wd
ಇಸ್ಲಾಮಾಬಾದ್:ಕೊನೆಗೂ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕನನ್ನು ಆಯ್ಕೆ ಮಾಡಲಾಗಿದ್ದು, ಮುಂಬರುವ ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕ್ ತಂಡವನ್ನು ಶಾಹಿದ್ ಆಫ್ರಿದಿ ಮುನ್ನಡೆಸಲಿದ್ದಾರೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.
ಇತ್ತೀಚೆಗಷ್ಟೇ ಮಂಡಳಿಯಿಂದ ಕಠಿಣ ಶಿಸ್ತು ಕ್ರಮಕ್ಕೆ ಗುರಿಯಾಗಿದ್ದ ಆಫ್ರಿದಿ ಮೂರು ದಶಲಕ್ಷ ರೂಪಾಯಿ ದಂಡನೆಗೊಳಗಾಗಿದ್ದರು. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಆಫ್ರಿದಿಯವರ ಮೇಲೆ ಆರು ತಿಂಗಳ ನಿಗಾವಿರಿಸಲು ಕೂಡಾ ಪಿಸಿಬಿ ನಿರ್ಧರಿಸಿತ್ತು.
ಅದೇ ವೇಳೆ ಕಳೆದ ವಾರವಷ್ಟೇ ನಡೆದ ಮಂಡಳಿಯ ಗುತ್ತಿಗೆ ನವೀಕರಣದಲ್ಲಿ ಆಫ್ರಿದಿ ಹೆಸರು ಕಾಣಿಸಿಕೊಂಡಿತ್ತಲ್ಲದೆ ಆದ್ಯತೆ ನೀಡಲಾಗಿತ್ತು.
ಈ ಹಿಂದೆ 15 ಮಂದಿ ಸದಸ್ಯರ ತಂಡವನ್ನು ಪ್ರಕಟಿಸಿದ್ದರೂ ನಾಯಕನನ್ನು ಮಂಡಳಿ ಆಯ್ಕೆ ಮಾಡಿರಲಿಲ್ಲ. ಆದರೆ ಇದೀಗ ಆಫ್ರಿದಿಗೆ ನಾಯಕ ಸ್ಥಾನ ವಹಿಸಿಕೊಡಲಾಗಿದೆ.
ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಏಪ್ರಿಲ್ 30ರಿಂದ ಮೇ 16ರ ವರೆಗೆ ನಡೆಯಲಿದೆ. ಪಾಕಿಸ್ತಾನ ಗ್ರೂಪ್ 'ಎ' ವಿಭಾಗದಲ್ಲಿ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ಜೊತೆ ಕಾಣಿಸಿಕೊಂಡಿದೆ.
No comments:
Post a Comment