VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 27, 2010

ಆರ್‌ಎಸ್‌ಎಸ್ ಕೇಂದ್ರ ಕಚೇರಿಯಾಗಿ ವಿಧಾನಸೌಧ



ಧರಂಸಿಂಗ್ ಉವಾಚ
ಬೆಂಗಳೂರು,27 ಮಾರ್ಚ್:ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮುಂದಾಗುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸೌಧವನ್ನು ಆರ್‌ಎಸ್‌ಎಸ್ ಕೇಂದ್ರ ಕಚೇರಿಯನ್ನಾಗಿ ಪರಿವರ್ತಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಕಟುವಾಗಿ ಆರೋಪಿಸಿದ್ದಾರೆ.
ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ ವಿಧಾನಸೌಧ ಈಗ ಆರ್‌ಎಸ್‌ಎಸ್ ಹೆಡ್ ಕ್ವಾರ್ಟರ್ ಆಗಿದೆ. ಆರ್‌ಎಸ್‌ಎಸ್ ಮುಖಂಡರ ಸೂಚನೆಯಂತೆ ಆಡಳಿತ ನಡೆಯುತ್ತಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಯಡಿಯೂರಪ್ಪ ಅವರ ಸರ್ಕಾರ ಅತ್ಯಂತ ಕೋಮುವಾದಿ ಸರ್ಕಾರವಾಗಿದ್ದು, ಇಂತಹ ಸರ್ಕಾರವನ್ನು ನಾನೆಂದೂ ನೋಡಿಲ್ಲ. ಅಲ್ಪಸಂಖ್ಯಾತರನ್ನು ಮಟ್ಟಹಾಕಲು ಗೋ ಹತ್ಯೆ ಮಸೂದೆಯನ್ನು ಜಾರಿಗೆ ತರುವ ಹುನ್ನಾರ ನಡೆಸಿದೆ ಎಂದರು.
ಅಲ್ಲದೇ ಬಿಬಿಎಂಪಿ ಚುನಾವಣೆ ನಂತರ ಯಡಿಯೂರಪ್ಪ ಅವರ ಸರ್ಕಾರ ಬಿದ್ದು ಹೋಗುತ್ತದೆ ಎಂದು ಭವಿಷ್ಯ ನುಡಿದ ಧರಂ, ನಾವು ಬೀಳಿಸಲಿಕ್ಕೆ ಹೋಗಲ್ಲ. ಅವರ ಪಕ್ಷದವರೇ ಬೀಳಿಸುತ್ತಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು.
wd

No comments: