VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 25, 2010

ನ್ಯಾಷನಲ್ ವುಮೆನ್ಸ್ ಫ್ರಂಟ್ ರಾಜ್ಯ ಪಧಾಧಿಕಾರಿಗಳ ಆಯ್ಕೆ.

ಮಂಗಳೂರು: ಮಾರ್ಚ್ ೨೫: ನ್ಯಾಷನಲ್ ವುಮೆನ್ಸ್ ಫ್ರಂಟ್ (ಎನ್. ಡಬ್ಲ್ಯೂ . ಎಫ್ ) ವಾರ್ಷಿಕ ಮಹಾಸಭೆಯು ನಗರದ ಶಾಂತಿಕಿರಣ ಹಾಲಿನಲ್ಲಿ ಫೆಬ್ರವರಿ ೨೮ ರಂದು ನಡೆದಿದ್ದು ಸಭೆಯಲ್ಲಿ ರಾಜ್ಯ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕರ್ನಾಟಕದ ವಿವಿಧ ಜಿಲ್ಲೆಗಳ ಪಧಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದು, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಬಲೀಕರಣಕ್ಕೆ ಯತ್ನಿಸುವುದು, ಸಾಮಾಜಿಕ ಸಮಸ್ಯೆಗಳ ಬಗ್ಗೆ ಮಹಿಳೆಯರಲ್ಲಿ ಜಾಗೃತಿಯನ್ನುಂಟು ಮಾಡುವುದು ಮತ್ತು ರಾಷ್ಟ್ರ ಮಟ್ಟದಲ್ಲಿ ಮಹಿಳಾ ಚಳುವಳಿಗಳನ್ನು ಸಮನ್ವಯಗೊಳಿಸುವುದು ನ್ಯಾಷನಲ್ ವುಮೆನ್ಸ್ ಫ್ರಂಟಿನ ಗುರಿಯಾಗಿದೆ.
ಸಭೆಯಲ್ಲಿ ೨೦೧೦ -೨೦೧೧ ನೆ ಸಾಲಿನ ರಾಜ್ಯಾಧ್ಯಕ್ಷರಾಗಿ ಶಾಹಿದಾ.ಎ. ಮಂಗಳೂರು , ಉಪಾಧ್ಯಕ್ಷರಾಗಿ ಗುಲ್ನಾಜ್ ಬೆಂಗಳೂರು , ಪ್ರಧಾನ ಕಾರ್ಯದರ್ಶಿಯಾಗಿ ಅಸ್ಮಾ ಬೆಂಗಳೂರು , ಕಾರ್ಯದರ್ಶಿಯಾಗಿ ಸಯೀದಾ ಮಂಗಳೂರು , ಕೋಶಾಧಿಕಾರಿಯಾಗಿ ಫಾತಿಮಾ ನಸೀಮಾ ಮಂಗಳೂರು ಆಯ್ಕೆಯಾಗಿದ್ದಾರೆ.
ಶಾಹಿದಾ ತಸ್ನೀಮ್ ಮಂಗಳೂರು , ನೆಸೀಮ್ ಫಾತಿಮಾ ಬೆಂಗಳೂರು , ಜರಿನಾ ಉಡುಪಿ , ನೌಶೀರಾ ಮಂಗಳೂರು , ತಸ್ನೀಮ್ ಬೆಂಗಳೂರು , ನಜ್ಮಾ ಉಡುಪಿ ಇವರು ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾದರು.
ಎನ್.ಡಬ್ಲ್ಯೂ.ಎಫ್. ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಹಿದಾ ತಸ್ನೀಮ್ , ಹಾಗೂ ರಾಷ್ಟ್ರೀಯ ಸಮಿತಿ ಸದಸ್ಯರಾದ ರೈಹಾನತ್ ಕೇರಳ ಸಭೆಯ ನೇತೃತ್ವ ವಹಿಸಿದ್ದರು.

No comments: