

wd
ಚಂಡೀಗಡ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಚಕ ಜಯ ದಾಖಲಿಸಿದ ನಂತರ ಹೊಸ ಹುರುಪಿನಲ್ಲಿರುವ ಪ್ರೀತಿ ಜಿಂಟಾ ಸಹ ಮಾಲೀಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಇದೀಗ ಮತ್ತೊಂದು ಶುಭ ಸುದ್ದಿ ಬಂದೊದಗಿದ್ದು, ಗಾಯದಿಂದ ಚೇತರಿಸಿಕೊಂಡಿರುವ ವೇಗದ ಬೌಲರ್ ಬ್ರೆಟ್ ಲೀ ಮತ್ತು ಶಾನ್ ಮಾರ್ಷ್ ತಂಡವನ್ನು ಸೇರಿಕೊಂಡಿದ್ದಾರೆ.
ಕುಮಾರ ಸಂಗಕ್ಕರ ಪಡೆ ತನ್ನ ಮುಂದಿನ ಪಂದ್ಯವನ್ನು ರಾಜಸ್ತಾನ ರಾಯಲ್ಸ್ ವಿರುದ್ಧ ಬುಧವಾರ ಆಡಳಿಲಿಯಲಿದೆ.
ಐಪಿಎಲ್‌ನ ಮಹತ್ತರ ಕೂಟ ಆರಂಭಕ್ಕೂ ಒಂದು ದಿನ ಮೊದಲು ಮತ್ತೆ ಗಾಯದ ಸಮಸ್ಯೆ ಕಾಣಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ಲೀ ಸ್ವದೇಶಕ್ಕೆ ಮರಳಿದ್ದರು. ಆದರೆ ಇದೀಗ ಗಾಯದಿಂದ ಚೇತರಿಕೆ ಪಡೆದಿರುವ ಲೀ ತಂಡವನ್ನು ಸೇರಿಕೊಂಡಿದ್ದಾರೆ.
ಅದೇ ರೀತಿ ಐಪಿಎಲ್‌ನ ಚೊಚ್ಚಲ ಆವೃತ್ತಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಶಾನ್ ಮಾರ್ಷ್ ಕೂಡಾ ಆಗಮನದಿಂದ ತಂಡಕ್ಕೆ ಬ್ಯಾಟಿಂಗ್ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ಮೊದಲ ಮೂರು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ ಪಂಜಾಬ್ ಭಾನುವಾರ ಚೆನ್ನೈ ವಿರುದ್ಧ ನಡೆದ ಪಂದ್ಯವನ್ನು ಸೂಪರ್ ಓವರ್‌ನಲ್ಲಿ ರೋಚಕವಾಗಿ ಜಯಿಸಿತ್ತು.
No comments:
Post a Comment