವುದು ಈಗ ಸಾಬೀತಾಯಿತು. ಹೇಳುವುದೊಂದು ಮಾಡುವುದು ಮತ್ತೊಂದು’ ಎಂದು ಟೀಕಿಸಿದರು.

ಏನು ಮಾಡುವುದು ಸಿದ್ದ ರಾಮಣ್ಣ, ‘ಅಲ್ಲಿಯೂ ಎಲ್ಲೋ (ವಿದ್ಯುತ್ ತೆಗೆಯುವ ಕಡೆ) ರೇವಣ್ಣನ ಕಡೆಯವರು ಇರ ಬಹುದು. ಹೀಗಾಗಿ ವಿದ್ಯುತ್ ಕೈಕೊಟ್ಟಿದೆ’ ಎಂದು ಮುಖ್ಯಮಂತ್ರಿ ಹಾಸ್ಯ ಮಾಡಿದರು.ಅದಕ್ಕೆ ಸಿದ್ದ ರಾಮಯ್ಯ, ‘ನಿಮಗೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲವೇ ಎಂದಾಗ, ಎಷ್ಟೇ ಹಿಡಿತ ಇದ್ದರೂ ರೇವಣ್ಣನ ಪ್ರಭಾವ ಇದ್ದೇ ಇರುತ್ತದೆ’ ಎಂದರು.

ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕಿ ನಿಲುವಳಿ ಸೂಚನೆ ಮಂಡಿಸಿದ ಕೆಲ ನಿಮಿಷಗಳಲ್ಲೇ ದೀಪಗಳು ಆರಿ ಹೋದುದು ಆಡಳಿತ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿತು.

ಮಧ್ಯಾಹ್ನ ಊಟದ ವಿರಾಮದ ಬಳಿಕ ವಿರೋಧ ಪಕ್ಷದ ನಾಯಕಿ ಮೋಟಮ್ಮ ವಿದ್ಯುತ್ ಕೊರತೆಯ ಬಗ್ಗೆ ನಿಲುವಳಿ ಸೂಚನೆ ಮಂಡಿಸಿ ದರು. ಅವರ ಮಾತು ಮುಗಿದ ಕೆಲ ನಿಮಿಷಗಳಲ್ಲೇ ವಿದ್ಯುತ್ ಕಣ್ಮರೆಯಾ ಯಿತು.

ಕೆಲ ಸೆಕೆಂಡುಗಳ ಕಾಲ ಸದನ ಕತ್ತಲಿಗೆ ಜಾರಿತು. ಪರ್ಯಾಯ ಮೂಲದಿಂದ ವಿದ್ಯುತ್ ಪೂರೈಕೆ ಆರಂಭವಾಯಿತು. ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಪೂರೈಕೆ ಇರಲಿಲ್ಲ.

No comments: